ಕೊರೋನಾ ಕಾರಣದಿಂದ ಅರ್ಧಕ್ಕೆ ನಿಂತ ಹೋಗಿದ್ದ ಬಿಗ್ ಬಾಸ್ ಕಾರ್ಯಕ್ರಮ ಮತ್ತೆ ಪ್ರಾರಂಭವಾಗಲಿದೆ ಅನ್ನುವ ಸುದ್ದಿ ಬಂದಿದೆ. ಬಿಗ್ ಬಾಸ್ ಕಾರ್ಯಕ್ರಮವನ್ನು ನಿಲ್ಲಿಸುವ ಸಂದರ್ಭದಲ್ಲೇ ಮತ್ತೆ ಪ್ರಾರಂಭಿಸುವ ಕುರಿತಂತೆ ವಾಹಿನಿ ನಿರ್ಧರಿಸಿತ್ತು. ಅದಕ್ಕೆ ಕಾರಣವೂ ಇದೆ.
ಇದೀಗ ಮತ್ತೆ ಪ್ರಾರಂಭವಾಗಲಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾರೆಲ್ಲಾ ಹೋಗುತ್ತಾರೆ ಅನ್ನುವ ಕುತೂಹಲ ಮನೆ ಮಾಡಿದೆ. ಕ್ವಾರಂಟೈನ್ ಗೆ ಒಳಗಾಗಿರುವ ಸ್ಪರ್ಧಿಗಳ ವಿವರ ಇನ್ನೂ ಬಯಲಾಗಿಲ್ಲ. ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಮನೆಯೊಳಗೆ ಹೋಗುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ. ಹಾಗಿದ್ರೂ ಎಲಿಮಿನೇಟ್ ಆದ ಕೆಲವರನ್ನು ವೈಲ್ಡ್ ಕಾರ್ಡ್ ಮೂಲಕ ತರಿಸಿಕೊಳ್ಳುವ ಸಾಧ್ಯತೆಗಳಿದೆಯಂತೆ.
ಇನ್ನೂ ಈಗಾಗಲೇ 70 ದಿನಗಳನ್ನು ಬಿಗ್ ಬಾಸ್ ಕಾರ್ಯಕ್ರಮ ಪೂರೈಸಿತ್ತು. ಹೀಗಾಗಿ ಮತ್ತ ಕೇವಲ 30 ದಿನಗಳ ಕಾಲ ಸ್ಪರ್ಧೆ ನಡೆಯುತ್ತದೋ ಅಥವಾ ಹೊಸದಾಗಿ 100 ದಿನಗಳ ಸ್ಪರ್ಧೆ ನಡೆಯುತ್ತದೋ ಗೊತ್ತಿಲ್ಲ. 30 ದಿನಗಳ ಕಾಲ ನಡೆಸಿದರೆ ವಾಹಿನಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ. ಹೀಗಾಗಿ ಮತ್ತೆ 100 ದಿನಗಳ ಕಾಲ ಸ್ಪರ್ಧೆ ನಡೆಸುತ್ತಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಮೂರನೇ ಅಲೆ ಬರೋ ಮುಂಚೆ ಬಿಗ್ ಬಾಸ್ ಸೀಸನ್ 8ರ ಫೈನಲ್ ಮುಗಿಸಬೇಕು ಅನ್ನುವುದು ಚಾನೆಲ್ ಉದ್ದೇಶ.
Discussion about this post