ಜಿಲ್ಲೆಯಾದ ಸಂಭ್ರಮದಲ್ಲಿ ಪೊಡವಿಗೊಡೆಯನ ನಾಡಿದೆ. ಆದರೆ ಜನ ಮಾತ್ರ ನೆಮ್ಮದಿಯಾಗಿಲ್ಲ ( Udupi)
ಉಡುಪಿ : ಕೃಷ್ಣನಗರಿ ಉಡುಪಿ ( Udupi ) ರಜತ ಮಹೋತ್ಸವ ಸಂಭ್ರಮದಲ್ಲಿದೆ. ಜಿಲ್ಲೆಯಾದ ಬಳಿಕ ಸಮಸ್ಯೆಗಳು ಕಡಿಮೆಯಾಗಿದೆಯೇ ಅಂದುಕೊಂಡ್ರೆ, ಸಂಪ್ರದಾಯ ಅನ್ನುವಂತೆ ಜನ ಸಾಮಾನ್ಯರ ಬದುಕು ನರಕವಾಗಿಯೇ ಇದೆ.ಈ ಸಂಭ್ರಮದ ನಡುವೆ ಇದೀಗ ಸೂತಕದ ಸುದ್ದಿಯೊಂದು ಉಡುಪಿಯಿಂದ ಬಂದಿದೆ.
ಜಿಲ್ಲೆ ರಜತ ಮಹೋತ್ಸವ ಸಂಭ್ರಮದಲ್ಲಿದೆ. ಆದರೆ ಬೀದಿ ನಾಯಿಗಳ ಕಾಟಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ. ಈ ಬೀದಿ ನಾಯಿಗಳ ಕಾಟದಿಂದಾಗಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಇದನ್ನು ಓದಿ : Bengaluru crime : ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಆಮಿಷ : 4 ಕೋಟಿ ರೂ ಸುಲಿಗೆಗೆ ಮುಂದಾದ ಸುಂದರಿಯ ಬಂಧನ
ಮಣಿಪಾಲ ಅಕಾಡೆಮಿ ಶಾಲೆಯಲ್ಲಿ ಕಲಿಯುತ್ತಿರುವ ಒಂದನೇ ತರಗತಿಯ ಬಾಲಕಿ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಗಾಯಗೊಂಡಿರುವ ಬಾಲಕಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಅದರಲ್ಲೂ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಮಿತಿ ಮೀರಿದೆ. ಶ್ವಾನಗಳ ಕಾಟದಿಂದ ಹಿರಿಯ ನಾಗರಿಕರು, ಚಿಕ್ಕಮಕ್ಕಳು ನಡೆದಾಡುವುದೇ ಕಷ್ಟವಾಗಿದೆ. ಇನ್ನು ಜನರ ಸಮಸ್ಯೆ ಬಗ್ಗೆ ವ್ಯವಸ್ಥೆ ಕಿವುಡಾಗಿದೆ.
Discussion about this post