ತನಿಷಾ ಕುಪ್ಪಂಡ ( Tanisha Kuppanda ) ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ( Drone Prathap )
ಜಾತಿ ನಿಂದನೆ ವಿಚಾರವಾಗಿ ಎಸ್ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾದ ಬೆನ್ನಲ್ಲೇ ಬಿಗ್ ಬಾಸ್ ಸೆಟ್ಗೆ ತೆರಳಿರುವ ಕುಂಬಳಗೋಡು ಪೊಲೀಸರು ತನಿಷಾ ಕುಪ್ಪಂಡ ( Tanisha Kuppanda ) ಹಾಗೂ ಡ್ರೋನ್ ಪ್ರತಾಪ್ ( Drone Prathap ) ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಬಾರಿ ಹೊಸದಾಗಿ ನಿರ್ಮಿಸಿರುವ ಬಿಗ್ ಬಾಸ್ ಮನೆಗೆ ವಾಸ್ತು ದೋಷವಿದ್ದಂತೆ ಕಾಣಿಸುತ್ತಿದೆ. ಈ ಹಿಂದೆ ಬಿಗ್ ಬಾಸ್ ಮನೆ ಲೋನವಾಲದಲ್ಲಿತ್ತು, ಆದಾದ ಬಳಿಕ ಇನ್ನೋವೆಟಿವ್ ಫಿಲ್ಮಂ ಸಿಟಿಗೆ ವರ್ಗಾಯಿಸಲಾಗಿತ್ತು. ಸೀಸನ್ 10ರ ಹೊತ್ತಿಗೆ ದೊಡ್ಡ ಆಲದ ಮರದ ಬಳಿಯ ಪ್ರದೇಶವೊಂದರಲ್ಲಿ ಹೊಸ ಮನೆಯನ್ನು ನಿರ್ಮಿಸಲಾಗಿದೆ. ಇದೀಗ ಅದೇ ಮನೆಯಲ್ಲಿ ಸಾವಿರ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದೆ.
ಇದನ್ನೂ ಓದಿ : ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?
ಹುಲಿಯುಗುರು ಪ್ರಕರಣದಲ್ಲಿ ಬಿಗ್ ಬಾಸ್ ಮನೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ರು. ಇದರ ಬೆನ್ನಲ್ಲೇ ಮತ್ತೊಬ್ಬ ಸ್ಪರ್ಧಿ ತನಿಷಾ ಜಾತಿ ನಿಂದನೆ ಆರೋಪಕ್ಕೆ ಸಿಲುಕಿದ್ದು, ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.
ಮುಂದುವರಿದ ಭಾಗವಾಗಿ ಕುಂಬಳಗೋಡು ಪೊಲೀಸರು ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದು , ತನಿಷಾ ವಿಚಾರಣೆ ನಡೆಸಿದ್ದಾರೆ. ಇದರೊಂದಿಗೆ ತನಿಷಾ ಧ್ವನಿ ಸ್ಯಾಂಪಲ್ ತೆಗೆದುಕೊಂಡಿರುವ ಪೊಲೀಸರು ದೂರಿನ ಜೊತೆಗೆ ಸಲ್ಲಿಕೆಯಾದ ಆಡಿಯೋ ಮತ್ತು ವಿಡಿಯೋ ವಾಹಿನಿಯ ಬಳಿ ಇರುವ ಆಡಿಯೋ ಮತ್ತು ವಿಡಿಯೋ ಹಾಗೂ ತನಿಷಾ ಅವರ ದನಿಗೂ ಹೋಲಿಕೆ ಇದೆಯೇ ಅನ್ನುವ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ.
ಇನ್ನು ತನಿಷಾ ಅವರು ಮಾತನಾಡುವ ವೇಳೆ ಡ್ರೋನ್ ಪ್ರತಾಪ್ ಕೂಡಾ ಹಾಜರಿದ್ದರು ಅನ್ನಲಾಗಿದ್ದು, ಈ ಸಂಭಾಷಣೆ ಕುರಿತಂತೆ ಪ್ರತಾಪ್ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರಂತೆ. ಪ್ರಸ್ತುತ ತನಿಷಾ ಮತ್ತು ಪ್ರತಾಪ್ ಹೇಳಿಕೆ ಪಡೆದಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಲಿದ್ದಾರೆ.
ಘಟನೆ ಹಿನ್ನಲೆ
ಜಾತಿ ನಿಂದನೆ ಮಾಡಿದ್ದಾರೆ ಅನ್ನುವ ಆರೋಪದಡಿಯಲ್ಲಿ ಎಸ್ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಅನ್ನುವವರು ನವೆಂಬರ್ 12ರಂದು ದೂರು ದಾಖಲಿಸಿದ್ದರು. ಈ ಸಂಬಂಧ FIR ಕೂಡಾ ತೆರೆಯಲಾಗಿದೆ.
ಇದನ್ನೂ ಓದಿ : Warships In Karachi: ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಚೀನಾ ಯುದ್ಧ ನೌಕೆ
ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ರೆ ಕಾರ್ಯಕ್ರಮ ನಡೆಸಿಕೊಡುವ ವಾಹಿನಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ವಾಹಿನಿಯವರ ಹಲವು ಎಡವಟ್ಟುಗಳು ಸ್ಪರ್ಧಿಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ. ಹೀಗಾದ್ರೆ ಮುಂದೊಂದು ದಿನ ಬಿಗ್ ಬಾಸ್ ಸಹವಾಸವೇ ಬೇಡ ಅನ್ನಿಸಿದ್ರೂ ಅಚ್ಚರಿ ಇಲ್ಲ.
Discussion about this post