ನಿರೀಕ್ಷೆಯಂತೆ ಯಡಿಯೂರಪ್ಪ ವಿಶ್ವಾಸ ಮತ ಗೆಲ್ಲುತ್ತಿದ್ದಂತೆ, ಸ್ಪೀಕರ್ ಸ್ಥಾನದಲ್ಲಿದ್ದ ರಮೇಶ್ ಕುಮಾರ್ ಹಲವು ವಿಧೇಯಕ ಮತ್ತು ಪೂರಕ ಬಜೆಟ್ ಗಳ ಅನುಮೋದನೆ ಕಾರ್ಯವನ್ನು ಮುಕ್ತಾಗೊಳಿಸಿ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು.
ರಾಜೀನಾಮೆ ಸಲ್ಲಿಕೆಗೂ ಮುನ್ನ ಮಾತನಾಡಿದ ಅವರು ಪ್ರಸ್ತುತ ರಾಜಕೀಯ ಸ್ಥಿತಿ ಗತಿಗಳತ್ತ ಬೆಳಕು ಚೆಲ್ಲಿದರು.
ರಮೇಶ್ ಕುಮಾರ್ ಮಾಡಿದ ವಿದಾಯ ಭಾಷಣದ ಒಂದಿಷ್ಟು ಅಂಶಗಳು ಇಲ್ಲಿವೆ.
“ ಮಾನ್ಯ ಸಭಾ ನಾಯಕರೇ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರೇ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿಯವರೇ ಮತ್ತು ಎಲ್ಲಾ ಆತ್ಮೀಯ ಗೌರವನ್ವಿತ ಸದಸ್ಯರುಗಳೇ,
ಕಳೆದ 14 ತಿಂಗಳು 4 ದಿವಸ ಇವತ್ತಿಗೆ ನಾನು ಈ ಸಭೆಯ ಸಭಾಧ್ಯಕ್ಷನಾಗಿ ತಮ್ಮೆಲ್ಲರಿಂದ ಸರ್ವಾನುಮತದಿಂದ ಆಯ್ಕೆಗೊಂಡು ನನ್ನ ಕರ್ತವ್ಯವನ್ನ ಸಂವಿಧಾನಕ್ಕೆ ನಿಷ್ಠೆಯನ್ನು ವ್ಯಕ್ತಪಡಿಸಿ ಆತ್ಮಸಾಕ್ಷಿಗೆ ಅನುಗುಣವಾಗಿ ಸಾರ್ವಜನಿಕರನ್ನು ಕೂಡಾ ಗಮನದಲ್ಲಿಟ್ಟುಕೊಂಡು ಭಯ ಭಕ್ತಿಯಿಂದ ನಾನು ನನ್ನ ಶಕ್ತಿ ಮೀರಿ ನನ್ನ ಕೆಲಸವನ್ನು ನಾನು ಮಾಡಿದ್ದೇನೆ.
ರಾಜಕಾರಣದಲ್ಲಿ ಕೆಲವು ಘಟನೆಗಳು ಸಂಭವಿಸಿದಾಗ ಕೆಲವು ಸಂದರ್ಭಗಳು ಏರ್ಪಟ್ಟಾಗ ನಾವು ಬಹಳ ವಿವೇಚನೆಯಿಂದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೆಜ್ಜೆಯನ್ನು ಇಡಬೇಕಾಗುತ್ತದೆ. ನಾವು ಅಲಂಕರಿಸುವಂತಹ ಸ್ಥಾನಗಳು ಬಹಳ ದೊಡ್ಡವು. ನಾವು ಬಹಳ ಸಣ್ಣವರು. ಸಾಂದಾರ್ಭಿಕವಾಗಿ ನಮಗೆ ಈ ಸ್ಥಾನಗಳನ್ನು ಅಲಂಕರಿಸುವ ಅವಕಾಶ ಜೀವನದಲ್ಲಿ ಒದಗಿ ಬಂದಾಗ ಅತೀ ಜಾಗೃತೆಯಿಂದ ನಾವು ನೋಡಬೇಕಾಗಿರುವುದು ಯಾವ ಕಾರಣಕ್ಕೂ ನಾವು ಇಲ್ಲಿರುವ ವೇಳೆಗೆ ಆ ಸ್ಥಾನಕ್ಕೆ ಅಪಚಾರವಾಗಬಾರದು ಅನ್ನುವ ಅಲೋಚನೆಯಿಂದ ನಾವು ಕೆಲಸ ಮಾಡಬೇಕು.
ನಾನು ನನ್ನ ಶಕ್ತಿ ಮೀರಿ ಈ ಸ್ಥಾನ ಶಾಶ್ವತವಾಗಿ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇರುತ್ತದೆ. ಇದಕ್ಕಿರುವ ಘನತೆ ಗೌರವ ಎಂದೂ ಹೊಡೆತ ತಿನ್ನಬಾರದು ಎಂದು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ.
ಸಾರ್ವತ್ರಿಕ ಚುನಾವಣೆಯ ಬಳಿಕ ಯಡಿಯೂರಪ್ಪವನ್ನು ವಿಶ್ವಾಸ ಮತವನ್ನು ಮಂಡನೆ ಮಾಡಿ ಅವರಿಗೆ ಅನುಕೂಲವಾಗದಿದ್ದ ಮೇಲೆ ಬದಲಾದ ಸನ್ನಿವೇಶದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ನೀಕಾರ ಮಾಡಿದಾಗ ಸಭಾಧ್ಯಕ್ಷರ ಚುನಾವಣೆಯಾಗಬೇಕಾಗಿತ್ತು. ಶ್ರೀಮತಿ ಸೋನಿಯಾ ಗಂಧಿಯವರು ಕಾಂಗ್ರೆಸ್ ಪಕ್ಷದ ನಾಯಕಿ, ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ನನಗೆ ಫೋನ್ ಮಾಡಿ ಸಭಾಧ್ಯಕ್ಷರ ಆಯ್ಕೆಯಾಗಬೇಕಾಗಿದೆ.
Buy 1KG Red Lable Tea Pouch Only Rs.387
ನಮ್ಮ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಅದನ್ನು ಬಿಟ್ಟುಕೊಟ್ಟಿದ್ದಾರೆ,ನಮ್ಮಲ್ಲಿ ಐದಾರು ಜನ ಇದ್ದಾರೆ, ನಿಮ್ಮ ಹೆಸರು ಕೂಡಾ ಇದೆ. ಉಳಿದವರು ತಮ್ಮ ತಮ್ಮದೇ ಕಾರಣಕ್ಕೆ ಏನನ್ನೂ ಹೇಳುತ್ತಿಲ್ಲ. ನಿಮ್ಮ ಅಭಿಪ್ರಾಯ ಏನು ಅಂತಾ ಕೇಳಿದಾಗ ನಾನು ಎಂದೂ ಯಾವುದನ್ನೂ ಕೇಳಿದವನಲ್ಲ ಬಯಸಿದವನಲ್ಲ. ಸಿದ್ದರಾಮಯ್ಯ ಅವರನ್ನು ಒಂದು ಮಾತು ಕೇಳಿ ಅವರು ನನ್ನ ನಾಯಕರು ಅಷ್ಟೇ ಹೇಳಿದೆ.
ಸಿದ್ದರಾಮಯ್ಯನವರು ಈ ಜವಾಬ್ದಾರಿಯನ್ನು ನೀವು ನಡೆಸಿಕೊಡಬೇಕು ಎಂದು ಹೇಳಿದರು. ಹೀಗಾಗಿ ಗೌರವದಿಂದ, ಶ್ರದ್ಧೆಯಿಂದ ಅವರ ಮಾತಿಗೆ ಬೆಲೆ ಕೊಟ್ಟೆ.
Buy Sunsilk Black Shine Shampoo Only Rs.245
ಚುನಾವಣೆ ದಿವಸ ಶಾಸಕಾಂಗ ಪಕ್ಷದ ಸಭೆಯ ಮಧ್ಯೆದಲ್ಲಿ ಮಾನ್ಯ ಯಡಿಯೂರಪ್ಪನವರು ನನಗೆ ಫೋನ್ ಮಾಡಿ ನಾವು ಸುರೇಶ್ ಕುಮಾರ್ ಕೈಯಲ್ಲಿ ನಾಮಪತ್ರ ಸಲ್ಲಿಸಿದ್ದೇವೆ ಆದರೆ ನಾವು ಸರ್ವಾನುಮತದಿಂದ ನಿಮ್ಮನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದೇವೆ ಅಂದರು. ತಾವು ಆವತ್ತು ತೋರಿದ ಸೌಜನ್ಯಕ್ಕೆ ಧನ್ಯವಾದ ಎಂದರು.
ಇದೇ ವೇಳೆ ತಮ್ಮ ಸಿಬ್ಬಂದಿ ವರ್ಗಕ್ಕೂ ಧನ್ಯವಾದ ಸಲ್ಲಿಸಿದ ರಮೇಶ್ ಕುಮಾರ್, ತಮ್ಮ ಕಾರು ಚಾಲಕ, ಆಪ್ತ ಸಹಾಯಕ, ಡಿ ವರ್ಗ ನೌಕರರ ಸಹಕಾರವನ್ನು ಕೂಡಾ ನೆನಪಿಸಿಕೊಂಡರು.
“ ನನ್ನ ಜೊತೆಗೆ ಕಳೆದ 14 ತಿಂಗಳು 4 ದಿವಸಗಳಲ್ಲಿ ನಮ್ಮ ಸಿಬ್ಬಂದಿ, ಕರ್ನಾಟಕ ವಿಧಾನಸಭೆ ಕಾರ್ಯಾಲಯದ ಸಿಬ್ಬಂದಿ ನಮ್ಮ ಸೆಕ್ರೆಟರಿ ಒಳಗೊಂಡು,ಇಲ್ಲೂ ಅನೇಕ ತೊಂದರೆಗಳಿತ್ತು ಸಾಕಷ್ಟು ಅಸಮಾಧಾನವಿತ್ತು. ಅವೆಲ್ಲವನ್ನೂ ನಿಭಾಯಿಸಿ ಸುಧಾರಿತ ಆಡಳಿತ ಕೊಡುವುದಕ್ಕೆ ನನಗೆ ಯಾರು ಸಹಕರಿಸಿದ್ದಾರೆ. ನನ್ನ ಇಲಾಖೆಯಲ್ಲಿ ಕೆಲಸ ಮಾಡುವ ಡಿ ಗ್ರೂಫ್ ನೌಕರಿಂದ ಹಿಡಿದು ಸೆಕ್ರೆಟರಿ ವರೆಗೆ ನಾನು ಅವೇಶದ ಮನುಷ್ಯ ಸಿಟ್ಟಿನಿಂದ ನಿಮ್ಮ ಮೇಲೆ ಮಾತನಾಡಿರುತ್ತೇನೆ. ಆದರೆ ದ್ವೇಷ ಇರುವುದಿಲ್ಲ. ತಪ್ಪು ಮಾಡಿದಾಗ ಕಸಿವಿಸಿಯಾಗುತ್ತೇನೆ. ಕೆಲವು ಸುಧಾರಣೆಗಳನ್ನು ತರುವುದರಲ್ಲಿ ಸಹಕರಿಸಿದ್ದೀರಿ.
ಒಂದು ವೇಳೆ ಯಾವುದಾದರೂ ಸನ್ನಿವೇಶದಲ್ಲಿ ಗಟ್ಟಿಯಾಗಿ ಮಾತನಾಡಿದರೆ ಮನಸ್ಸಿಗೆ ತೆಗೆದುಕೊಳ್ಳಬೇಡಿ ಅಂದರು.
ಈ ನಡುವೆ ಮಾಧ್ಯಮದ ಸಹಕಾರಕ್ಕೂ ಧನ್ಯವಾದ ಸಲ್ಲಿಸಿದ ರಮೇಶ್ ಕುಮಾರ್ “ ವಿಶೇಷವಾಗಿ ಮೀಡಿಯಾ ಸ್ನೇಹಿತರಿಗೆ ಅವರಿಗೆ ನನ್ನದೊಂದು ತರ ವಿಚಿತ್ರದ ಸಂಬಂಧ. ಕೆಲವೊಮ್ಮೆ ನಗ್ತಾ ಮಾತನಾಡುತ್ತಿದ್ದೆ. ಕೆಲವು ಸಲ ಸಿಟ್ಟಾಗುತ್ತಿದೆ. ಹಾಗಂತ ಅವರು ಯಾರಿಗೂ ತೊಂದರೆ ಕೊಟ್ಟಿಲ್ಲ ವಿಮರ್ಶೆ ಅವರ ಹಕ್ಕು”
“ ನಾನು ಅವರಲ್ಲಿ ಒಂದೇ ವಿನಂತಿ ಮಾಡಿಕೊಳ್ಳುತ್ತೇನೆ ಯಾವುದೇ ಸಾರ್ವಜನಿಕ ಜೀವನದಲ್ಲಿ ಇರುವವರ ವೈಯುಕ್ತಿಕ ವಿಚಾರಗಳನ್ನು ರೋಚಕತೆಯ ವಸ್ತುಗಳನ್ನಾಗಿ ಮಾಡಿಕೊಂಡು ಅವರ ಕುಟುಂಬ ಸದಸ್ಯರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ನೋವಾಗುವ ಕೆಲಸ ಮಾಡಬೇಡಿ.
ನೀವು ಚಾನೆಲ್ ಇಟ್ಟುಕೊಂಡಿದ್ದೀರಿ,ಪೆನ್ ಇಟ್ಟುಕೊಂಡಿದ್ದೀರಿ, ಅವನಿಗೆ ರಿಯಾಕ್ಟ್ ಮಾಡಲು ಏನಿರುವುದಿಲ್ಲ ಅಲ್ವ. ನ್ಯಾಯವಾಗಿದ್ರೆ ಮಾಡಿ ಕೆಲವು ಸಲ ಹೀಗೆ ಮಾಡಿದಾಗ ಕೆಲವರಿಗೆ ಭರಿಸೋದು ಕಷ್ಟವಾಗುತ್ತದೆ. ಯಾವುದೋ ಒಂದು ಕುಟುಂಬದಲ್ಲಿ ನಿಮ್ಮ ಆತುರದಿಂದ ಒಂದು ಸಾವು ಕೂಡಾ ಆಯ್ಕು ಅಂತ ಅನ್ಯಾಯಗಳು ಆಗಬಾರದು. ಮಾನಕ್ಕೆ ಹೆದರಿ ಬದುಕುವ ಜನ ಇನ್ನೂ ಇದ್ದಾರೆ ಎಂದು ಮನವಿ ಮಾಡಿದರು.
Discussion about this post