ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿ ಮತ್ತೆ ಕಾಂಗ್ರೆಸ್ ಗೆ ಬಂದಿರುವ ಭಾವನಾ (Bhavana Ramanna ) ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮುಜುಗರಕ್ಕೆ ಗುರಿಯಾದರು
ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸುವುದನ್ನು ವಿರೋಧಿಸಿ ಕಾಂಗ್ರೆಸ್ ಕೈಗೊಂಡಿರುವ ಪ್ರತಿಭಟನೆಯಲ್ಲಿ ನಟಿ ಭಾವನಾ ರಾಮಣ್ಣ (Bhavana Ramanna ) ಮುಜುಗರಕ್ಕೆ ಗುರಿಯಾದ ಘಟನೆ ನಡೆದಿದೆ.
ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಮೌನ ಸತ್ಯಾಗ್ರಹದಲ್ಲಿ ಭಾಗಿಯಾಗಲು ನಟಿ ಭಾವನಾ (Bhavana Ramanna ) ಆಗಮಿಸಿದ್ದರು. ಈ ವೇಳೆ ನೇರವಾಗಿ ವೇದಿಕೆ ಹತ್ತಿ ನಾಯಕರೊಂದಿಗೆ ಕೂರಲು ಮುಂದಾದ್ರು. ಅದು ಕೂಡಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗಾಗಿ ಮೀಸಲಾದ ಕುರ್ಚಿಯಲ್ಲೇ ಆಸೀನರಾದ್ರು.
ಇದನ್ನೂ ಓದಿ : dk shivakumar : ಜೆಡಿಎಸ್ ನಿಂದ ದೂರವಾಗುತ್ತಿರುವ ಒಕ್ಕಲಿಗರು : ವಿಧಾನಸೌಧದ ಮೂರನೇ ಮಹಡಿಯತ್ತ ಡಿಕೆಶಿ ದೃಷ್ಟಿ
ಈ ವೇಳೆ ಇದನ್ನು ಪ್ರಶ್ನಿಸಿದ ಕಾರ್ಯಕರ್ತೆಯೊಬ್ಬರು ಭಾವನಾ (Bhavana Ramanna ) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಗೆ ಹೋಗಿದ್ರಿ ಈಗ ಬಂದಿದ್ದೀರಾ? ಮುಂದೆ ಬಂದು ಕೂರೋದಕ್ಕೆ ಹೋಗ್ತೀರಾ ಎಂದು ತರಾಟೆ ತೆಗೆದುಕೊಂಡರು. ಇದರಿಂದ ಗಲಿಬಿಲಿಯಾದ ಭಾವನಾ ಕಾರ್ಯಕರ್ತೆಯನ್ನು ಸಮಾಧಾನ ಪಡಿಸಿದರು. ಆದರೆ ಕಾರ್ಯಕರ್ತೆ ಬಗ್ಗಲಿಲ್ಲ, ಅಲ್ಲೇ ಕೂತಿದ್ದ ನಾಯಕರಲ್ಲೂ ತಮ್ಮ ಅಸಮಾಧಾನ ಹೊರ ಹಾಕಿದರು.
ಈ ವೇಳೆ ಬಿಕೆ ಹರಿಪ್ರಸಾದ್, ಅಭಯಚಂದ್ರ ಜೈನ್ ಹೀಗೆ ಸಾಲು ಸಾಲು ನಾಯಕರೇ ಕಾರ್ಯಕರ್ತೆಯ ಆಕ್ರೋಶಕ್ಕೆ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದರು.
ನಂತರ ವೇದಿಕೆಯಿಂದ ಕೆಳಗೆ ಬಂದು ಮತ್ತೆ ಕುರ್ಚಿ ಸಿಗದೆ ಭಾವನಾ ಪರದಾಟ ನಡೆಸಿದರು. ಆಗ್ಲೂ ಆಕ್ರೋಶ ಭರಿತ ಕಾರ್ಯಕರ್ತೆಯನ್ನು ಸಮಾಧಾನಪಡಿಸಲು ಭಾವನಾ ಮುಂದಾದ್ರು, ಆದರೆ ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸೈಡಲ್ಲಿ ಕುಳಿತುಕೊಳ್ಳಿ ಎಂದು ಕಾರ್ಯಕರ್ತೆ ಖಡಕ್ಕ್ ಆಗಿಯೇ ಉತ್ತರಿಸಿದ್ದಾರೆ. ಕೊನೆಗೆ ಭಾವನಾ ಅವರಿಗೆ ಕಾರ್ಯಕರ್ತರು ಕುರ್ಚಿ ವ್ಯವಸ್ಥೆ ಮಾಡಿದರು.
Discussion about this post