ಮೇ 23 ರಂದು ಸುವರ್ಣ ವಾಹಿನಿಯಲ್ಲಿ ಪ್ರಸಾರ ಪ್ರಾರಂಭಿಸಿದ್ದ ಅರ್ಧಾಂಗಿ ( Ardhangi) ಸೀರಿಯಲ್ ಮೊದಲ ದಿನವೇ ಸದ್ದು ಮಾಡಿತ್ತು
ಅಂಜನಾ ದೇಶಪಾಂಡೆ ಮತ್ತು ಪೃಥ್ವಿ ಶೆಟ್ಟಿ ಮುಖ್ಯ ಭೂಮಿಕೆಯ ಈ ಧಾರಾವಾಹಿಗೆ ( Ardhangi) ಪ್ರಚಾರ ರಾಯಭಾರಿಯಾಗಿ ಪ್ರಿಯಾಂಕ ಉಪೇಂದ್ರ ಅವರನ್ನು ಆಯ್ಕೆ ಮಾಡಲಾಗಿತ್ತು.
ಧಾರಾವಾಹಿಯ ಪ್ರೋಮೋಗಳನ್ನು ಅವರು ಕಾಣಿಸಿಕೊಳ್ಳುವ ಮೂಲಕ ಧಾರಾವಾಹಿಗೆ ವಿಭಿನ್ನ ರೀತಿಯಲ್ಲಿ ಪ್ರಚಾರ ನೀಡಲಾಗಿತ್ತು.
ಇದನ್ನು ಓದಿ : Ganesh Chaturthi : ಸಿದ್ದತೆ ಪೂರ್ಣಗೊಂಡ ನಂತ್ರ ನಿಯಮ ಹೇಳಿದ್ರೆ ಹೇಗೆ : BBMP & ಪೊಲೀಸರ ವಿರುದ್ಧ ಗರಂ
ಚಿಕ್ಕವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಕಥಾ ನಾಯಕಿ ಮಲತಾಯಿಯ ಆಶ್ರಯದಲ್ಲಿ ಬೆಳೆಯುತ್ತಾಳೆ. ಮಲತಾಯಿಯ ಮಕ್ಕಳನ್ನೂ ನೋಡಿಕೊಂಡ ನಾಯಕಿ ಅದಿತಿ 28 ವರ್ಷವಾದರೂ ಎಂಟು ವರ್ಷದ ಮಗುವಿನಷ್ಟೇ ಬುದ್ದಿ ಬೆಳೆದ ದಿಗಂತ್ ನನ್ನು ಮದುವೆಯಾಗುತ್ತಾಳೆ. ಹೀಗೆ ಮುಂದುವರಿದುಕೊಂಡು ಹೋದ ಕಥೆಗೆ ಮತ್ತೊಬ್ಬ ಪಾತ್ರಧಾರಿಯ ಎಂಟ್ರಿಯಾಗಿದೆ. ಕಿಡ್ನಾಪ್ ಆದ ಹೆಂಡತಿಯ ಹುಡುಕಾಟದಲ್ಲಿರುವ ದಿಗಂತ್ ಗೆ ಅಚ್ಚರಿ ಅನ್ನುವಂತೆ ಕಲ್ಯಾಣಿಯ ಪರಿಚಯವಾಗುತ್ತದೆ. ಸಂಕಷ್ಟದಲ್ಲಿರುವ ಕಥಾ ನಾಯಕಿಗೆ ಕಲ್ಯಾಣಿ ಹೇಗೆ ಸಹಕಾರ ನೀಡ್ತಾಳೆ ಅನ್ನುವುದೇ ಮುಂದಿನ ಕುತೂಹಲ
Discussion about this post