ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರುತ್ತಾರೆ ಅನ್ನುವಾದ ಶುರುವಾಗಿದೆ ಹೊಸ ಚರ್ಚೆ
ಲೋಕಸಭಾ ಚುನಾವಣೆಯಲ್ಲಿ ಜಸ್ಟ್ ಪಾಸ್ ಆದ್ರೆ ಸಾಲದು ಎಂದು ಪಣ ತೊಟ್ಟಿರುವ ಬಿಜೆಪಿ, ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಅಬ್ಬರವನ್ನು ಮಂಕು ಮಾಡಲು ಪ್ರಯತ್ನಿಸುತ್ತಿದೆ. ಮೋದಿ ಅಲೆಗೆ ಪೈಪೋಟಿ ಕೊಡುತ್ತಿರುವ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಕರ್ನಾಟಕ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.
ಈಗಾಗಲೇ ಬಣ ರಾಜಕೀಯ ಕಂಗೆಟ್ಟಿರುವ ಬಿಜೆಪಿ, ಮೂಲ ಮತ್ತು ವಲಸಿಗರನ್ನು ಒಂದೇ ದೋಣಿಯಲ್ಲಿ ಕೂರಿಸಲು ಹರ ಸಾಹಸ ಪಡುತ್ತಿದೆ.
ಈ ನಡುವೆ ಕರಾವಳಿ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿರುವ ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಪುತ್ತಿಲ ಅವರಿಗೆ ಹುದ್ದೆಯೊಂದು ಘೋಷಣೆಯಾಗುವುದು ಬಾಕಿ ಬಿಟ್ರೆ ಉಳಿದಂತೆ ಎಲ್ಲವೂ ಮುಗಿದ ಅಧ್ಯಾಯ.
ಪುತ್ತಿಲ ಬಿಜೆಪಿಗೆ ಬರ್ತಾರಂತೆ ಅನ್ನುವ ಸುದ್ದಿ ಕೇಳಿ ಕೆಲ ಸ್ಥಳೀಯ ಬಿಜೆಪಿ ನಾಯಕರು ಮಂಡೆ ಬಿಸಿ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಪುತ್ತಿಲ ಬಿಜೆಪಿ ಬಂದ್ರೆ ಕಾಂಗ್ರೆಸ್ ಕಥೆ ಏನಾಗಬಹುದು ಅನ್ನುವ ರಾಜಕೀಯ ವಿಶ್ಲೇಷಣೆ ಶುರುವಾಗಿದೆ.
ಇದನ್ನೂ ಓದಿ : ಪುತ್ತೂರು ಬಿಜೆಪಿಯಲ್ಲಿ ಹುಟ್ಟಲಿಲ್ಲ ಯುವ ನಾಯಕ : ಹಳೆ ಮುಖಗಳ ವರ್ತನೆಗೆ ರಾಜ್ಯ ನಾಯಕರು ಗರಂ
ಹಾಗೇ ನೋಡಿದ್ರೆ ಪುತ್ತಿಲ ಬಿಜೆಪಿ ಸೇರ್ಪಡೆಯಿಂದ ಪ್ರಸ್ತುತ ಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಯಾವುದೇ ತೊಂದರೆಗಳಾಗುವುದಿಲ್ಲ. ಪುತ್ತೂರು ಶಾಸಕ ಅಶೋಕ್ ರೈ ಸಿದ್ದರಾಮಯ್ಯ ಅವರ ಗ್ಯಾರಂಟಿಗಿಂತ ಅಧಿಕ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಲಂಚ ಮುಕ್ತ ಆಡಳಿತ, ಬಡವರಿಗೆ ಸೂರು, ಕುಡಿಯುವ ನೀರು ಎಂದೆಲ್ಲಾ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಮಾತ್ರವಲ್ಲದೆ ಹಿಂದುತ್ವದ ಭದ್ರಕೋಟೆಯಲ್ಲಿ ಅದೇ ಶೈಲಿಯಲ್ಲಿದೆ ಶಾಸಕರ ಕಾರ್ಯವೈಖರಿ.
KMF ಹಾಲಿನ ಘಟಕ, ಕ್ರಿಕೆಟ್ ಸ್ಚೇಡಿಯಂ ಎಂದೆಲ್ಲಾ ಈ ಹಿಂದೆ ಬಿಜೆಪಿಯವರು ಮೊಣಕೈಗೆ ತುಪ್ಪ ಸವರಿದ್ದ ಯೋಜನೆಗಳನ್ನು ಜಾರಿ ಮಾಡಲಾರಂಭಿಸಿದ್ದಾರೆ. ಇವೆಲ್ಲವನ್ನೂ ಗಮನಿಸಿದ್ರೆ ಪುತ್ತೂರಿನಲ್ಲಿ ಕಾಂಗ್ರೆಸ್ ಅನ್ನು ಸೋಲಿಸೋದು ಕಷ್ಟ ಅನ್ನಲಾಗುತ್ತಿದೆ.
ಹಾಗಿದ್ದರೂ ಸಿದ್ದರಾಮಯ್ಯ ಅವರು ಇನ್ನೆರೆಡು ವರ್ಷಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗೋ ಹೊತ್ತಿನಲ್ಲಿ ರಾಜಕೀಯ ಕ್ರಾಂತಿ ನಡೆದು ಬಿಜೆಪಿ ಅಧಿಕಾರಿ ಚುಕ್ಕಾಣಿ ಹಿಡಿದ್ರೆ ಪರಿಸ್ಥಿತಿಗಳು ಬದಲಾಗಬಹುದು. ಆಗ ಅರುಣ್ ಕುಮಾರ್ ಪುತ್ತಿಲ ಅವರಿಗೆ ಮತ್ತಷ್ಟು ಶಕ್ತಿ ಬಂದ್ರು ಬರಬಹುದು.
ಆದರೆ ಅಶೋಕ್ ಕುಮಾರ್ ರೈಯವರ ಕಾರ್ಯವೈಖರಿ ವಿವಾದಗಳಿಂದ ಮುಕ್ತವಾಗಿದೆ. ವಿರೋಧ ಪಕ್ಷಗಳಿಗೆ ವಿರೋಧಿಸಲು ಅವಕಾಶವಿಲ್ಲದಂತೆ ಅವರು ಕೆಲಸ ಮಾಡುತ್ತಿದ್ದಾರೆ. He is a very smart MLA ಅನ್ನೋದು ಹಿರಿಯ ಪತ್ರಕರ್ತರ ಮಾತು.
ಇನ್ನೇನಿದ್ದರೂ 2028ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ. ಆಗ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗೋ ಸಾಧ್ಯತೆಗಳಿದೆ. ಇನ್ನೂ ನಾಲ್ಕು ವರ್ಷಗಳಲ್ಲಿ ರಾಜಕೀಯ ಪರಿಸ್ಥಿತಿ ಹೇಗೆಲ್ಲಾ ಬದಲಾಗಿರುತ್ತದೆ ಎಂದು ಹೇಳುವುದು ಅಸಾಧ್ಯ. ಹೀಗಾಗಿ ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಯಿಂದ ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಮಸ್ಯೆಯೂ ಇಲ್ಲ ಆತಂಕವೂ ಇಲ್ಲ. ಹಿಂದೂ ಕಾರ್ಯಕರ್ತರಿಗೆ ಕಟ್ಟಾ ಹಿಂದೂ ನಾಯಕನೊಬ್ಬ ಸಿಕ್ಕ ಎಂದಷ್ಟೇ ಸಂಭ್ರಮಿಸಬಹುದು.
Discussion about this post