ಬಿಜೆಪಿಯವರ ಮತ ಗಳಿಕೆ ತಂತ್ರವನ್ನು ಮತ್ತೊಮ್ಮೆ ( pramod muthalik) ಪ್ರಮೋದ್ ಮುತಾಲಿಕ್ ಬಯಲು ಮಾಡಿದ್ದಾರೆ
ಹುಬ್ಬಳ್ಳಿ : ಸಿದ್ದರಾಮಯ್ಯ ಅವರ ಅನ್ನದ ಬಟ್ಟಲಿನ ಬಗ್ಗೆ ಇನ್ನಿಲ್ಲದಂತೆ ತಲೆ ಕೆಡಿಸಿಕೊಂಡಿರುವ ಬಿಜೆಪಿ ಮಾಂಸಹಾರ ರಾಜಕೀಯ ಶುರುವಿಟ್ಟುಕೊಂಡಿದೆ. ತಾನು ಯಾವಾಗ ಏನು ತಿಂದೆ ಅನ್ನುವುದು ಸಿದ್ದರಾಮಯ್ಯ ಅವರಿಗೆ ಮರೆತು ಹೋಗಬಹುದು, ಆದರೆ ಬಿಜೆಪಿಯವರಿಗೆ ಅದು ನೆನಪಿರುತ್ತದೆ. ( pramod muthalik)
ಇದನ್ನು ಓದಿ : Agneepath naxal : ಅಗ್ನಿಪಥ ಹಿಂಸಾಚಾರದಲ್ಲಿ ನಕ್ಸಲ್ ಕೈವಾಡ
ಈ ನಡುವೆ ಆಹಾರ ವಿಷಯದಲ್ಲಿ ಸಿದ್ದರಾಮಯ್ಯ ವಾದಕ್ಕೆ ಬೆಂಬಲ ಸೂಚಿಸಿರುವ ಪ್ರಮೋದ್ ಮುತಾಲಿಕ್, ಸಿದ್ದರಾಮಯ್ಯ ಮಾಂಸಹಾರ ತಿಂದು ದೇವಸ್ಥಾನಕ್ಕೆ ಹೋಗಿರುವುದು ವಿಷಯವೇ ಅಲ್ಲ ಅಂದಿದ್ದಾರೆ. ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ ಅನ್ನುವ ಸಿದ್ದರಾಮಯ್ಯ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವ ಮುತಾಲಿಕ್, ಇದು ಚರ್ಚೆಯ ವಿಷಯವೇ ಅಲ್ಲ, ಬಿಜೆಪಿಯವರು ಸುಮ್ಮನೆ ಸಿದ್ದರಾಮಯ್ಯ ಅವರನ್ನು ಆಹಾರದ ವಿಚಾರದಲ್ಲಿ ಎಳೆದು ತರುತ್ತಿದ್ದಾರೆ. ಪರಿಸ್ಥಿತಿ ನೋಡಿದರೆ ಬಿಜೆಪಿಯ ವರ್ತನೆ ಅಸಹ್ಯ ಹುಟ್ಟಿಸುವಂತಿದೆ.
ಸಿದ್ದರಾಮಯ್ಯ ಅವರು ಸಾವರ್ಕರ್ ಬಗ್ಗೆ ಕೊಟ್ಟಿರುವ ಹೇಳಿಕೆಯ ಕುರಿತಂತೆ ಬಿಜೆಪಿ ಚರ್ಚೆ ನಡೆಸಲಿ, ಬದಲಾಗಿ ಹೀಗೆ ಕೆಲಸಕ್ಕೆ ಬಾರದ ವಿಚಾರದ ಬಗ್ಗೆ ಕಾಲಹರಣ ಯಾಕೆ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.
Discussion about this post