ಇತ್ತೀಚೆಗೆ ರಾಮನಗರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮವನ್ನು ನಡೆದಿತ್ತು. ಕಾರ್ಯಕ್ರಮದ ಅಂಗವಾಗಿ ಭರ್ಜರಿ ಮನೋರಂಜನಾ ಕಾರ್ಯಕ್ರಮವೂ ನಿಗದಿಯಾಗಿತ್ತು.
Buy Android Tablets starting from Rs.4499
ಆದರೆ ಈ ಕಾರ್ಯಕ್ರಮದಲ್ಲಿ ದರ್ಶನ್ ಸಿನಿಮಾದ ಹಾಡುಗಳನ್ನು ಹಾಡಲು ಆಯೋಜಕರು ನಿರ್ಬಂಧ ಹೇರಿದ್ದರು ಅನ್ನುವ ಸುದ್ದಿ ಹರಿದಾಡುತ್ತಿದೆ. ಯಾವುದೇ ಕಾರಣಕ್ಕೂ ದರ್ಶನ್ ಸಿನಿಮಾದ ಹಾಡನ್ನು ಹಾಡಲೇಬಾರದು ಎಂದು ಕಾರ್ಯಕ್ರಮದ ಆಯೋಜಕರು ಫರ್ಮಾನು ಹೊರಡಿಸಿರುವ ಕಾರಣ ಡಿ ಬಾಸ್ ಹಾಡುಗಳು ಇರಲಿಲ್ಲವಂತೆ.
Buy Weekend Clothing for Kids under Rs.669
ಹಾಗಾದರೆ ರಾಮನಗರದಲ್ಲಿ ದರ್ಶನ್ ಅಭಿಮಾನಿಗಳು ಇಲ್ವೇ. ಖಂಡಿತಾ ಇದ್ದಾರೆ ಆದರೆ ಹೇಳಿ ಕೇಳಿ ರಾಮನಗರ ಕುಮಾರಸ್ವಾಮಿಯವರ ಕರ್ಮ ಭೂಮಿ. ಇತ್ತೀಚೆಗಷ್ಟೇ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕಣದಲ್ಲಿ ಸೋತಿದ್ದಾರೆ. ಈ ಸೋಲಿಗೆ ದರ್ಶನ್ ಕಾರಣ ಅನ್ನುವ ಕೋಪದಿಂದ ದರ್ಶನ್ ಹಾಡುಗಳಿಗೆ ಬ್ರೇಕ್ ಹಾಕಲಾಗಿದೆ ಅನ್ನುವ ಸುದ್ದಿ ಇದೆ.
Buy Waterproof Bluetooth Speakers starting from Rs.2399
ಆದರೆ ಆಯೋಜಕರು ಈ ಬಗ್ಗೆ ಏನೂ ಹೇಳಿಲ್ಲ. ಪತ್ರಿಕಾ ವರದಿಯೊಂದರ ಪ್ರಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೇಕ್ಷಕರು ಡಿ ಬಾಸ್ ದರ್ಶನ್ ಅವರ ಹಾಡುಗಳನ್ನು ಹಾಡುವಂತೆ ಪರಿಪರಿಯಾಗಿ ವಿನಂತಿಸಿದರಂತೆ. ಆದರೂ ವಿಜಯ್ ಪ್ರಕಾಶ್ ದರ್ಶನ್ ಅವರ ಒಂದೇ ಒಂದು ಹಾಡು ಹಾಡಲಿಲ್ಲ. ಪ್ರೇಕ್ಷಕರ ಒತ್ತಾಯದ ಮೇರೆಗೆ ಜೆಡಿಎಸ್ ಮುಖಂಡರೊಬ್ಬರು ವಿಜಯ್ ಪ್ರಕಾಶ್ ಬಳಿ ದರ್ಶನ್ ಅವರ ಹಾಡೊಂದನ್ನು ಹಾಡಿ ಎಂದು ಮನವಿ ಮಾಡಿದರಂತೆ. ಆಗ ದರ್ಶನ್ ಸಿನಿಮಾದ ಹಾಡುಗಳನ್ನು ಹಾಡದಂತೆ ಷರತ್ತು ವಿಧಿಸಲಾಗಿದೆ ಎಂದು ತಿಳಿಸಿದರೂ ಅಂದರಂತೆ.
ಒಂದು ವೇಳೆ ಇದು ಸತ್ಯವಾದರೆ ಇದು ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ. ರಾಜಕೀಯ ಅನ್ನುವುದು ಚುನಾವಣೆ ಸಂದರ್ಭಕ್ಕೆ ಸೀಮಿತವಾಗಿರಬೇಕು. ಮಾನವೀಯತೆ ಅನ್ನುವುದು ಬದುಕಿನುದ್ದಕ್ಕೂ ಇರಬೇಕು.
Discussion about this post