ಎರಡು ವರ್ಷಗಳ ಬಳಿಕ ವಿಶ್ವಸಂಸ್ಥೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವ ಮತ್ತೊಮ್ಮೆ ತಿರುಗಿ ನೋಡುವಂತೆ ಮಾತನಾಡಿದ್ದಾರೆ. ಮಾತ್ರವಲ್ಲದೆ ಪಾಕ್ ಹಾಗೂ ಚೀನಾ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಆಫ್ಘನ್ ವಿಚಾರ ಪ್ರಸ್ತಾಪಿಸಿದ ಮೋದಿ, ಪಾಕ್ ಹಾಗೂ ಚೀನಾಗೆ ವಾರ್ನಿಂಗ್ ನೀಡಿದರು, ಜೊತೆಗೆ ಆಫ್ಘನ್ ಉಗ್ರರನ್ನು ಬಳಸಿಕೊಳ್ಳಬೇಡಿ, ಆಫ್ಘನ್ ಭೂಮಿ ಎಂದಿಗೂ ಉಗ್ರರಿಗೆ ಬಳಕೆಯಾಗಬಾರದು. ಆಫ್ಘನ್ ಮಹಿಳೆಯರು, ಮಕ್ಕಳು ಅಲ್ಪಸಂಖ್ಯಾತರಿಗೆ ರಕ್ಷಣೆ ಬೇಕಾಗಿದೆ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಅನ್ನುವ ಮೂಲಕ ಆಫ್ಘನ್ ಉಗ್ರರನ್ನು ನಿಮ್ಮ ರಾಜಕೀಯ ದಾಳವಾಗಿಸಬೇಡಿ ಎಂದು ನೇರವಾಗಿ ಹೇಳಿದ್ದಾರೆ.
ಯಾರು ಭಯೋತ್ಪಾದಗೆ ಬೆಂಬಲ ನೀಡುತ್ತಾರೋ ಅವರಿಗೂ ನಾಳೆ ಇದೇ ಭಯೋತ್ಪಾದನೆ ಮಾರಕವಾಗಲಿದೆ ಎಂದು ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ಕೊಟ್ಟ ನರೇಂದ್ರ ಮೋದಿ, ಭಯೋತ್ಪಾದನೆ ವಿರುದ್ದ ಜಗತ್ತು ಹೋರಾಡಬೇಕು, ಭಯೋತ್ಪಾದನೆ ಎಂದಿಗೂ ರಾಜಕೀಯ ಆಯುಧವಾಗಬಾರದು ಎಂದು ಹೇಳಿದರು.
ಈ ಮೂಲಕ ಚೀನಾ ಹಾಗೂ ಪಾಕಿಸ್ತಾನ ಆಫ್ಘನ್ ನೆಲದಲ್ಲಿ ಮಾಡಲು ಹೊರಟಿರುವುದೇನು ಅನ್ನುವುದನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದಾರೆ. ಜೊತೆಗೆ ನಾಳೆ ಆಫ್ಘನ್ ವಿಚಾರದಲ್ಲಿ ಅನಾಹುತವಾದರೆ ಅದಕ್ಕೆ ನೇರ ಹೊಣೆ ಯಾರಾಗಲಿದ್ದಾರೆ ಅನ್ನುವುದನ್ನು ಕೂಡಾ ಈಗ್ಲೇ ತಿಳಿಸಿದ್ದಾರೆ.
Discussion about this post