Advertisements

ಕನ್ನಡಕ್ಕೆ ಮತ್ತೊಬ್ಬ ದರ್ಶನ್ ಇದು ಶೃತಿ ನಾಯ್ಡು ಕೊಡುಗೆ

ಧಾರವಾಹಿಗಳ ಮೂಲಕ ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡಿರುವ ಶ್ರುತಿ ನಾಯ್ಡು ಮತ್ತು ರಮೇಶ್ ಇಂದಿರಾ ದಂಪತಿ ಇದೀಗ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಚಿತ್ರದ ನಿರ್ಮಾಪಕಿಯಾಗಿ ಶ್ರುತಿ ನಾಯ್ಡು ಬಂಡವಾಳ ಹೂಡಿದ್ದರೆ, ಪತಿ ರಮೇಶ್ ಇಂದಿರಾ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಈ ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸುತ್ತಿದ್ದಾರೆ ಅನ್ನುವ ಒಂದು ಕಾರಣಕ್ಕೆ ಚಿತ್ರ ಸಾಕಷ್ಟು ಸದ್ದು ಮಾಡಿದೆ. ಮಾತ್ರವಲ್ಲದೆ ನಾನಾ ಕಾರಣಗಳಿಂದಾಗಿ ಪ್ರಿಮಿಯರ್‌ ಪದ್ಮಿನಿ ಸಿನಿಮಾ ನಿರೀಕ್ಷೆ ಹುಟ್ಟು ಹಾಕಿದೆ.

ಇನ್ನು ಪ್ರಿಮಿಯರ್‌ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್‌ ಜತೆಗೆ ಪ್ರಮೋದ್‌ ಎಂಬ ಯುವ ಕಲಾವಿದ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಧಾರಾವಾಹಿಯ ಮೂಲಕ ಈಗಾಗಲೇ ಪರಿಚಯ ಆಗಿರುವ ಪ್ರಮೋದ್‌, ಸದ್ಯ ಪ್ರಿಮಿಯರ್‌ ಪದ್ಮಿನಿ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರು ಥೇಟ್‌ ದರ್ಶನ್‌  ರೀತಿಯಲ್ಲೇ ಕಾಣುವುದರಿಂದ ಅವರನ್ನು ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು, ದರ್ಶನ್‌ಗೆ ಹೋಲಿಸಿದ್ದಾರೆ. 

ನಿರ್ಮಾಪಕಿ ಈ  ಹುಡುಗನನ್ನು ಜ್ಯೂ.ದರ್ಶನ್‌ ಎಂದೇ ಕರೆಯುತ್ತಾರೆ. 

‘ಸಡನ್ನಾಗಿ ಪ್ರಮೋದ್‌ ಅವರನ್ನು ನೋಡಿದರೆ ದರ್ಶನ್‌ ರೀತಿಯಲ್ಲಿ ಕಾಣುತ್ತಾರೆ. ಹಾಗಾಗಿ ಅವರನ್ನು ಒಂದು ಬಾರಿ ದರ್ಶನ್‌ ಅವರಿಗೂ ಭೇಟಿ ಮಾಡಿಸಿದ್ದೇವೆ. ಜ್ಯೂ.ದರ್ಶನ್‌ ಆಗಿ ಅವರು ಬೆಳೆಯುತ್ತಾರೆ ಎಂಬ ನಂಬಿಕೆ ನನ್ನದು’ ಅಂತಾರೆ ಶ್ರುತಿ ನಾಯ್ಡು. 

Advertisements

One Comment on “ಕನ್ನಡಕ್ಕೆ ಮತ್ತೊಬ್ಬ ದರ್ಶನ್ ಇದು ಶೃತಿ ನಾಯ್ಡು ಕೊಡುಗೆ

  1. Pingback: ಸೀತಾ ವಲ್ಲಭನಿಗೆ ಕೂಡಿ ಬಂದ ಕಂಕಣ ಬಲ – ರಕ್ಷಿತಾ ಜೊತೆ ಸಪ್ತಪದಿ ತುಳಿಯಲು ಮುಂದಾದ ಜಗನ್ – torrentspree

Leave a Reply

%d bloggers like this: