ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ಅಡ್ಡ ಹಾಕಲು ಸಿಕ್ಕಾಪಟ್ಟೆ ಸರ್ಕಸ್ ಮಾಡ್ತಾರೆ. ಮರೆಯಲ್ಲಿ ನಿಂತು ಫೈನ್ ಹಾಕುವುದೇ ಇವರಿಗೆ ಮಜಾ. ಈ ನಡುವೆ ವೈಟ್ ಫೀಲ್ಡ್ ನಲ್ಲಿ ಕಂಡು ಬಂದ ಹೊಸ ಸೈನ್ ಬೋರ್ಡ್ (traffic symbol) ಬಗ್ಗೆ ಸಿಕ್ಕಾಪಟ್ಟೆ ಜನ ತಲೆ ಕೆಡಿಸಿಕೊಂಡಿದ್ದರು
ಬೆಂಗಳೂರಿನ ವೈಟ್ ಫೀಲ್ಡ್ ರಸ್ತೆಯೊಂದರಲ್ಲಿ ಕಂಡು ಬಂದ ಹೊಸ ಸೈನ್ ಬೋರ್ಡ್ (traffic symbol) ಸಾಕಷ್ಟು ಮಂದಿಯಲ್ಲಿ ಇದೇನಿದು ಅನ್ನುವ ಪ್ರಶ್ನೆ ಮೂಡಿಸಿತ್ತು. ಬಿಳಿ ಹಿನ್ನಲೆಯಲ್ಲಿ ನಾಲ್ಕು ಕಪ್ಪು ಚುಕ್ಕೆಗಳನ್ನು ಹೊಂದಿದ್ದ ಸೈನ್ ಬೋರ್ಡ್ ಕಂಡ ಮಂದಿ ಇದು ಹಂಪ್ಸ್ ಇದೆ ಅನ್ನುವ ಎಚ್ಚರಿಕೆ ಇರಬಹುದೇ ಅಂದುಕೊಂಡಿದ್ದರು.
ಅರೇ ಇಷ್ಟೆಲ್ಲಾ ಗೊಂದಲಬೇಕಾ ಎಂದು ಅನಿರುದ್ಧ ಚಟರ್ಜಿ ಅನ್ನುವ ಪ್ರಯಾಣಿಕರು, ಇದೇನಿದು ಹೊಸ ಬೋರ್ಡ್ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಪ್ರಶ್ನಿಸಿದ್ದರು. ಸೈನ್ ಬೋರ್ಡ್ ಫೋಟೋ ಕ್ಲಿಕ್ ಮಾಡಿ ಟ್ವೀಟರ್ ಗೆ ಅಪ್ ಲೋಡ್ ಮಾಡುವ ಮೂಲಕ ಪೊಲೀಸರಿಂದಲೇ ಉತ್ತರ ಬಯಸಿದ್ದರು.
ಇದನ್ನೂ ಓದಿ : Prakruti Mishra – babushaan mohanty : ನಟಿ ಜೊತೆ ವಿವಾಹಿತನ ನಟನ ಪ್ರೇಮ ಪ್ರಸಂಗ : ನಡು ರಸ್ತೆಯಲ್ಲೇ ಚಳಿ ಬಿಡಿಸಿದ ಪತ್ನಿ
ಇದೀಗ ಟ್ರಾಫಿಕ್ ಪೊಲೀಸರು ಉತ್ತರಿಸಿದ್ದು, ಹೋಪ್ ಫಾರ್ಮ್ ಜಂಕ್ಷನ್ ಬಳಿ ಅಂಧರ ಶಾಲೆಯೊಂದಿದೆ. ಅಂಧರು ರಸ್ತೆಯಲ್ಲಿ ಓಡಾಡುವಾಗ ಪ್ರಯಾಣಿಕರು ಎಚ್ಚರ ವಹಿಸಲಿ ಎಂದು ಈ ಹೊಸ ಬೋರ್ಡ್ ನಿಲ್ಲಿಸಲಾಗಿದೆ ಅಂದಿದ್ದಾರೆ.
ಇದೀಗ ಪೊಲೀಸರ ಉತ್ತರ ಕಂಡ ಅನೇಕರು ಭೇಷ್ ಅಂದಿದ್ದಾರೆ. ಹೊಸದೊಂದು ಬೋರ್ಡ್ ಪರಿಚಯಿಸಿದ ನಿಮಗೆ ಧನ್ಯವಾದ ಅಂದಿದ್ದಾರೆ.
Discussion about this post