ಸುದೀರ್ಘ ವಿಚಾರಣೆ ನಂತರ ಇಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಇಡಿ ಪರ ವಕೀಲರು ಡಿಕೆಶಿಯವರನ್ನು 14 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ.
2017ರಿಂದ ಇಡಿ ವಿಚಾರಣೆ ನಡೆಸುತ್ತಿದೆ, ಇನ್ನೂ ಕೂಡಾ ಆರೋಪ ಸಾಬೀತು ಮಾಡಲು ಬೇಕಾದ ಸಾಕ್ಷಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಅಂದಿದ್ದಾರೆ.
ಹೀಗಾಗಿ ಕೋರ್ಟ್ ನಲ್ಲಿ ವಾದ ಪ್ರತಿವಾದ ಮುಂದುವರಿದಿದ್ದು ಡಿಕೆಶಿಯವರು ತಿಹಾರ್ ಜೈಲು ಪಾಲಾಗ್ತಾರೋ, ಇಡಿ ವಶಕ್ಕೆ ಹೋಗ್ತಾರೋ ಅನ್ನುವುದೇ ಕುತೂಹಲ.
ಈ ನಡುವೆ ವಾದ ಪ್ರತಿವಾದ ಸಂದರ್ಭದಲ್ಲಿ ಡಿಕೆಶಿ ಕಟಕಟೆಯಲ್ಲಿ ಕೈ ಕಟ್ಟಿ ನಿಂತಿದ್ದಾರೆ ಎಂದು ಟಿವಿ ಮಾಧ್ಯಮ ವರದಿ ಮಾಡಿದೆ.
ಇನ್ನು ವಿಚಾರಣೆ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡಾ ಕೋರ್ಟ್ ಹಾಲ್ ನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
Discussion about this post