ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಅನ್ನುವುದೇ ವಿಪರ್ಯಾಸ. ಈ ನಡುವೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ( BL Santhosh BJP )ಸಚಿವರಿಗೆ ಚಾಟಿ ಬೀಸಿದ್ದಾರೆ
ಬೆಂಗಳೂರು : ಸರಕಾರವನ್ನು ಕೇವಲ ಸಿಟಿ ರವಿ, ನಳಿನ್ ಕುಮಾರ್ ಕಟೀಲು ಸಮರ್ಥಿಸಿಕೊಂಡರೆ ಸಾಕಾ, ಸಚಿವರು ತಮ್ಮ ಸರ್ಕಾರ, ತಮ್ಮ ಪಕ್ಷವನ್ನು ಸಮರ್ಥ ಮಾಡಿಕೊಳ್ಳಲು ಇರುವ ಸಮಸ್ಯೆಯಾದರೇನು, ಹೀಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ( BL Santhosh BJP ) ತಮ್ಮ ಅಸಂತೋಷವನ್ನು ಹೊರ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
ಬೊಮ್ಮಾಯಿ ಸಂಪುಟದ ಬಹುತೇಕ ಸಚಿವರು ಕೇವಲ ತಮ್ಮ ಇಲಾಖೆಗೆ ಸೀಮಿತವಾಗಿದ್ದಾರೆ. ಸರ್ಕಾರ ಮತ್ತು ಪಕ್ಷವನ್ನು ಸಮರ್ಥಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ ಅನ್ನುವುದೇ ಸಂತೋಷ್ ಅವರ ಅಸಂತೋಷಕ್ಕೆ ಕಾರಣ ಎನ್ನಲಾಗಿದೆ. ಶುಕ್ರವಾರ ದೇವನಹಳ್ಳಿಯ ರೆಸಾರ್ಟ್ ನಲ್ಲಿ ನಡೆದ ಚಿಂತನಾ ಸಭೆಯಲ್ಲಿ ಮಾತನಾಡಿದ ಬಿ ಎಲ್ ಸಂತೋಷ್ ಸಚಿವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ.
ಇದನ್ನೂ ಓದಿ : ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಪ್ರಕರಣದಲ್ಲಿ SDPI ಕೈವಾಡ : ವಿಜಯಾನಂದ ಕಾಶಪ್ಪನವರ ಗಂಭೀರ ಆರೋಪ
ಸಚಿವರು ತಮ್ಮ ಇಲಾಖೆಗೆ ಸೀಮಿತವಾದರೆ ಆಗಲ್ಲ, ಸರ್ಕಾರ ಅಂದ್ರೆ ಅದು ಒಗ್ಗಟ್ಟಿನಿಂದ ನಡೆಯುತ್ತದೆ. ಸಚಿವರು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಒಗ್ಗಟ್ಟು ಕಾಣಿಸುತ್ತದೆ ಅಂದ ಸಂತೋಷ್ , ಹೊಂದಾಣಿಕೆ ರಾಜಕೀಯ ಬಗ್ಗೆಯೂ ಕಿಡಿಕಾರಿದ್ದಾರಂತೆ. ಬೆಂಗಳೂರಿನಲ್ಲೇ ಈ ಹೊಂದಾಣಿಕೆ ರಾಜಕೀಯ ಹೆಚ್ಚಾಗಿದ್ದು, ಕೆಲ ಜಿಲ್ಲೆಗಳಿಗೂ ಹರಡುತ್ತಿದೆ. ಇದರಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಅನ್ಯ ಪಕ್ಷದ ಮುಖಂಡರಿಗೆ ನಿಷ್ಠೆ ತೋರುವುದರಿಂದ ನಮ್ಮ ಪಕ್ಷ ಕಾರ್ಯಕರ್ತರು ಕಣ್ಣೀರು ಹಾಕುವಂತಾಗಿದೆ ಎಂದು ಸಂತೋಷ್ ಬೇಸರ ಹೊರ ಹಾಕಿದ್ದಾರೆ ಅನ್ನಲಾಗಿದೆ.
ಇಲ್ಲಿ ನೋಡಿದರೆ ಬಿಜೆಪಿ ಸಚಿವರು ಸರ್ಕಾರ ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಅಂತಾರೆ, ಅಲ್ಲಿ ನೋಡಿದರೆ ಸಿದ್ದರಾಮಯ್ಯ ನಾನು ಒಬ್ಬ ಮಾತನಾಡಿದ್ರೆ ಬಿಜೆಪಿಯ 25 ಮಂದಿ ನನ್ನ ಮೇಲೆ ಮುಗಿ ಬೀಳ್ತಾರೆ, ನನ್ನ ಸಹಾಯಕ್ಕೆ ಕಾಂಗ್ರೆಸ್ ನ ಯಾವೊಬ್ಬ ಮುಖಂಡನು ಬರೋದಿಲ್ಲ, ಯಾವ ನಾಯಕನೂ ಮಾತನಾಡೋದಿಲ್ಲ ಅಂತಾರೆ. ಹಾಗಾದ್ರೆ ಯಾವುದು ಸತ್ಯ
ವಿಚಾರಿಸಬೇಕಿದೆ ಬನ್ನಿ : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಮೀರ್’ಗೆ ಎಸಿಬಿ ನೋಟಿಸ್
ಚುನಾವಣೆ ಹೊಸ್ತಿಲಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಗೆ ಸಂಕಷ್ಟ ಶುರುವಾಗಿದೆ. ಮೊನ್ನೆ ಮೊನ್ನೆ ಚಾಮರಾಜಪೇಟೆ ಆಟದ ಮೈದಾನ ವಿಚಾರದಲ್ಲೂ ಜಮೀರ್ ಸದ್ದು ಮಾಡಿದ್ದರು.
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಸಂಬಂಧ ವಿಚಾರಣೆಗೆ ಹಾಜರಾಗಬೇಕು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಆಹಮದ್ ಖಾನ್ ಅವರಿಗೆ ಎಸಿಬಿ ನೋಟಿಸ್ ಜಾರಿ ಮಾಡಿದೆ. ನೋಟಿಸ್ ತಲುಪಿದ 10 ದಿನಗಳ ಒಳಗಾಗಿ ತನಿಖಾಧಿಕಾರಿ ಮುಂದೆ ಆರೋಪಿಗಳಿಗೆ ಪೂರಕ ದಾಖಲೆ ಒದಗಿಸುವಂತೆ ಸೂಚಿಸಲಾಗಿದೆ. ಇದೇ ನೋಟಿಸ್ ಅಕ್ರಮ ಆಸ್ತಿಯ ಕುರಿತಂತೆ ಹತ್ತಾರು ಆರೋಪಗಳನ್ನು ಎಸಿಬಿ ಹೊರಿಸಿದೆ.
ಎಸಿಬಿ ನೋಟಿಸ್ ಹಿನ್ನಲೆಯಲ್ಲಿ ಸೋಮವಾರ ಅಥವಾ ಮಂಗಳವಾರ ಜಮೀರ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿದೆ. ಈ ಹಿಂದೆ ಜುಲೈ 8 ರಂದು ದಾಖಲೆ ಸಲ್ಲಿಸುವಂತೆ ಎಸಿಬಿ ಸೂಚಿಸಿತ್ತು. ಆದರೆ ಬಕ್ರೀದ್ ಹಬ್ಬದ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ಜಮೀರ್ ಹೇಳಿದ್ದರು. ಈ ಕಾರಣದಿಂದ ಮತ್ತೆ ಎಸಿಬಿ ನೋಟಿಸ್ ನೀಡಿದೆ.
ಮಾಹಿತಿಯ ಪ್ರಕಾರ ಆದಾಯಕ್ಕಿಂತ ಶೇ 2031 ಹೆಚ್ಚು ಆಸ್ತಿಯನ್ನು ಜಮೀರ್ ಹೊಂದಿದ್ದಾರೆ ಅನ್ನಲಾಗಿದೆ. ಎಸಿಬಿ ಲೆಕ್ಕಕ್ಕೆ ಸಿಕ್ಕಿರುವ ಪ್ರಕಾರ 87.44 ಕೋಟಿ ರೂಪಾಯಿ ಹೆಚ್ಚು ಅಕ್ರಮ ಆಸ್ತಿಯನ್ನು ಹೊಂದಿದ್ದಾರೆ. July 6 ರಂದು ಅಕ್ರಮ ಆಸ್ತಿ ಆರೋಪದಡಿಯಲ್ಲಿ ಜಮೀರ್ ಮನೆ, ನ್ಯಾಶನಲ್ ಟ್ರಾವೆಲ್ಸ್ ಕಚೇರಿ, ಅತಿಥಿಗೃಹ ಸೇರಿ 5 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.
Discussion about this post