ಬೆಂಗಳೂರು : ಒಂದೆಡೆ ಕಾಂಗ್ರೆಸ್ ಪಾದಯಾತ್ರೆ ಮತ್ತೊಂದು ಕಡೆ ಬಿಜೆಪಿ ನಾಯಕ ರೇಣುಕಾಚಾರ್ಯ ಸೇರಿದಂತೆ ವಿವಿಧ ನಾಯಕರ ಜಾತ್ರೆ. ಈ ನಡುವೆ ಹೈರಾಣಾಗಿದ್ದು ಮಾತ್ರ ಪೊಲೀಸ್ ಪಡೆ. ಕೊರೋನಾ ಮುಂಚೂಣಿ ಕಾರ್ಯಕರ್ತರಾಗಿ ದುಡಿಯುತ್ತಿರುವ ಇವರು ರಾಜಕಾರಣಿಗಳ ಕರ್ಮಕಾಂಡದಿಂದ ಕೊರೋನಾ ಸೋಂಕಿಗೆ ತುತ್ತಾಗುವಂತಾಗಿದೆ.
ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಕೊರೋನಾ ಸೋಂಕು ಸ್ಟೋಟಗೊಂಡಿದ್ದು, ಸೋಮವಾರ 35ಕ್ಕೂ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತ ಪೊಲೀಸರ ಸಂಖ್ಯೆ ಬೆಂಗಳೂರಿನಲ್ಲಿ 139ಕ್ಕೆ ಏರಿಕೆಯಾಗಿದೆ ಅದರಲ್ಲೂ ಪಶ್ಚಿಮ ವಿಭಾಗದಲ್ಲೇ ಸೋಂಕು ತೀವ್ರವಾಗಿದ್ದು ಸೋಮವಾರ ಒಂದೇ 28 ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಪಶ್ಚಿಮ ವಿಭಾಗದಲ್ಲಿ ಸೋಂಕಿತ ಪೊಲೀಸರ ಸಂಖ್ಯೆ 88ಕ್ಕೆ ಏರಿದೆ
ಸೋಂಕಿಗೆ ತುತ್ತಾಗಿರುವ ಪೊಲೀಸರ ಪೈಕಿ ಕಡಿಮೆ ಸೋಂಕಿರುವ ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರ ಸ್ಥಿತಿಯಲ್ಲಿರುವ ಪೊಲೀಸರು, ಪೊಲೀಸರಿಗಾಗಿಯೇ ನಿರ್ಮಿಸಿರುವ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Discussion about this post