ಶಿವಮೊಗ್ಗ : ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶಿವಮೊಗ್ಗ ತಾಲೂಕಿನ ಗಾಜನೂರು ತುಂಗಾ ಜಲಾಶಯ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.
ಕಳೆದ ಮೂರು ದಿನಗಳಿಂದ ಜಲಾಶಯ ಪ್ರದೇಶಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ನೀರಿನ ಒಳ ಹರಿವಿನ ಮಟ್ಟ ಹೆಚ್ಚಾಗಿದೆ. ಪ್ರಸ್ತುತ 22 ಗೇಟುಗಳ ಪೈಕಿ 21 ಗೇಟುಗಳನ್ನು ತೆರೆಯಲಾಗಿದೆ.
ತುಂಗಾ ಜಲಾಶಯ 3.24 ಟಿಎಂ, ಸಾಮರ್ಥ್ಯ ಹೊಂದಿದೆ. ಈಗ 2.441 ಟಿಎಂಸಿ ಸಂಗ್ರಹವಿದೆ. 3774 ಕ್ಯೂಸೆಕ್ ಒಳಹರಿವಿನ ಕಾರಣ ಶೀಘ್ರದಲ್ಲೇ ಡ್ಯಾಮ್ ಭರ್ತಿಯಾಗುವ ಸಾಧ್ಯತೆಗಳಿದೆ.
Discussion about this post