ನೆರೆ ಪರಿಹಾರಕ್ಕಾಗಿ ರಾಜ್ಯ ಸರಕಾರ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ರಾಜ್ಯದಲ್ಲಿ ಪ್ರವಾಹ ಬಂದ ಕಾರಣದಿಂದ ರಾಜ್ಯದಲ್ಲಿ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿತ್ತು.
Buy Mens Shirts Under Rs.599
ಆದರೆ ಈ ವಾದವನ್ನು ಒಪ್ಪದ ಕೇಂದ್ರದ ಅಧಿಕಾರಿಗಳ ತಂಡ, ನೆರೆ ಪರಿಹಾರ ಕುರಿತು ಸಮರ್ಪಕ ವರದಿ ನೀಡಲು ರಾಜ್ಯದ ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ ಪರಿಹಾರ ಹಣ ಬಿಡುಗಡೆ ಅಸಾಧ್ಯ. ಸರಿಯಾದ ವರದಿ ಸಲ್ಲಿಸಿ ಎಂದು ಸೂಚಿಸಲಾಗಿದೆ.
ಜೊತೆಗೆ ರಾಜ್ಯ ಸರಕಾರದ ವರದಿಗೂ ಕೇಂದ್ರ ಅಧ್ಯಯನ ತಂಡ ನೀಡಿರುವ ವರದಿಗೂ ಹೋಲಿಕೆಯಾಗುತ್ತಿಲ್ಲ ಎಂದು ತಗಾದೆ ತೆಗೆದಿರುವ ಕೇಂದ್ರದ ಅಧಿಕಾರಿಗಳು ಪ್ರವಾಹದಿಂದ ಆಗಿರುವ ನಷ್ಟ ಕುರಿತು ಪ್ರಮಾಣೀಕೃತ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮತ್ತೆ ಸೂಚನೆ ನೀಡಲಾಗಿದೆ.
Buy Womens Western Wear Under Rs.799
ಈಗಾಗಲೇ ಪರಿಹಾರ ಹಣ ಬಿಡುಗಡೆಯಲ್ಲಿ ವಿಳಂಭವಾಗಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ವರ್ತನೆಯಿಂದ ಪರಿಹಾರ ಹಣ ಬಿಡುಗಡೆ ಮತ್ತಷ್ಟು ವಿಳಂಭವಾಗಲಿದೆ. ಅಲ್ಲಿಗೆ ಮೋದಿಯ ಮುಖ ನೋಡಿ 25 ಸಂಸದರನ್ನು ಗೆಲ್ಲಿಸಿದ್ದು ಸಾರ್ಥಕವಾಯ್ತು.
ಇನ್ನು ಮೋದಿ ಸರ್ಕಾರದ ಅಧಿಕಾರಿಗಳು ಅದೆಷ್ಟು ಮಾನವೀಯತೆ ಇಲ್ಲದ ಮಂದಿ ಅಂದ್ರೆ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಮನೆಗಳು 5 ಲಕ್ಷ ಬೆಲೆ ಬಾಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಅಧಿಕಾರಿಗಳ ಮನೆ ಕೊಚ್ಚಿ ಹೋಗಿದ್ದರೆ ಅವರಿಗೆ ಅರ್ಥವಾಗುತ್ತಿತ್ತು. ಆದರೆ ಕೊಚ್ಚಿ ಹೋಗಿರುವುದು ಬಡವರ ಮನೆ. ಅವರಿಗೆ 5 ಲಕ್ಷ ಮನೆ ಬಿಡಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಅನ್ನುವುದು ಗೊತ್ತಿಲ್ಲ.
Buy Kids Footwear Under Rs.499
ಸದಾನಂದಗೌಡ, ನಳಿನ್, ಪ್ರತಾಪ್ ಸಿಂಹ ಹೀಗೆ 25 ಸಂಸದರ ಮನೆಗಳು ಕೊಚ್ಚಿ ಹೋಗಿರುತ್ತಿದ್ದರೆ ಅವರಿಗೆ ಸಂಕಷ್ಟ ಗೊತ್ತಾಗುತ್ತಿತ್ತು ಅನ್ನಬೇಡಿ. ಅದೆಷ್ಟು ಸಂಸದರು ಒಂದೇ ಮನೆ ಕಟ್ಟಿಕೊಂಡಿದ್ದಾರೆ ಹೇಳಿ. ಬಹುತೇಕ ಸಂಸದರು ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿದ್ದಾರೆ ಬಿಡಿ.
Discussion about this post