ಚಿಕ್ಕಮಗಳೂರು : ಕೊರೋನಾ ಅನ್ನೋ ಮಹಾಮಾರಿ ಹೆಸರಿನಲ್ಲಿ ಈಗಾಗಲೇ ಹುಟ್ಟಿಕೊಂಡ ದಂಧೆಗಳಿಗೆ ಲೆಕ್ಕವಿಲ್ಲ. ಇದೀಗ ಹೊಸದಾಗಿ ಲಸಿಕಾ ದಂಧೆಯೊಂದು ಹುಟ್ಟಿಕೊಂಡಿದೆ. ಪಂಜಾಬ್ ನಲ್ಲಿ ಸರ್ಕಾರವೇ ಮುಂದೆ ನಿಂತು ಈ ಲಸಿಕಾ ದಂಧೆಯನ್ನು ನಡೆಸಿತ್ತು.
ಆದರೆ ಕರ್ನಾಟಕದಲ್ಲಿ ವೈದ್ಯರು, ಅಧಿಕಾರಿಗಳು ಲಸಿಕಾ ದಂಧೆಯಲ್ಲಿ ಕಾಸು ಮಾಡಲು ಹೊರಟಿದ್ದಾರೆ. ಮೊನ್ನೆ ಮೊನ್ನೆ ಬಿಬಿಎಂಪಿ ವೈದ್ಯಯೊಬ್ಬಳು ಲಸಿಕೆಯನ್ನು ಕಳ್ಳ ಮಾರ್ಗದಲ್ಲಿ ಸಾಗಿಸಿ ಕಾಸು ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಳು.
ಇದೀಗ ಚಿಕ್ಕಮಗಳೂರಿನಲ್ಲಿ ಯಾರದ್ದೋ ಲಸಿಕೆಯನ್ನು ಇನ್ಯಾರಿಗೋ ಚುಚ್ಚುವ ಕೆಲಸ ಪ್ರಾರಂಭವಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕೊರೋನಾ ವಾರಿಯರ್ಸ್ ಎಂದು ಘೋಷಿಸಿದೆ. ಹೀಗಾಗಿ ಅವರಿಗೆ ಆದ್ಯತೆಯಲ್ಲಿ ಲಸಿಕೆ ಕೊಡುವ ಕೆಲಸ ನಡೆಯುತ್ತಿದೆ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿಯ ಹೆಸರಿನಲ್ಲಿ ತಮ್ಮ ಸಂಬಂಧಿಕರಿಗೆ ಲಸಿಕೆ ಕೊಡುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾರಂಭಿಸಿದ್ದಾರೆ.
ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಅರಣ್ಯ ವಿಭಾಗದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಜೂನ್ 2 ರಂದು ಇವರಿಗೆಲ್ಲಾ ಲಸಿಕೆ ಹಾಕಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಈ ನಡುವೆ ಅದೇ ದಿನ ಕೆ ಎನ್ ಸೋಮಶೇಖರ್ ಅನ್ನೋ ವ್ಯಕ್ತಿ ನಾನೊಬ್ಬ ಡಿ ದರ್ಜೆ ನೌಕರ ಎಂದು ಹೇಳಿ ಲಸಿಕೆ ಹಾಕಿಸಿಕೊಂಡಿದ್ದಾನೆ.
ಆದರೆ ಈಗ ಬಂದಿರೋ ಮಾಹಿತಿ ಪ್ರಕಾರ ಆ ವ್ಯಕ್ತಿಗೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧವೇ ಇಲ್ವಂತೆ. ಹಾಗಾದರೆ ಇವನ ಹೆಸರಿನಲ್ಲಿ ಮೂಡಿಗೆರೆ ಆರ್ ಎಫ್ ಓ ಸೋಮಶೇಖರ್ ಇಲಾಖೆ ಸಿಬ್ಬಂದಿ ಎಂದು ಅಧಿಕೃತ ಲೆಟರ್ ಹೆಡ್ ನಲ್ಲಿ ಶಿಫಾರಸು ಪತ್ರ ಹೇಗೆ ಕೊಟ್ಟರು ಅನ್ನುವ ಪ್ರಶ್ನೆ ಎದ್ದಿದೆ. ಇದೀಗ ಪ್ರಕರಣ ತಹಶೀಲ್ದಾರ್ ಅವರನ್ನು ತಲುಪಿದೆ. ವಿವರಣೆ ಕೇಳಿ ತಹಶೀಲ್ದಾರ್ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಉತ್ತರ ಇನ್ನೂ ಬಂದಿಲ್ಲ.
ಈ ನಡುವೆ ಸೋಮಶೇಖರ್ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರ ಪತಿ ಎಂದು ಗೊತ್ತಾಗಿದೆ. ಪರಿಸ್ಥಿತಿ ನೋಡಿದರೆ ಇವರೆಲ್ಲಾ ಮೋದಿಯ ಶ್ರಮವನ್ನು ನೀರಿನಲ್ಲಿಟ್ಟ ಹೋಮ ಮಾಡಿಸಬೇಕು, ಪ್ರಧಾನಿ ಹೆಸರಿಗೆ ಮಸಿ ಬಳಿಯಲೇಬೇಕು ಎಂದು ನಿರ್ಧರಿಸಿದಂತಿದೆ.
Discussion about this post