ಪಕ್ಷಾತೀತ ಕಾರ್ಯಕ್ರಮ ಅಂದಿರುವ ಡಿಕೆಶಿ ರಾಜಧಾನಿಯಲ್ಲಿ ನಮ್ದೇ ಹವಾ (Freedom March) ಎಂದು ತೋರಿಸಲಿದ್ದಾರೆ
ಬೆಂಗಳೂರು : ಸಿದ್ದರಾಮೋತ್ಸವದ ಯಶಸ್ಸಿನ ಬೆನ್ನಲ್ಲೇ ರಾಜಧಾನಿಯಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.( Freedom March) ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ 75ನೇ ಸ್ವಾತಂತ್ರ್ಯೋತ್ಸವ ಪಾದಯಾತ್ರೆಯನ್ನು ಡಿಕೆಶಿ ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಪಾದಯಾತ್ರೆ ಸದ್ದು ಮಾಡಬೇಕು ಅನ್ನುವ ನಿಟ್ಟಿನಲ್ಲಿ ಪ್ರಿಯಾಂಕ ವಾದ್ರಾ ಅವರನ್ನು ಬೆಂಗಳೂರಿಗೆ ಕರೆಸಲಿರುವ ಡಿಕೆಶಿ ಈ ಮೂಲಕ ತಾಕತ್ತು ತೋರಲಿದ್ದಾರೆ. ಆದರೆ ಕಾಂಗ್ರೆಸ್ ಮೂಲಗಳ ಪ್ರಕಾರ ಇದು ಸಿದ್ದರಾಮೋತ್ಸವಕ್ಕೆ ಎದಿರೇಟಲ್ಲ ಬದಲಾಗಿ ಬಿಜೆಪಿಯ ಹರ್ ಘರ್ ತಿರಂಗಾಕ್ಕೆ ಏದಿರೇಟು ಅನ್ನಲಾಗಿದೆ.
ಇದನ್ನು ಓದಿ : mangala gowri maduve ಗೆ ಮಂಗಳ ರಾಮ್ ಜೀ ಹೇಳಿದ್ದೇನು…
ಇನ್ನು ಡಿಕೆ ಶಿವಕುಮಾರ್ ಇದೊಂದು ಪಕ್ಷಾತೀತ ಕಾರ್ಯಕ್ರಮ, ಎಲ್ಲಾ ವರ್ಗದ ಜನರ ಕುಟುಂಬ ಸದಸ್ಯರು ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಅಂದಿದ್ದಾರೆ.
ಏನಿದು ಪಾದಯಾತ್ರೆ
ರಾಜ್ಯದ ಪ್ರತೀ ಜಿಲ್ಲೆಯಲ್ಲೂ 75 ಕಿಮೀ ಪಾದಯಾತ್ರೆ ನಡೆಸಿ ಅಮೃತ ಮಹೋತ್ಸವ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪಾದಯಾತ್ರೆ ಪ್ರಾರಂಭಗೊಂಡಿದೆ. ಅದರ ಸಮಾರೋಪ ಬೆಂಗಳೂರಿನಲ್ಲಿ ನಡೆಯಲಿದೆ. ಆಗಸ್ಟ್ 15 ರಂದು ಮಧ್ಯಾಹ್ನ 2.30ಕ್ಕೆ 1 ಲಕ್ಷ ಜನರು ರಾಷ್ಟ್ರಧ್ವಜದೊಂದಿಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ತನಕ ಪಾದಯಾತ್ರೆ ನಡೆಸಲಿದ್ದಾರೆ. ಇದೇ ಪಾದಯಾತ್ರೆಯಲ್ಲಿ ಪ್ರಿಯಾಂಕ ವಾದ್ರಾ ಕೂಡಾ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಅಂದ್ರೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯಾವುದೇ ನಾಯಕರ ಭಾಷಣ ಇರೋದಿಲ್ಲ. ಬದಲಾಗಿ ಬಾಲಿವುಡ್ ಗಾಯಕ ಹರಿಹರನ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಜೊತೆಗೆ ಅನೇಕ ಗಣ್ಯರಿಗೆ ಸನ್ಮಾನ ನಡೆಯಲಿದೆ.
Discussion about this post