ಕಳೆದ ಹಲವು ದಿನಗಳಿಂದ ಜನರ ನಿದ್ದೆಗೆಡಿಸಿರುವ ಚಿರತೆ ( Belagavi leopard) ಹಿಡಿಯಲು ಅರಣ್ಯಾಧಿಕಾರಿಗಳು ಕೂಡಾ ನಿದ್ದೆಗೆಟ್ಟಿದ್ದಾರೆ
ಬೆಳಗಾವಿ : ಗಾಲ್ಫ್ ಮೈದಾನದಲ್ಲಿ ಕಾಣಿಸಿಕೊಂಡಿರುವ ಚಿರತೆ ( Belagavi leopard) ಹಿಡಿಯಲು ಕಾರ್ಯಾಚರಣೆ ಮುಂದುವರಿದಿದ್ದು, ಈ ನಡುವೆ ಮುನ್ನೆಚ್ಚರಿಕೆ ಸಲುವಾಗಿ ಗಾಲ್ಫ್ ಮೈದಾನದ ಒಂದು ಕಿ.ಮೀ. ಸುತ್ತಮುತ್ತಲಿನ 22 ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಮೈದಾನದ ಸಮೀಪ 22 ಶಾಲೆಗಳು ಇದ್ದು, ಮೌಖಿಕ ಸೂಚನೆ ಮೇರೆಗೆ ( Belagavi leopard ) ಬೆಳಗಾವಿ ನಗರ, ಗ್ರಾಮೀಣ ಬಿಇಒ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : Zee Kannada Sorry : ಕರಾವಳಿಗರ ಹೋರಾಟಕ್ಕೆ ಜಯ : ಯಕ್ಷ ಪ್ರೇಮಿಗಳ ಮುಂದೆ ಮಂಡಿಯೂರಿದ ಝೀ ಕನ್ನಡ
ಈ ಆದೇಶದಂತೆ ಜಾಧವ ನಗರ, ಹನುಮಾನ ನಗರ, ಕುವೆಂಪು ನಗರ, ವಿಶ್ವೇಶ್ವರ ನಗರ, ಸಹ್ಯಾದ್ರಿ ನಗರ, ದೂರದರ್ಶನ ಕೇಂದ್ರ, ಕ್ಯಾಂಪ್ ಪ್ರದೇಶ ಹಿಂಡಲಗಾ ಹಾಗೂ ವಿಜಯನಗರದ ಶಾಲೆಗಳು ಇಂದು ರಜೆ ಸಾರಿವೆ.
ಆಗಸ್ಟ್ 5ರಂದು ಜಾಧವ ನಗರದಲ್ಲಿ ಮೊದಲು ಚಿರತೆ ಕಾಣಿಸಿಕೊಂಡಿತ್ತು. ಕಟ್ಟಡ ಕಾರ್ಮಿಕನ ಮೇಲೆ ಎರಗಿದ್ದ ಚಿರತೆ ಆತನನ್ನು ಗಾಯಗೊಳಿಸಿತ್ತು. ಇದಾದ ಬಳಿಕ ಚಿರತೆ ಸೆರೆ ಕಾರ್ಯಾಚರಣೆ ಪ್ರಾರಂಭವಾಗಿತ್ತು. ದಿನ ನಾಲ್ಕು ಕಳೆದರೂ ಚಿರತೆ ಮಾತ್ರ ಪತ್ತೆಯಾಗಿಲ್ಲ. ಈ ನಡುವೆ ಗಾಲ್ಫ್ ಮೈದಾನದಲ್ಲಿ ಚಿರತೆ ಕಾಣಿಸಿಕೊಂಡಿದೆ ಅನ್ನಲಾಗಿದೆ. ಹೀಗಾಗಿ 7 ಬೋನು ಇರಿಸಿ, 16 ಟ್ರ್ಯಾಪ್ ಕ್ಯಾಮರಾ ಅಳವಡಿಸಿ ಕಾರ್ಯಾಚರಣೆ ಮುಂದುವರಿಸಲಾಗಿದೆ.
Discussion about this post