ಅಮಲಾ ಪೌಲ್ ಸಿನಿಮಾಕ್ಕಿಂತ ವಿವಾದಗಳಿಂದ ಸುದ್ದಿಯಾದ ನಟಿ
ದಕ್ಷಿಣ ಭಾರತದ ಖ್ಯಾತ ನಟಿ ಎಂದು ಕರೆಸಿಕೊಂಡಿರುವ ಅಮಲಾ ಪೌಲ್ ನಟಿಸಿದ ಸಿನಿಮಾಗಳು ಸುದ್ದಿ ಮಾಡಿದ್ದು ಕಡಿಮೆ. ಆದರೆ ಪೌಲ್ ಮಾತ್ರ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದವರು. ವಿವಾದಗಳನ್ನು ಮೈ ಮೇಲೆ ಎಳೆದುಕೊಂಡ ಕಾರಣಕ್ಕೆ ಸಿನಿ ಅವಕಾಶಗಳೇನೂ ಕಡಿಮೆಯಾಗಿರಲಿಲ್ಲ.
2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಅಮಲಾ ಪೌಲ್ ಗೃಹಸ್ಥಾಶ್ರಮ ಸ್ವೀಕರಿಸಿದ್ದರು, ಹಾಗಂತ ಅವರು ಗೃಹಿಣಿಯಾಗಲಿಲ್ಲ. ವಿಜಯ್ ಜೊತೆಗಿನ ಸಂಬಂಧ ತುಂಬಾ ದಿನ ಉಳಿಯಲಿಲ್ಲ. ಮೂರೇ ಮೂರು ವರ್ಷಕ್ಕೆ ಸಂಸಾರದ ತಾಳ ತಪ್ಪಿತು.
ಇದಾದ ನಂತ್ರ ಅನೇಕ ನಟರ ಜೊತೆ ಅಮಲಾ ಪೌಲ್ ಹೆಸರು ತಳುಕು ಹಾಕಿಕೊಂಡಿತ್ತು. ಅನೇಕ ನಿರ್ದೇಶಕರ ಜೊತೆಗೆ ಓಡಾಡುತ್ತಿದ್ದಾರೆ ಅನ್ನುವ ಗಾಸಿಪ್ ಗಳೂ ಬಂತು. ಆದರೆ ಅದ್ಯಾವುದಕ್ಕೂ ಅಮಲಾ ಉತ್ತರಿಸಲಿಲ್ಲ. ಆದರೆ ಇದೀಗ ಬ್ರೇಕ್ ಅಪ್ ನಂತ್ರ ಸಿಕ್ಕ ಬಾಯ್ ಫ್ರೆಂಡ್ ಜೊತೆ ಮದುವೆಯಾಗಲು ನಿರ್ಧರಿಸಿದ್ದಾರೆ.
Read This : Lunar Eclipse 2023 : ಚಂದ್ರ ಗ್ರಹಣ ಕಾಲದಲ್ಲಿ ಈ ತಪ್ಪು ಮಾಡಬೇಡಿ
ಜಗತ್ ದೇಸಾಯಿ (Jagat Desai) ಅನ್ನುವವರ ಜೊತೆ ಡೇಟಿಂಗ್ ನಲ್ಲಿದ್ದ ಅಮಲಾ ಅವರಿಗೆ ಜಗತ್ ದೇಸಾಯಿ ಪ್ರಪೋಸ್ ಮಾಡಿದ್ದು, ತುಟಿ ಕಚ್ಚಿ ಮದುವೆಗೆ ತಾನೂ ಸೈ ಅಂದಿದ್ದಾರೆ ಹೆಬ್ಬುಲಿಯ ನಾಯಕಿ ಅಮಲಾ ಪೌಲ್ (Amala Paul). ಒಟ್ಟಿನಲ್ಲಿ ಇದೀಗ Jagat Desai ಮತ್ತು Amala Paul Lip Lock ಸಿಕ್ಕಾಪಟ್ಟೆ ವೈರಲ್ ಆಗಿದೆ.
Discussion about this post