ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ವಾಹಿನಿ ಗುರಿಯಾಗಿದ್ದು, ಈ ಬಾರಿ ಬಿಡುವ ಪ್ರಶ್ನೇಯೇ ಇಲ್ಲ ಅಂದಿದ್ದಾರೆ ಯಕ್ಷಗಾನದ ಅಭಿಮಾನಿಗಳು – boycott zee kannada
ಬೆಂಗಳೂರು : ಈ ಬಾರಿ ಯಕ್ಷಗಾನಕ್ಕೆ ಝೀ ಕನ್ನಡದಿಂದ ಆಗಿರುವ ಅವಮಾನಕ್ಕೆ ತಕ್ಕ ಉತ್ತರ ನೀಡಲು ಯಕ್ಷಗಾನ ಅಭಿಮಾನಿಗಳು ನಿರ್ಧರಿಸಿದ್ದಾರೆ. ( boycott zee kannada) ಈ ಸಂಬಂಧ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದ್ದು, ರಾಜ್ಯದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ಯಕ್ಷಗಾನ ಪ್ರೇಮಿಗಳು ನಿರ್ಧರಿಸಿದ್ದಾರೆ.
ಈ ನಡುವೆ ಮೊದಲ ದೂರು ಕಡಲತಡಿ ಭಾರ್ಗವ ಶಿವರಾಮ ಕಾರಂತ ಹುಟ್ಟೂರಿನಲ್ಲೇ ದಾಖಲಾಗಿದೆ.( ಕಾರಂತರು ಯಕ್ಷಗಾನ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಅನ್ನುವುದು ಗಮನಾರ್ಹ ಅಂಶ.) ಉಡುಪಿ ಬ್ರಹ್ಮಾವರ ಕೋಟ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, ಜೀ ಕನ್ನಡ ದೃಶ್ಯ ಮಾದ್ಯಮ ಸಂಸ್ಥೆಯು ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಕರಾವಳಿಯ ಶ್ರೀಮಂತ ಕಲಾ ಪ್ರಾಕಾರವಾದ ಯಕ್ಷಗಾನವನ್ನ ಸಿನಿಮಾದ ಸಂಗೀತದ ಜೊತೆಗೆ ಅತ್ಯಂತ ಅಶ್ಲೀಲವಾದ ಹಾವ-ಭಾವದಲ್ಲಿ ಪ್ರದರ್ಶಿಸಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ.
ಯಕ್ಷಗಾನವನ್ನ ನಾವೆಲ್ಲರೂ ಧಾರ್ಮಿಕ ಭಾವನೆಯಲ್ಲಿ ಬೆಳಕಿನ ಸೇವೆ ಎಂದೇ ಪೂಜ್ಯ ಭಾವದಲ್ಲಿ ಗೌರವಿಸುತ್ತೇವೆ. ಆದರೆ ಝೀ ದೃಶ್ಯವಾಹಿನಿ ಪ್ರತೀ ಸಾರಿಯೂ ಯಕ್ಷಗಾನವನ್ನು ವಿರೂಪಗೊಳಿಸಿ ಪ್ರದರ್ಶಿಸುತ್ತಾ ಹಿಂದೂ ಧಾರ್ಮಿಕ ಭಾವನೆಗೆ ನೋವನ್ನು ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಆ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಮತ್ತು ನೃತ್ಯ ಸಂಯೋಜಕ ಮಂಜು ಮಾಸ್ಟರ್ ಮತ್ತು ಸಂಬಂಧಪಟ್ಟವರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ನಮಗೆ ನ್ಯಾಯ ದೊರಕಿಸಿಕೊಡುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಮನವಿ ಮಾಡಲಾಗಿದೆ. boycott zee kannada
Zee Kannada : ವೇದಿಕೆಯಲ್ಲಿ ಅಪಮಾನ : ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆಯಾಚನೆ
Zee Kannada ವಾಹಿನಿ ವೀಕ್ಷಕರ ಆಕ್ರೋಶಕ್ಕೆ ತುತ್ತಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಕರಾವಳಿಯನ್ನು ಕೆಣಕಿದ ಆರೋಪಕ್ಕೆ ಗುರಿಯಾಗಿತ್ತು.
ಬೆಂಗಳೂರು : Zee Kannada ವಾಹಿನಿ ವಿರುದ್ಧ ಈ ಬಾರಿ ಕರಾವಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಿಯಾಲಿಟಿ ಶೋ ಒಂದರಲ್ಲಿ ಯಕ್ಷಗಾನವನ್ನು ಅವಮಾನಿಸಿರುವುದು ಕರಾವಳಿಗರಿಗೆ ನೋವು ತಂದಿದೆ. ಆರಾಧಾನ ಕಲೆಯಾಗಿರುವ ಯಕ್ಷಗಾನದ ಕಿರೀಟ, ಯಕ್ಷಗಾನದ ಗೆಜ್ಜೆ ಹೀಗೆ ಪ್ರತಿಯೊಂದು ವಸ್ತುವನ್ನೂ ಗೌರವದಿಂದ ಕಾಣಲಾಗುತ್ತದೆ. ಹಾಗಿರುವಾಗ ಯಕ್ಷಗಾನದ ವೇಷಭೂಷಣ ಧರಿಸಿ, ಅದೇ ಪ್ರಕಾರದಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ :Zameer Ahmed Khan : ಬಹಿರಂಗವಾಗಿ ಮಾತನಾಡುವಾಗ ಎಚ್ಚರವಿರಲಿ : ಜಮೀರ್ ಗೆ AICC ಕಡೆಯಿಂದಲೇ ಬಂತು ಎಚ್ಚರಿಕೆ
ಇನ್ನು ಯಕ್ಷಗಾನ ಕಲಿಯೋದು ಅಂದ್ರೆ ಅದೊಂದು ತಪ್ಪಸ್ಸು.ಹಾಗಿರುವ ಕಾರಣದಿಂದ ಸಹಜವಾಗಿಯೇ Zee Kannada ವಿರುದ್ಧ ಕರಾವಳಿ ಕೆಂಡವಾಗಿದೆ. ಈ ಹಿಂದೆಯೂ ಇದೇ ರೀತಿಯಲ್ಲಿ ಯಕ್ಷಗಾನಕ್ಕೆ ಅವಮಾನವಾಗಿತ್ತು. ಆಗ್ಲೂ ಕ್ಷಮೆ ಕೇಳಲಾಗಿತ್ತು. ಮತ್ತೆ ಅದೇ ತಪ್ಪು ಮಾಡಲಾಗಿತ್ತು. ಪದೇ ಪದೇ ತಪ್ಪು ಮಾಡುತ್ತಿರುವುದನ್ನು ಇದು ಉದ್ದೇಶಪೂರ್ವಕ ಅನ್ನುವುದು ಯಕ್ಷಗಾನ ಪ್ರೇಮಿಗಳ ಆಕ್ರೋಶ.
ಇದನ್ನೂ ಓದಿ : Suspected terrorist : ಸ್ವಿಗ್ಗಿ ಡೆಲಿವರಿ ಬಾಯ್ ಆಗಿದ್ದ ಶಂಕಿತ ಉಗ್ರನ ಸೆರೆ ಹಿಡಿದ ಸಿಸಿಬಿ
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ boycott zee kannada ಟ್ರೆಂಡ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ವಾಹಿನಿ, ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕೆಲವರಿಗೆ ನೋವಾಗಿದೆ, ನೋವಾಗಿದ್ರೆ ಕ್ಷಮೆ ಇರಲಿ ಎಂದು ಕ್ಷಮೆಯನ್ನು ಕೇಳಿದೆ. ಆದರೆ ಯಕ್ಷಗಾನ ಪ್ರೇಮಿಗಳು ಈ ಕ್ಷಮೆಯನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ವೇದಿಕೆಯಲ್ಲಿ ಅವಮಾನಿಸುವ ನೀವು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳುವುದು ಹೊಸದೇನಲ್ಲ. ಎಲ್ಲಿ ಅವಮಾನ ಮಾಡಿದ್ದೀರೋ ಅಲ್ಲೇ ಕ್ಷಮೆ ಕೇಳಿ. ಹೀಗಾಗಿ ವೇದಿಕೆಯಲ್ಲಿ ಕ್ಷಮೆ ಕೇಳದ ಹೊರತು ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ :zameer ahmed : ಡಿಕೆಶಿಯೂ ಅಲ್ಲ ಸಿದ್ದುಗೂ ಇಲ್ಲ : ಮುಂದಿನ ಸಿಎಂ ಜಮೀರ್ ಅಹಮ್ಮದ್
ಈ ಬಾರಿ ಝೀ ಕನ್ನಡದ ವಿರುದ್ಧ ಕಾನೂನು ಹೋರಾಟಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸೇರಿದಂತೆ ಹಲವಾರು ಯಕ್ಷಗಾನ ಸಂಘಟನೆಗಳು ನಿರ್ಧರಿಸಿದೆ. ಜೊತೆಗೆ ಹಲವಾರು ಸೆಲೆಬ್ರೆಟಿ ಯಕ್ಷಗಾನ ಕಲಾವಿದರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
Discussion about this post