ಈ ನಡುವೆ ಕೊರೋನಾ ವಿಚಾರದಲ್ಲಿ ಮೊದಲಿನಿಂದಲೂ ಸಂಪೂರ್ಣವಾಗಿ ಎಡವಿರುವ ವಿಶ್ವ ಆರೋಗ್ಯ ಸಂಸ್ಥೆ, ಒಮಿಕ್ರೋನ್ ಕುರಿತಂತೆ ಆತಂಕದ ಹೇಳಿಕೆ ಹೊರಡಿಸಿದೆ.
ಜಿನೇವಾ : ಕೊರೋನಾದ ಹೊಸ ರೂಪಾಂತರಿ ಒಮಿಕ್ರೋನ್ ಕುರಿತಂತೆ ಇನ್ನೂ ಗೊಂದಲಗಳು ಮುಂದುವರಿದಿದೆ. ಕೆಲವು ತಜ್ಞರು ಒಮಿಕ್ರೋನ್ ವೇಗವಾಗಿ ಹರಡುತ್ತದೆ ಆದರೆ ಅಪಾಯಕಾರಿಯಲ್ಲ ಅಂದಿದ್ದಾರೆ, ಮತ್ತೆ ಕೆಲವರು ರೋಗ ನಿರೋಧಕ ಶಕ್ತಿಯನ್ನು ಛೇದಿಸುವ ಶಕ್ತಿ ಇದಕ್ಕಿದೆ. ಹೀಗಾಗಿ ಲಸಿಕೆ ಪಡೆದುಕೊಂಡವರಿಗೂ ಸುಖವಿಲ್ಲ ಅನ್ನುತ್ತಿದ್ದಾರೆ.
ಈ ನಡುವೆ ಕೊರೋನಾ ವಿಚಾರದಲ್ಲಿ ಮೊದಲಿನಿಂದಲೂ ಸಂಪೂರ್ಣವಾಗಿ ಎಡವಿರುವ ವಿಶ್ವ ಆರೋಗ್ಯ ಸಂಸ್ಥೆ, ಒಮಿಕ್ರೋನ್ ಕುರಿತಂತೆ ಆತಂಕದ ಹೇಳಿಕೆ ಹೊರಡಿಸಿದೆ.( ಕೊರೋನಾ ಪ್ರಾರಂಭದ ದಿನಗಳಲ್ಲಿ ಚೀನಾವನ್ನು ಕಟ್ಟಿ ಹಾಕುವ ಕೆಲಸಕ್ಕೆ ವಿಶ್ವ ಸಂಸ್ಥೆ ಮುಂದಾಗಿರುತ್ತಿದ್ರೆ ಈ ಸಮಸ್ಯೆ ಈ ಹಂತಕ್ಕೆ ಬಂದು ನಿಲ್ಲುತ್ತಿರಲಿಲ್ಲ )
ವಿಶ್ವ ಸಂಸ್ಥೆಯ ಹೇಳಿಕೆ ಪ್ರಕಾರ ಒಮಿಕ್ರೋನ್ ಅತ್ಯಂತ ಸಾಂಕ್ರಾಮಿಕ, ಇದು ನಿರೀಕ್ಷೆಯನ್ನೂ ಮೀರಿದ ವೇಗದಲ್ಲಿ ಹರಡುತ್ತದೆ. ವಿಶ್ವದ ಬಹುತೇಕ ದೇಶಗಳನ್ನು ಒಮಿಕ್ರೋನ್ ಪ್ರವೇಶಿಸಿರುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಒಮಿಕ್ರೋನ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹಾಗೂ ಮರಣದ ಪ್ರಮಾಣ ಏರಬಹುದು ಅಂದಿದೆ.
ಅದರಲ್ಲೂ ಭಾರತಕ್ಕೆ ನೇರವಾಗಿ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ರೂಪಾಂತರಿ ವೈರಸ್ ಭಾರತದಲ್ಲಿ ಅತೀ ವೇಗವಾಗಿ ಹರಡಲಿದೆ ಹೀಗಾಗಿ ಸೋಂಕಿತರ ನಿರ್ವಹಣೆ ವಿಚಾರದಲ್ಲಿ ಭಾರತ ಸರ್ಕಾರ ಸಿದ್ದತೆ ನಡೆಸಬೇಕು ಅಂದಿದೆ.
ಇನ್ನು ದಕ್ಷಿಣ ಆಫ್ರಿಕಾದ DSI – NSF ಸಾಂಕ್ರಾಮಿಕ ಮಾದರಿ ಅಧ್ಯಯನ ಕೇಂದ್ರದ ವರದಿಯ ಪ್ರಕಾರ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಹಿಂದಿನ ವೈರಸ್ ಗಳು ತೋರಿದ ಪರಿಣಾಮವನ್ನೇ ತೋರುವ ಸಾಧ್ಯತೆಗಳಿದೆಯಂತೆ. ಜೊತೆಗೆ ಈ ಮೊದಲು ಸೋಂಕಿತರಾದವರಿಗೂ ಮರಳಿ ಸೋಂಕು ತಗುಲುವ ಸಾಧ್ಯತೆಗಳಿದೆಯಂತೆ.
Discussion about this post