ಕನ್ನಡತಿ ಧಾರವಾಹಿಯಲ್ಲಿ ಮುಂದೇನು ಎಂದು ಕಾಯುತ್ತಿದ್ದವರಿಗೆ ಸಿಕ್ಕಿದ್ದು ಸಾನಿಯಾ ಪಾತ್ರಕ್ಕೆ ರಮೋಲಾ ಗುಡ್ ಬೈ ಹೇಳಿದ ಸುದ್ದಿ. ಹರ್ಷ ಮತ್ತು ಭುವಿಗೆ ಕಾಟ ಕೊಡುತ್ತಿದ್ದ ಸಾನಿಯಾ ಬಗ್ಗೆ ಜನರಿಗೊಂದ ಆಕ್ರೋಶವಿತ್ತು. ಆದರೆ ಈ ಪಾತ್ರಕ್ಕೆ ರಮೋಲಾ ಜೀವ ತುಂಬಿದ ಪರಿ ಇದೆಯಲ್ಲ ಅದು ಅಮೋಘವಾಗಿತ್ತು. ರಮೋಲಾ ನಟನೆಯೂ ಕನ್ನಡತಿ ಧಾರವಾಹಿಯ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಇದೀಗ ಜನ ಇಷ್ಟ ಪಟ್ಟಿದ್ದ ಪಕ್ಕಾ ನೆಗೆಟಿವ್ ಶೇಡ್ ಹೊಂದಿದ್ದ ಸಾನಿಯಾ ಪಾತ್ರದಿಂದ ನಟಿ ರಮೋಲಾ ಅವರು ಹೊರನಡೆದಿದ್ದಾರೆ.
ಕನ್ನಡತಿ ಧಾರಾವಾಹಿಯಿಂದ ರಮೋಲಾ ಅವರಿಗೆ ಒಳ್ಳೆಯ ಖ್ಯಾತಿ ಸಿಕ್ಕಿತ್ತು. ವಿಲನ್ ಪಾತ್ರವಾದರೂ ಜನ ರಮೋಲಾರನ್ನು ಇಷ್ಟಪಟ್ಟಿದ್ದರು. ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ರಮೋಲಾ ಕನ್ನಡತಿ ಟೀಂ ತೊರೆದಿರುವುದು ಅಚ್ಚರಿಗೆ ಕಾರಣವಾಗಿದೆ. ಈಗ ಸಾನಿಯಾ ಪಾತ್ರಕ್ಕೆ ಹೊಸ ನಟಿಯ ಆಗಮನವಾಗಿದ್ದು ಆರೋಹಿ ನೈನಾ ಸಾನಿಯಾ ಪಾತ್ರವನ್ನು ಮುನ್ನಡೆಸುತ್ತಿದ್ದಾರೆ.
ಆರೋಹಿ ಈ ಹಿಂದೆ ‘ಹೂಮಳೆ’ ಧಾರಾವಾಹಿಯಲ್ಲಿ ಶೋಭಾ ಪಾತ್ರ ಮಾಡುತ್ತಿದ್ದರು. ಈಗ ಪ್ರಸಾರವಾದ ಎಪಿಸೋಡ್ ಗಳನ್ನು ಗಮನಿಸಿದ್ರೆ ರಮೋಲಾ ಮಾಡಿದ ಪಾತ್ರಕ್ಕೆ ಜೀವ ತುಂಬಬೇಕಾದರೆ ಆರೋಹಿಗೆ ತುಂಬಾ ದಿನಗಳೇ ಬೇಕಾಗಬಹುದು. ರಮೋಲಾ ಸಿಟ್ಟು, ಆಕ್ರೋಶ, ನಾಟಕ ಎಲ್ಲವೂ ಕನ್ನಡತಿ ಅಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ. ಹೀಗಾಗಿ ಅದನ್ನು ಅಳಿಸಿ ತಮ್ಮ ಛಾಪು ಒತ್ತಲು ಅರೋಹಿ ಸಿಕ್ಕಾಪಟ್ಟೆ ಬೆವರು ಸುರಿಸಬೇಕಾಗಿದೆ. ಹಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ರಮೋಲಾ ಅವರೇ ಇರಬೇಕಾಗಿತ್ತು ಅನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ. ಹಾಗಾದ್ರೆ ಹೊಸ ಸಾನಿಯಾ ಪಾತ್ರಧಾರಿ ಆರೋಹಿ ನಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ.
Discussion about this post