ಇತ್ತೀಚಿನ ದಿನಗಳಲ್ಲಿ ಯುವಕರೇ ಹೃದಯಾಘಾತಕ್ಕೆ ( Heart attack) ಬಲಿಯಾಗುತ್ತಿರುವುದು ಆತಂಕ ಹುಟ್ಟಿಸಿದೆ
ಬೆಳ್ತಂಗಡಿ : ಹೃದಯಾಘಾತದಿಂದ ಪಿಯುಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ದಾರುಣ ಘಟನೆ ಬೆಳ್ತಂಗಡಿಯ ನೆರಿಯ ಗ್ರಾಮದ ಪಿಲಿಕಳ ಪಂಪ್ ಹೌಸ್ ಬಳಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು 17 ವರ್ಷದ ಸಚಿನ್ ಎಂದು ಗುರುತಿಸಲಾಗಿದೆ. ಮೊಹರಂ ಕಾರಣದಿಂದ ಶಾಲೆಗೆ ರಜೆ ಇತ್ತು. ಹೀಗಾಗಿ ಮನೆಯಲ್ಲೇ ಇದ್ದ ಸಚಿನ್ ಏಕಾಏಕಿ ಎದೆ ನೋವು ಅಂದಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಯುವಕ ಕೊನೆಯುಸಿರೆಳೆದಿದ್ದಾನೆ.
ಇದನ್ನು ಓದಿ : Praveen Nettar murder case ನಲ್ಲಿ 7 ಆರೋಪಿಯನ್ನು ಬಂಧಿಸಿದ ಖಾಕಿ ಪಡೆ
ಮುಂಡಾಜೆ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅನ್ನಲಾಗಿದೆ.
ಅವಳಿ ಮಕ್ಕಳ ಪೈಕಿ ಒಬ್ಬನಾದ ಸಚಿನ್ ತಂದೆ ತಾಯಿ ಮತ್ತು ಇಬ್ಬರು ಸಹೋದರರಿಯನ್ನು ಅಗಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕಾದ ಆರೋಗ್ಯ ಇಲಾಖೆ ಮೌನಕ್ಕೆ ಶರಣಾಗಿದೆ. ವೈದ್ಯರೇ ಆರೋಗ್ಯ ಸಚಿವರಾಗಿದ್ದಾರೆ, ಆದರೆ ಜನರ ಆತಂಕ ದೂರ ಮಾಡುವ ಕೆಲಸವಾಗುತ್ತಿಲ್ಲ.
Discussion about this post