ಮಳೆಗಾಲ ಬಂದ್ರೆ ಕಡಲ ತೀರದ ರಾಶಿಯಲ್ಲಿ ಚಿನ್ನ ಹುಡುಕುವ ( gold in beach sand ) ಕಾರ್ಯ ಪ್ರಾರಂಭವಾಗುತ್ತದೆ. ಇದೇನಪ್ಪ ಕಡಲ ತಡಿಯಲ್ಲಿ ಚಿನ್ನದ ಹುಡುಕುವ ಕಾರ್ಯ ಅಂತೀರಾ…
ಉಡುಪಿ : ಮಲ್ಪೆ ಬೀಚ್ ನಲ್ಲಿ ಇದೀಗ ಚಿನ್ನದ ಬೇಟೆ ( gold in beach sand ) ಪ್ರಾರಂಭವಾಗಿದೆ. ಮಳೆಗಾಲ ಪ್ರಾರಂಭವಾದ್ರೆ ಕರಾವಳಿಯ ಬಹುತೇಕ ಕಡಲ ತೀರಗಳಲ್ಲಿ ಚಿನ್ನಕ್ಕಾಗಿ ಹುಡುಕಾಟ ಪ್ರಾರಂಭವಾಗುತ್ತದೆ. ಅದರಲ್ಲೂ ಕಸದ ರಾಶಿ ಬಂದು ಬೀಳುವ ಪ್ರದೇಶದಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಯುತ್ತದೆ.
ಇದೇನಿದು ಮಳೆಗಾಲ ಬಂದ್ರೆ ಕಡಲ ತೀರದಲ್ಲಿ ಚಿನ್ನಡ ಗಣಿ ಉಂಟಾಗುವುದು ಹೇಗೆ ಅನ್ನುವ ಅನುಮಾನ ನಿಮ್ಮನ್ನು ಕಾಡಬಹುದು. ಆದರೆ ವಿಷಯ ಅದಲ್ಲ. ಒಂದು ಅಂದಾಜಿನ ಪ್ರಕಾರ ಮಲ್ಪೆ ಕಡಲ ಕಿನಾರೆಗೆ ವರ್ಷಕ್ಕೆ 35 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ನೀರಲ್ಲಿ ಆಟವಾಡುವ ವೇಳೆ, ಈಜಾಡುವ ವೇಳೆ ಸಾವಿರಾರು ಮಂದಿ ತಮ್ಮ ಚಿನ್ನಾಭರಣ ಕಳೆದುಕೊಳ್ಳುತ್ತಾರೆ. ಮಾತ್ರವಲ್ಲದೆ ಕೆಲ ಧಾರ್ಮಿಕ ವಿಧಿ ವಿಧಾನ ಸಂದರ್ಭದಲ್ಲೂ ಸಮುದ್ರಕ್ಕೆ ಚಿನ್ನ ಬಿಡುವ ಕ್ರಮವಿದೆ.
ಇದನ್ನೂ ಓದಿ : Devanahalli crime news : ಎರಡು ಗಂಟೆ ಯುವತಿ ಒತ್ತೆಯಾಳು : ಯುವಕನಿಂದ ಹಣ ಚಿನ್ನ ಸುಲಿಗೆ
ಹೀಗೆ ಕಡಲು ಸೇರಿದ ಚಿನ್ನ ಮಳೆಗಾಲದಲ್ಲಿ ದಡಕ್ಕೆ ಬಂದು ಬೀಳುತ್ತದೆ. ಭಾರೀ ಗಾತ್ರದ ಅಲೆಗಳು ಎದ್ದಾಗ ಕಸದ ಜೊತೆ ಚಿನ್ನವೂ ದಡ ಸೇರುತ್ತದೆ.ಕಡಲ ಆಳದಲ್ಲಿ ದೊಡ್ಡ ಅಲೆಗಳು ಸೃಷ್ಟಿಯಾದಾಗ ಕಸ ಸೇರಿದಂತೆ ಲೋಹದ ವಸ್ತುಗಳನ್ನು ದಡಕ್ಕೆ ಎಸೆದು ಹೋಗುತ್ತದೆ.
ಈ ಕಾರಣದಿಂದ ಸ್ಥಳೀಯರು ಮಳೆಗಾಲದಲ್ಲಿ ಕಡಲ ತೀರದಲ್ಲಿ ಬಿದ್ದ ಕಸದಲ್ಲಿ ಚಿನ್ನ ಹುಡುಕುವ ಕೆಲಸ ಮಾಡುತ್ತಾರೆ.
ರಾಹುಲ್ ಗಾಂಧಿ ಬರ್ತಾರೆ ಆದರೆ ಸರಿಯಾಗಿ ನಡೆಸಿಕೊಳ್ಳಿ : ರಾಜ್ಯ ಕಾಂಗ್ರೆಸ್ ಗೆ ಹೈಕಮಾಂಡ್ ಸೂಚನೆ
ಸಿದ್ದರಾಮೋತ್ಸವದ ಬಗ್ಗೆ ಇದೀಗ ಎಐಸಿಸಿಯಲ್ಲೇ ಗೊಂದಲವಿದೆ. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಗೈರು ಹಾಜರಾದ್ರೆ ಸಿದ್ದರಾಮಯ್ಯ ಬೆಂಬಲಿಗರು ಮುನಿಸಿಕೊಳ್ಳಬಹುದು. ಭಾಗವಹಿಸಿದ್ರೆ ಸಿದ್ದರಾಮಯ್ಯ ಬೆನ್ನಿಗೆ ರಾಹುಲ್ ಅನ್ನುವ ಸಂದೇಶ ರವಾನೆಯಾಗುತ್ತದೆ.
ಬೆಂಗಳೂರು : ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವ ಕಾರ್ಯಕ್ರಮ ಇದೀಗ ಬಹುಚರ್ಚಿತ ವಿಷಯ. ಈ ಕಾರ್ಯಕ್ರಮ ವಿಚಾರದಲ್ಲಿ ಡಿಕೆ ಶಿವಕುಮಾರ್ ಸಮಾಧಾನಗೊಂಡರೂ ಡಿಕೆಶಿ ಬೆಂಬಲಿಗರು ಸಮಾಧಾನಗೊಂಡಿಲ್ಲ. ಎಲ್ಲಿ ನಮ್ಮ ನಾಯಕನಿಗೆ ಅನ್ಯಾಯವಾಗುತ್ತದೋ ಅನ್ನುವ ಆತಂಕ ಅವರದ್ದು.
ಈ ನಡುವೆ ರಾಹುಲ್ ಗಾಂಧಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ. ಇಡಿ ವಿಚಾರಣೆ ವಿಚಾರದಲ್ಲಿ ಹೆಚ್ಚು ಕಡಿಮೆಯಾದರೆ ಮಾತ್ರ ರಾಹುಲ್ ಗಾಂಧಿ ಗೈರು ಹಾಜರಾಗಲಿದ್ದಾರೆ. ಈ ನಡುವೆ ಸಿದ್ದರಾಮೋತ್ಸವದ ಬಗ್ಗೆ ಸಂಪೂರ್ಣ ವಿವರಗಳನ್ನು ತರಿಸಿಕೊಂಡಿರುವ ಎಐಸಿಸಿ ಇಡೀ ಕಾರ್ಯಕ್ರಮ ಹೇಗೆ ನಡೆಯಬೇಕು ಅನ್ನುವ ಸೂಚನೆಯನ್ನು ರವಾನಿಸಿದೆ ಅನ್ನಲಾಗಿದೆ.
ಇದನ್ನೂ ಓದಿ : BBMP WARD : ವಾರ್ಡ್ ನಂಬರ್ 55ಕ್ಕೆ ಪುನೀತ್ ರಾಜ್ ಕುಮಾರ್ ಹೆಸರು : ಬಿಬಿಎಂಪಿ ವಾರ್ಡ್ ವಿಂಗಡಣೆ ಪೂರ್ಣ
ರಾಹುಲ್ ಗಾಂಧಿಯವರೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಪಕ್ಷಕ್ಕೆ ಹಾಗೂ ರಾಹುಲ್ ಅವರಿಗೆ ಮುಜುಗರವಾಗದಂತೆ ನೋಡಿಕೊಳ್ಳಬೇಕು. ಪಕ್ಷದ ಕಾರ್ಯಕ್ರಮವಾಗಿರಬೇಕು ಹೊರತು ವ್ಯಕ್ತಿಗಳನ್ನು ಮೆರೆಸಬಾರದು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ಅವರ ನಾಯಕತ್ವದಲ್ಲಿ ಚುನಾವಣೆ, ಸಿದ್ದರಾಮಯ್ಯ ಕೈ ಬಲಪಡಿಸಿ, ಸಿದ್ದರಾಮಯ್ಯ ಅವರೇ ಶಕ್ತಿ ಈ ರೀತಿ ಮಾತುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೇಳಬಾರದು ಎಂದು ಹೈಕಮಾಂಡ್ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣಾ ಸಮಿತಿಗೆ ಸೂಚಿಸಿದೆಯಂತೆ.
ಇದನ್ನೂ ಓದಿ : bengaluru roads : ಸಿಎಂ ಮನೆ ಮುಂದೆ ರಸ್ತೆಗೆ 29 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ : ಇದು ಕಾಮನ್ ಮ್ಯಾನ್ ಸಿಎಂ ಕಾರ್ಯವೈಖರಿ
Discussion about this post