Advertisements

ಎಲ್ಲರೂ ಸೇರಿಕೊಂಡು ರೇಪ್ ಮಾಡ್ತಿದ್ದೀರಿ : ಸ್ಪೀಕರ್ ರಮೇಶ್ ಕುಮಾರ್

ಆಪರೇಷನ್ ಕಮಲ ಆಡಿಯೋ ಟೇಪ್ ಪ್ರಕರಣ 2ನೇ ದಿನವೂ ಸದನದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ವೇಳೆ ವಿಧಾನಸಭಾ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ತಮ್ಮ ಸ್ಥಿತಿಯ ಬಗ್ಗೆ ವ್ಯಂಗ್ಯ ಮಾಡಿ ಎರಡು ಪಕ್ಷಗಳ ನಾಯಕರ ನಡೆಯನ್ನು ಉದಾಹರಣೆ ಮೂಲಕ ಪ್ರಶ್ನೆ ಮಾಡಿದ್ದಾರೆ.

ಜಗದೀಶ್ ಶೆಟ್ಟರ್ ಮಾತನಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್……

“ಈಗ ನೀವು ಹೇಳ್ತಿರಲ್ಲ ಸಭಾಧ್ಯಕ್ಷರನ್ನು ಬೀದಿಗೆ ತಂದಿದ್ದಾರೆ, ಬೀದಿಗೆ ತಂದಿದ್ದಾರೆ ಎಂದು ಈ ರೇಪ್ ವಿಕ್ಟಿಮ್ ಸ್ಟೋರಿಯಾಗಿದೆ ನಮ್ದು. ರೇಪ್ ಆಗಿದ್ದು ಒಂದೇ ಸಲ.ಸುಮ್ಮನಿದ್ದು ಬಿಟ್ಟಿದ್ರೆ ಅತ್ಲಾಗಿ ಹೊರಟು ಹೋಗ್ತಾ ಇತ್ತು. ರೇಪ್ ಆಗಿದೆ ಅಂತಾ ಕಂಪ್ಲೇಟ್ ಮಾಡಿದಕ್ಕೆ ಏನಾಯ್ತು ಅಂದ್ರೆ ಅವರ ಮೇಲೆ ಕೇಸಾಯ್ತು. ಅವನನ್ನು ಪೊಲೀಸರು ಕರೆದುಕೊಂಡು ಹೋಗಿ ಜೈಲಿಗೆ ಹಾಕಿದ್ದಾರೆ”.

“ಅವನ ಪರವಾಗಿ ವಕೀಲರು ಬರ್ತಾರಲ್ಲ. ನಾನು ರೇಪ್ ಮಾಡಿಸಿಕೊಂಡವನು, ಕೋರ್ಟ್ ನಲ್ಲಿ ಕೇಳುತ್ತಾರೆ ಈಶ್ವರಪ್ಪನವರೇ.. ಹೇಗೆ ಮಾಡಿದ..  ಆಗ ಸದನದಲ್ಲಿ ನಗುವಿನ ಅಲೆ ಉಕ್ಕಿ ಹರಿಯಿತು. ಆಗ ಮತ್ತೆ ಮಾತು ಮುಂದುವರಿಸಿದ ಸ್ಪೀಕರ್ ರಮೇಶ್ ಕುಮಾರ್ ಕೇಳಿ ಕೇಳಿ ಎಂದು ಸದಸ್ಯರನ್ನು ಸೈಲೆಂಟ್ ಆಗಿಸಿದ್ರು.”

“ಎಷ್ಟು ಹೊತ್ತಿಗೆ ಮಾಡಿದ.. ಎಷ್ಟು ಹೊತ್ತು ಮಾಡ್ದ… ಹೇಗೆಲ್ಲಾ ಮಾಡ್ದ, ನನಗೆ ಆಮೇಲೆ.. ರೇಪ್ ವಿಕ್ಟಿಮ್ ಕೋರ್ಟ್ ನಿಂದ ಹೊರ ಬಂದ ಮೇಲೆ ಕೇಳ್ತಾರೆ. ಕೋರ್ಟ್ ನಲ್ಲಿ ನ್ಯಾಯ ಸಿಕ್ತಾ ಎಂದು. ನ್ಯಾಯ ಸಿಕ್ತೋ ಇಲ್ವೋ.. ಆತ ಒಂದ್ಸಲ ರೇಪ್ ಮಾಡ್ದ. ಕೋರ್ಟ್ ನಲ್ಲಿ ನೂರು ಸಲ ಮಾಡಿದ್ರು ಅಂತಾ”

“ಈಗ ನನ್ನ ಪರಿಸ್ಥಿತಿ ನೀವು ತೆಗೆದ್ರೋ, ಅವರು ತೆಗೆದ್ರೋ.. ನನ್ನನ್ನು ಬೀದಿಗೆ ಮಲಗಿಸಿ ಬಿಟ್ಟಿದ್ರಿ.”

ಆಗ ಎಂದು ನಿಂತ ಈಶ್ವರಪ್ಪ, ಆ ಹುಡುಗ ಹೇಳಿದ್ರು, ಇವರು ರೆಕಾರ್ಡ್ ಮಾಡೋಕೆ ಹೇಳಿದ್ರು, ಮುಖ್ಯಮಂತ್ರಿಗಳು ಹೇಳಿ ರೆಕಾರ್ಡ್ ಮಾಡಿಕೊಂಡು ಬಂದ ಮೇಲೆಯೇ ನಿಮಗೆ ಎಷ್ಟು ಸಲ ರೇಪ್ ಆಗಿದೆ ಅಂತಾ ಗೊತ್ತಾಗಿದ್ದು ಅಂದರು.

ಆದರೆ ಈ ಮಾತು ಸರಿಯಾಗಿ ಕೇಳಿಸಿಕೊಳ್ಳದ ಕಾರಣ, ಏನಂದ್ರಿ..ಎನಂದ್ರಿ..ಈಶ್ವರಪ್ಪನವರು ಏನೋ ಹೇಳಿದ್ರು ಎಂದು ಸ್ಪೀಕರ್ ರಮೇಶ್ ಕುಮಾರ್ ಪ್ರಶ್ನಿಸಿದರು.

ಮತ್ತೆ ಎದ್ದು ನಿಂತ ಈಶ್ವರಪ್ಪ, ಮತ್ತೆ ಮತ್ತೆ ನೀವು ಕೇಳ್ತಿರಿ.. ಈಗ ಆ ಹುಡುಗ ಒಂದ್ಸಲ ಹೇಳಿದ, ರಮೇಶ್ ಕುಮಾರ್ ಬಗ್ಗೆ ಪ್ರಸ್ತಾಪ ಮಾಡಿದ. ಮುಖ್ಯಮಂತ್ರಿಗಳು ಅದನ್ನ ಪತ್ರಿಕೆಗಳಲ್ಲಿ ಹಾಕಿ  ಹೇಳಿ ಹೇಳಿ, ನಿಮಗೆ ಎಷ್ಟು ಸಲ ರೇಪ್ ಆಗಿದೆ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಾಯ್ತು ಈಗ.

ಮತ್ತೆ ಮಾತನಾಡಿದ ರಮೇಶ್ ಕುಮಾರ್ , ಏನು ಮಾಡೋದು ಇವಾಗ, ನೀವು ಮಾಡಿದ್ರು ಮಾಡಿಸಿಕೊಳ್ಳಬೇಕು, ಅವರು ಮಾಡಿದ್ರು ಮಾಡಿಸಿಕೊಳ್ಳಬೇಕು. ನನ್ನ ಪರಿಸ್ಥಿತಿ ಹಾಗಾಗಿದೆ. ನೀವು ಎಂತವರು ಅಂದ್ರೆ ಗೌರವ ಕೊಡ್ತಾ ಕೊಡ್ತಾ ಮೇಲೆ ಹತ್ತುತ್ತಿದ್ದೀರಿ. ನಿಮ್ಮ ಮೇಲೆ ವಿಶ್ವಾಸ ಇದೆ ನಿಮ್ಮ ವಿಶ್ವಾಸ ಇದೆ. ಈ ಅನುಭವ ಯಾರಿಗೂ ಬೇಡ ಎಂದು ನಗು ಚೆಲ್ಲಿದ್ದರು.

ಆಪರೇಷನ್ ಸಿಡಿಯ ಗಂಭೀರ ಚರ್ಚೆಯ ನಡುವೆ ಸ್ಪೀಕರ್ ರಮೇಶ್ ಕುಮಾರ್ ಎತ್ತಿದ ಈ ವಿಚಾರ ಒಂದಿಷ್ಟು ಹೊತ್ತು ಸದನದಲ್ಲಿ ನಗೆ ಹುಟ್ಟುವಂತೆ ಮಾಡಿತು. ಬಳಿಕ ಗಂಭೀರ ಚರ್ಚೆ ಮುಂದುವರಿಯಿತು.

ಇದೀಗ ಸ್ಪೀಕರ್ ಹೇಳಿದ ಈ ಮಾತುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಪ್ರಾರಂಭವಾಗಿದೆ. ಆದರೆ ಒಂದು ವಿಷಯವನ್ನು ಗಮನಿಸಬೇಕು ಸ್ಪೀಕರ್ ಎಲ್ಲಿಯೂ ಕೂಡಾ ಸ್ತ್ರೀಲಿಂಗ ಪದ ಬಳಕೆ ಮಾಡಿಲ್ಲ, ಪುಲ್ಲಿಂಗ ಬಳಸಿದ್ದಾರೆ.

Advertisements

One Comment on “ಎಲ್ಲರೂ ಸೇರಿಕೊಂಡು ರೇಪ್ ಮಾಡ್ತಿದ್ದೀರಿ : ಸ್ಪೀಕರ್ ರಮೇಶ್ ಕುಮಾರ್

  1. Pingback: ಸದನ ಕಲಾಪದಲ್ಲಿ ರೇಪ್ ವಿಚಾರ : ಮಾಧ್ಯಮಗಳ ಮಸಾಲೆ ಕಸಿದ ಸ್ಪೀಕರ್ – torrentspree

Leave a Reply

%d bloggers like this: