Dakshina kannada ಜಿಲ್ಲೆಯಲ್ಲಿ ಭಾರೀ ಮಳೆ ( Heavy rain ) ಸುರಿಯುತ್ತಿರುವ ಹಿನ್ನಲೆಯಲ್ಲಿ ಇಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ( Heavy rain in Dakshina kannada ) ಇಂದು ಕೂಡಾ ಮುಂದುವರಿದಿದೆ. ಈಗಾಗಲೇ ಕರಾವಳಿ ಜಿಲ್ಲೆಗಳಿಗೆ ಹವಮಾನ ಇಲಾಖೆ ಆರೆಂಜ್ ಆಲರ್ಟ್ ನೀಡಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಮಳೆಯ ಅಬ್ಬರ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಸೇರಿದಂತೆ ಡಿಗ್ರಿ ಕಾಲೇಜು ತನಕ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಆದೇಶ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ.
ಇದನ್ನೂ ಓದಿ : ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ : ಶಾಸಕ ಜಮೀರ್ ಸಾಮ್ರಾಜ್ಯಕ್ಕೆ ಎಸಿಬಿ ದಾಳಿ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, ಅಪಾಯದ ಪರಿಸ್ಥಿತಿ ತಲೆದೋರಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಎಚ್ಚರಿಕೆ ವಹಿಸುವಂತೆ ತಾಲೂಕು ಆಡಳಿತಗಳು ಮನವಿ ಮಾಡಿದೆ.
ಇದನ್ನೂ ಓದಿ : ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿಯಾದ ಕಾರು : ಬೆಂಕಿ ತಗುಲಿ ಸ್ಥಳದಲ್ಲೇ ಒಬ್ಬನ ಸಾವು
ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ : ಶಾಸಕ ಜಮೀರ್ ಸಾಮ್ರಾಜ್ಯಕ್ಕೆ ಎಸಿಬಿ ದಾಳಿ
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮ್ಮದ್ ( Zameer Ahmed ) ನಿವಾಸಕ್ಕೆ ಎಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ದಂಡು ರೈಲ್ವೆ ನಿಲ್ದಾಣ ಬಳಿ ಇರುವ ಭವ್ಯ ಬಂಗಲೆ ಮೇಲೆ ಈ ದಾಳಿ ನಡೆದಿದ್ದು, ಇದೇ ವೇಳೆ ಜಮೀರ್ ಗೆ ಸಂಬಂಧಿಸಿದ 5 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಮುಂಬೈ ನಲ್ಲಿ ಟ್ರಾವೆಲ್ಸ್ ಎಜೆನ್ಸಿಯ ಮಾಲೀಕತ್ವ, ವಿದೇಶಿದಲ್ಲಿ ಆಸ್ತಿ, ದುಬೈ ನಲ್ಲಿ ಆಸ್ತಿ ಜೊತೆಗೆ ವ್ಯವಹಾರವಿದೆ ಅನ್ನುವುದು ಜಮೀರ್ ಮೇಲೆ ಬಂದಿರುವ ಆರೋಪ. ಜೊತೆಗೆ ಐಎಂಎ ಹಗರಣದಲ್ಲೂ ಜಮೀರ್ ಹೆಸರು ಕೇಳಿ ಬಂದಿತ್ತು. ಆದರೆ ಮುಂದೆ ಅದೇನಾಯ್ತು ಅನ್ನುವುದು ಗೊತ್ತಿಲ್ಲ. ಇದರೊಂದಿಗೆ ಶ್ರೀಲಂಕಾದಲ್ಲಿ ಶಿಷ್ಯರ ಹೆಸರಿನಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದಾರೆ ಅನ್ನುವ ಆರೋಪವನ್ನು ಜಮೀರ್ ಎದುರಿಸುತ್ತಿದ್ದಾರೆ.
ಈ ಸಂಬಂಧ ಈ ಹಿಂದೆ ಇಡಿ ಜಮೀರ್ ನಿವಾಸಕ್ಕೆ ದಾಳಿ ನಡೆಸಿತ್ತು. ಇದಾದ ಬಳಿಕ ಸರ್ಕಾರಿ ಯೋಜನೆಯೊಂದರಲ್ಲಿ ಅವ್ಯವಹಾರ ಆಗಿರುವ ಸಂಬಂಧ ಇಡಿಗೆ ದಾಖಲೆ ಲಭ್ಯವಾಗಿತ್ತು. ಈ ಬಗ್ಗೆ ಇಡಿ ಎರಡೆರಡು ಬಾರಿ ವರದಿ ನೀಡಿತ್ತು. ಮೊದಲ ವರದಿಯ ಸಂದರ್ಭದಲ್ಲೇ ಇಡಿ ಎಚ್ಚೆತ್ತುಕೊಳ್ಳಬೇಕಿತ್ತು. ಇದೀಗ ಎರಡನೇ ಸಲ ಇಡಿ ವರದಿಯ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಇದೀಗ ದಂಡು ರೈಲ್ವೆ ನಿಲ್ದಾಣದ ಸಮೀಪದ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವನಗರದ ಗೆಸ್ಟ್ ಹೌಸ್, ಬನಶಂಕರಿಯ ಜಿಕೆ ಅಸೋಸಿಯೇಟ್ಸ್, ಕಲಾಸಿ ಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಮೇಲೆ ದಾಳಿ ನಡೆಸಲಾಗಿದೆ.
Discussion about this post