ಬೆಂಗಳೂರು ಬಳಿಕ ಮಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಸದ್ದು ಮಾಡುತ್ತಿದೆ. ( Mangaluru Couple arrested ganja case )ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ಆರೋಪಿಗಳು ಮಾರಾಟ ಜಾಲ ವಿಸ್ತರಿಸಿಕೊಂಡಿದ್ದಾರೆ ಇವರೆಷ್ಟು ಪ್ರಭಾವಶಾಲಿಗಳಾಗಿರಬೇಕು
ಮಂಗಳೂರು : ನಗರದ ಎಂ.ಜಿ.ರಸ್ತೆ, ಕೆಪಿಟಿ, ಕದ್ರಿ, ಜೆಪ್ಪು, ಬಜಾಲ್ ಪರಿಸರದ ವಿದ್ಯಾಸಂಸ್ಥೆಗಳ ಪರಿಸರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿಯನ್ನು ( Mangaluru Couple arrested ganja case ) ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವಿಖ್ಯಾತ್ ಯಾನೆ ವಿಕ್ಕಿ ಬಪ್ಪಾಲ್ (28) ಮತ್ತು ಆತನ ಪತ್ನಿ ಅಂಜನಾ ಎಂದು ಗುರುತಿಸಲಾಗಿದೆ. ಬಂಧಿತರಿಂದ 22 ಸಾವಿರ ರೂಪಾಯಿ ಮೌಲ್ಯದ 2,200 ಕೆಜಿ ಗಾಂಜಾ, 1,500 ರೂಪಾಯಿ ನಗದು, ಮೊಬೈಲ್, ಡಿಜಿಟಲ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : bengaluru roads : ಸಿಎಂ ಮನೆ ಮುಂದೆ ರಸ್ತೆಗೆ 29 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ : ಇದು ಕಾಮನ್ ಮ್ಯಾನ್ ಸಿಎಂ ಕಾರ್ಯವೈಖರಿ
ಬಂಧಿತ ದಂಪತಿ ಈ ಹಿಂದೆಯೇ ಕ್ರಿಮಿನಲ್ ಹಿನ್ನಲೆ ಹೊಂದಿದ್ದು, ವಿಖ್ಯಾತ್ ವಿರುದ್ಧ ಮಂಗಳೂರು ದಕ್ಷಿಣ, ಉತ್ತರ, ಬರ್ಕೆ, ಉರ್ವ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿದೆ. ಎಲ್ಲವೂ ಕೂಡಾ ಕೊಲೆ ಯತ್ನ, ಜೀವ ಬೆದರಿಕೆ, ಕರ್ತವ್ಯ ಅಡ್ಡಿ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ್ದು. ಇನ್ನು ಅಂಜನಾ ವಿರುದ್ಧ ಮಂಗಳೂರು ದಕ್ಷಿಣ ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ದಂಪತಿಯ ಮಾದಕ ವಸ್ತು ಜಾಲದ ಬಗ್ಗೆ ಮಾಹಿತಿ ಸಿಸಿಬಿ ಪೊಲೀಸರು ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರ ಅವರ ನೇತೃತ್ವದಲ್ಲಿ ಕಾವೂರು ಶಂಕರನಗರದಲ್ಲಿರುವ ಮನೆಗೆ ದಾಳಿ ನಡೆಸಿದ್ದಾರೆ.
ಆನೆಯಿಂದ ಮಾಲೆ ಹಾಕಿಸಿಕೊಂಡ ಸಚಿವರಾದ ಮಾಧುಸ್ವಾಮಿ ಮತ್ತು ಸವದಿ
ರಾಜ್ಯದಲ್ಲಿ ಪ್ರವಾಹದಿಂದ ಜನ ಕಂಗೆಟ್ಟಿದ್ದಾರೆ. ಮಳೆಯಿಂದ ಆಗಿರುವ ಹಾನಿಯನ್ನು ಊಹಿಸಲು ಸಾಧ್ಯವಿಲ್ಲ. ಈ ನಡುವೆ ಆನೆಯಿಂದ ನಾಲೆ ಹಾಕಿಸಿಕೊಂಡು ಸಚಿವರಿಬ್ಬರು ಮಿಂಚಿದ್ದಾರೆ. ಹೀಗೆ ಅನೆಯಿಂದ ಮಾಲೆ ಹಾಕಿಸಿಕೊಳ್ಳುವುದು ವನ್ಯಜೀವಿ ಕಾಯ್ದೆ ಪ್ರಕಾರ ಸರಿಯೇ..?
ಬೆಳಗಾವಿ : ಸಚಿವ ಜೆಸಿ ಮಾಧುಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಆನೆಯಿಂದ ಮಾಲೆ ಹಾಕಿಸಿಕೊಂಡು ಮಿಂಚಿದ್ದಾರೆ.
ಇದನ್ನು ಓದಿ : actress indraja : ಇಂದ್ರಜಾ ಮದುವೆಗೆ ಎಷ್ಟು ಜನ ಬಂದಿದ್ದರು… ಖರ್ಚಾಗಿತ್ತು ಎಷ್ಟು ಗೊತ್ತಾ..? ವೆಚ್ಚದ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ
ಬೆಳಗಾವಿಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಕೆರೆ ತುಂಬಿಸುವ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಗುದ್ದಲಿ ಪೂಜೆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಮಾಧುಸ್ವಾಮಿ ಆನೆಯಿಂದ ಮಾಲಾರ್ಪಣೆ ಮಾಡಿಸಿಕೊಂಡಿದ್ದಾರೆ.
ಈ ಕೆರೆ ತುಂಬಿಸುವ ಕಾರ್ಯಕ್ರಮದಿಂದ ಸುಟ್ಟಟ್ಟಿ – ಯಲ್ಲಮವಾಡಿ, ಕೊಹಳ್ಳಿ – ಐಗಳಿ, ಅಡಹಳ್ಳಿ – ಅಡಹಳಟ್ಟಿ, ಬಾಡಗಿ -ಅರಟಾಳ, ಫಡತರವಾಡಿ – ತೆಲಸಂಗ ಮತ್ತು ಕೊಕಟನೂರ ಗ್ರಾಮದ ರೈತರಿಗೆ ಅನುಕೂಲವಾಗಲಿದೆ.
Discussion about this post