ಕೊರೋನಾ ಸೋಂಕಿನ ಎರಡನೇ ಅಲೆ ಅಬ್ಬರಿಸದ ಕಾರಣ, ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ಮೊಟಕುಗೊಂಡಿತ್ತು. ಇದರಿಂದ ಪ್ರೇಕ್ಷಕರಿಗೆ ಬೇಸರವಾಗಿದ್ದು ಮಾತ್ರವಲ್ಲದೆ ವಾಹಿನಿಗೂ ದೊಡ್ಡ ಮೊತ್ತದ ನಷ್ಟದ ಭೀತಿ ಎದುರಾಗಿದೆ.
ಈ ನಡುವೆ ಇದೀಗ ಎರಡನೆ ಅಲೆಯ ಅಬ್ಬರ ಕಡಿಮೆಯಾಗುತ್ತಿರುವಂತೆ ಬಿಗ್ ಬಾಸ್ ಶೋ ಮತ್ತೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಕೊರೋನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಶೋ ಮತ್ತೆ ಪ್ರಾರಂಭಿಸಲು ವಾಹಿನಿ ನಿರ್ಧರಿಸಿದ್ದು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಜೊತೆಗೆ ಎಲ್ಲಾ ಸ್ಪರ್ಧಿಗಳಿಗೂ ಈಗಾಗಲೇ ಲಸಿಕೆಯನ್ನೂ ನೀಡಲಾಗಿದೆಯಂತೆ, ಅವರೆಲ್ಲರೂ ಎರಡು ಡೋಸ್ ಲಸಿಕೆ ಪಡೆದಿದ್ದಾರೆಯೇ ಅನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇನ್ನು ಜೂನ್ 14ಕ್ಕೆ ಲಾಕ್ ಡೌನ್ ಸಡಿಲಿಕೆ ಆದೇಶ ಹೊರ ಬಿದ್ದಿರುವ ಹಿನ್ನಲೆಯಲ್ಲಿ ಜೂನ್ 21ರ ಹೊತ್ತಿಗೆ ಶೂಟಿಂಗ್ ಗೆ ಅನುಮತಿ ಸಿಗುವ ಸಾಧ್ಯತೆಗಳಿದೆ. ಹೀಗಾಗಿ ಜೂನ್ ಅಂತ್ಯಕ್ಕೆ ಬಿಗ್ ಬಾಸ್ ಪ್ರಸಾರ ಕಾಣುವ ಸಾಧ್ಯತೆಗಳಿದೆ
Discussion about this post