ಮಹಾಲಿಂಗೇಶ್ವರನ ನೆಲದಲ್ಲಿ ಮೊಳಗಿದ ‘ ದೇಶಕ್ಕೆ ಮೋದಿ ಪುತ್ತೂರಿಗೆ ಪುತ್ತಿಲ’ ( Arun Kumar Puthila) ಘೋಷಣೆ
ಬೆಂಗಳೂರು : ಬಿಜೆಪಿಯ ಭದ್ರಕೋಟೆ, ಹಿಂದೂ ಹೋರಾಟಗಾರರ ಭದ್ರ ನೆಲೆ ಎಂದು ಕರೆಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ( Arun Kumar Puthila )ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿಂದೂ ಹೋರಾಟಗಾರ ಅರುಣ್ ಕುಮಾರ್ ಪುತ್ತಿಲ ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಮೆರವಣಿಗೆ ನಡೆದಿದ್ದು ಸಾವಿರಾರು ಸಂಖ್ಯೆಯಲ್ಲಿ ಕೇಸರಿ ಶಾಲು ಧರಿಸಿದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಚ್ಚರಿ ಅಂದ್ರೆ ಸೇರಿದ ಅಷ್ಟೂ ಕಾರ್ಯಕರ್ತರು ಬಿಜೆಪಿಗಾಗಿ ಈ ಹಿಂದೆ ಕೆಲಸ ಮಾಡಿದವರಾಗಿದ್ದರು.( Arun Kumar Puthila) ಜೊತೆಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕ ಫ್ರಾಂಕ್ಲಿನ್ ಮೊಂತೆರೋ ಕೂಡಾ ಇದೇ ವೇಳೆ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.
ಇದೇ ವೇಳೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ನಾಯಕರು ಇಲ್ಲಸಲ್ಲದ ಅಪಪ್ರಚಾರವನ್ನು ನಡೆಸುತ್ತಿದ್ದಾರೆ, ಆದರೆ ಅದಕ್ಕೆ ನಾನು ಉತ್ತರಿಸುವುದಿಲ್ಲ. ಪುತ್ತೂರಿನ ಮಹಾಲಿಂಗೇಶ್ವರನೇ ಉತ್ತರಿಸುತ್ತಾನೆ. ಹಿಂದುತ್ವಕ್ಕಾಗಿ ದುಡಿದಿರುವ ಕಾರ್ಯಕರ್ತರಿಗೆ ಅನ್ಯಾಯವಾಗಬಾರದು, ಹೀಗಾಗಿ ಕಾರ್ಯಕರ್ತರ ಒತ್ತಾಯದಂತೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನ್ನ ಬೆಂಬಲ ಏನಿದ್ದರೂ ನರೇಂದ್ರ ಮೋದಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಅರುಣ್ ಪುತ್ತಿಲ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಸೇರಿದ ಜನಸ್ತೋಮದ ಸುದ್ದಿ ದೆಹಲಿಗೂ ತಲುಪಿದೆ. ದೆಹಲಿಯ ಬಿಜೆಪಿ ವರಿಷ್ಥರು ಈ ಸಂಬಂಧ ವರದಿ ನೀಡುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಅನ್ನಲಾಗಿದೆ. ಜೊತೆಗೆ ಪುತ್ತೂರಿಗೆ ಯಾರು ಅಭ್ಯರ್ಥಿಯಾಗಬೇಕು ಅನ್ನುವ ಸಂದರ್ಭದಲ್ಲಿ ಸಲ್ಲಿಸಲಾದ ವರದಿಯಲ್ಲಿ ಅರುಣ್ ಕುಮಾರ್ ಪುತ್ತಿಲ ವರ್ಚಸ್ಸಿನ ಉಲ್ಲೇಖದ ಬಗ್ಗೆಯೂ ದೆಹಲಿಯಲ್ಲಿ ಚರ್ಚೆಗಳಾಗಿದೆ.
ಇನ್ನು ಇವತ್ತಿನ ಪರಿಸ್ಥಿತಿ ನೋಡಿದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆದ್ರೆ ಬಿಜೆಪಿಯ ನಾಯಕರು ಗೆದ್ದಂತೆ, ಒಂದು ವೇಳೆ ಅರುಣ್ ಕುಮಾರ್ ಪುತ್ತಿಲ ಗೆದ್ದರೆ ಕಾರ್ಯಕರ್ತರು ಗೆದ್ದಂತೆ ಅರ್ಥ.
Discussion about this post