ತೆಲುಗಿನ ಶ್ರೀಮತಿ ಶ್ರೀನಿವಾಸ್ ಧಾರಾವಾಹಿ ಶೂಟಿಂಗ್ ವೇಳೆ ಕನ್ನಡ ಕಿರುತೆರೆ ನಟ ಚಂದನ್ ಕುಮಾರ್ (chandan kumar) ಮೇಲೆ ಅಲ್ಲಿನ ತಂತ್ರಜ್ಞರು ಹಲ್ಲೆ ಮಾಡಿದ್ದರು. ಕಲಾವಿದರು ಅಂದ್ರೆ ಒಂದೇ ಕುಟುಂಬ ಎಂದು ಬದುಕಬೇಕಾದ ಮಂದಿ ಅದನ್ನು ಮರೆತಿದ್ದರು
ಇದಾದ ಬಳಿಕ ಶ್ರೀಮತಿ ಶ್ರೀನಿವಾಸ್ ಪ್ರಾಜೆಕ್ಟ್ ನಿಂದ ಹೊರ ನಡೆದಿದ್ದ ಚಂದನ್, (chandan kumar) ಬೆಂಗಳೂರಿಗೆ ಬಂದು ತನ್ನ ಮೇಲಾದ ಅನ್ಯಾಯವನ್ನು ಹೇಳಿಕೊಂಡಿದ್ದರು. ಚಂದನ್ ಅವರ ನೋವಿಗೆ ಕೆಲ ಕನ್ನಡ ಪರ ಸಂಘಟನೊಂದು ದನಿಗೂಡಿಸಿತ್ತು. ಅನೇಕ ಕನ್ನಡ ಹೋರಾಟಗಾರರು ಘಟನೆ ಬಗ್ಗೆ ದಿವ್ಯ ಮೌನಕ್ಕೆ ಶರಣಾಗಿದ್ದರು. ಈ ನಡುವೆ ಕಿರಿಕ್ ಕೀರ್ತಿ ಚಂದನ್ ಪರ ಮಾತನಾಡಿದ್ದಾರೆ.
ಈ ನಡುವೆ ಸಮಸ್ಯೆಯನ್ನು ಕೂತು ಬಗೆ ಹರಿಸಬೇಕಾಗಿದ್ದ ತೆಲುಗು ಟಿವಿ ಅಸೋಸಿಯೇಷನ್ ಚಂದನ್ (chandan kumar)ಅವರನ್ನು ಬ್ಯಾನ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ತೆಲುಗು ಟಿವಿ ಅಸೋಸಿಯೇಷನ್ ಮುಖಂಡರು ತೆಲುಗು ಇಂಡಸ್ಟ್ರಿಯ ಆತ್ಮಗೌರವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : Naga temple : ಭಾರತದ ಪ್ರಸಿದ್ಧ ನಾಗ ದೇವಾಲಯಗಳು : ನಾಗದೋಷ ಪರಿಹರಿಸುವ ಪುಣ್ಯ ಕ್ಷೇತ್ರ
ಚಂದನ್ ಅವರು ಇಡೀ ಇಂಡಸ್ಟ್ರೀ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಚಂದನ್ ಇಲ್ಲದೆ ಶ್ರೀಮತಿ ಶ್ರೀನಿವಾಸ ಶೂಟಿಂಗ್ ನಡೆಯುತ್ತಿದೆ. ಕನ್ನಡದ ಕಲಾವಿದರೇ ಭಾಗವಹಿಸಿದ್ದಾರೆ. ಇದು ನಮ್ಮ ಆತ್ಮಗೌರವದ ವಿಷಯ ಅಂದಿದ್ದಾರೆ.
ಇನ್ನು ತಮ್ಮನ್ನು ಬ್ಯಾನ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚಂದನ್ ಅಯ್ಯೋ ಅವರು ಬ್ಯಾನ್ ಮಾಡುವ ಅಗತ್ಯವಿಲ್ಲ. ನಾನೇ ತೆಲುಗು ಇಂಡಸ್ಟಿಯಿಂದ ವಾಕೌಟ್ ಮಾಡಿದ್ದೇನೆ ಅಂದಿದ್ದಾರೆ.
Discussion about this post