ಕನ್ನಡ ಸೀರಿಯಲ್ ಲೋಕದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳಲ್ಲಿ ಜನಪ್ರಿಯತೆ ಪಡೆದ ಧಾರಾವಾಹಿಗಳಲ್ಲಿ’ರಾಧಾ ರಮಣ’ ಕೂಡ ಒಂದು.
ಕಲರ್ಸ್ ಮಾಹಿನಿಯಲ್ಲಿ ಮೂಡಿ ಬರುತ್ತಿರುವ ‘ರಾಧಾ ರಮಣ’ ಧಾರಾವಾಹಿಯ ಮುಖ್ಯ ಪಾತ್ರಧಾರಿ ‘ರಾಧಾ ಮಿಸ್’ ಪಾತ್ರಧಾರಿ ಶ್ವೇತಾ ಪ್ರಸಾದ್ ಸೀರಿಯಲ್ನಿಂದ ಹೊರಕ್ಕೆ ಹೋಗಿರುವುದು ಹಳೆಯ ಸುದ್ದಿ.
ವೈಯಕ್ತಿಕ ಕಾರಣಗಳಿಂದ ರಾಧಾ ರಮಣ ಸೀರಿಯಲ್ ಮುಖ್ಯ ನಟಿ ಶ್ವೇತಾ ಆರ್ ಪ್ರಸಾದ್ ಅವರು ಈ ಧಾರಾವಾಹಿಯಿಂದ ಹೊರಕ್ಕೆ ಹೋಗಿದ್ದಾರೆ. ಅವರ ಬದಲಿಗೆ ನಟಿ ಕಾವ್ಯಾ ಗೌಡ ಆ ಪಾತ್ರವನ್ನು ಮುಂದಕ್ಕೆ ನಿಭಾಯಿಸಲು ಆಯ್ಕೆಯಾಗಿದ್ದಾರೆ. ‘ರಾಧಾ ರಮಣ’ ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ವೀಕ್ಷಕರಿಗೆ ಶ್ವೇತಾ ಪ್ರಸಾದ್ ಬದಲು ಕಾವ್ಯಾ ಗೌಡ ಕಾಣಿಸಿಕೊಳ್ಳಲಿದ್ದಾರೆ.
‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ. ಆ ಬಳಿಕ, ‘ಶುಭ ವಿವಾಹ’, ‘ಮೀರಾ ಮಾಧವ’ ಮತ್ತು ‘ಗಾಂಧಾರಿ‘ ಸೀರಿಯಲ್ಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾದವರು. ಇದೀಗ, ಜನಮೆಚ್ಚಿದ ಧಾರಾವಾಹಿ ‘ರಾಧಾ ರಮಣ’ದಲ್ಲಿ ಶ್ವೇತಾ ಬದಲಿಗೆ ಕಾವ್ಯಾ ಕಾಣಿಸಿಕೊಳ್ಳಲಿದ್ದಾರೆ.
Discussion about this post