ಪ್ರತೀ ವರ್ಷ ಬಿಗ್ ಬಾಸ್ ಮನೆಯಲ್ಲಿ ಹಲವು ಜೋಡಿಗಳು ಸದ್ದು ಮಾಡುತ್ತಿರುತ್ತದೆ. ಈ ಪೈಕಿ ಚಂದನ್ ಮತ್ತು ನಿವೇದಿತಾ ಯಾರದ್ದೋ ದುಡ್ಡಿನಲ್ಲಿ ಯಲಮ್ಮನ ಜಾತ್ರೆ ಅನ್ನುವಂತೆ ಮೈಸೂರು ದಸರಾವನ್ನು ದುರುಪಯೋಗ ಮಾಡಿಕೊಂಡು ಸುದ್ದಿಯಾಗಿದ್ದರು.
ಇನ್ನುಳಿದಂತೆ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ ಅದ್ಯಾವ ಜೋಡಿಗಳು ರಿಯಲ್ ಲೈಫ್ ನಲ್ಲಿ ಸದ್ದು ಮಾಡಲೇ ಇಲ್ಲ. ಬಿಗ್ ಬಾಸ್ ಮುಗಿಸಿ ಬಂದ ಬಳಿಕ ನಾವಾಯ್ತು, ನಮ್ಮ ಬದುಕಾಯ್ತು ಎಂದು ಮುಂದೆ ಸಾಗಿದ್ದಾರೆ.
ಈ ಬಾರಿ ಸೀಸನ್ ಎಂಟರಲ್ಲೂ ಒಂದೆರೆಡು ಜೋಡಿಗಳು ಸದ್ದು ಮಾಡಿದೆ. ಮಂಜು ಹಾಗೂ ದಿವ್ಯಾ ಸುರೇಶ್ ಹೊರಗಿನ ಪ್ರಪಂಚಕ್ಕೆ ಜೋಡಿಯಂತೆ ಕಾಣಿಸಿಕೊಂಡಿದ್ದರು. ಆದರೆ ಮನೆಯಿಂದ ಹೊರಗ ಬಂದ ಮೇಲೆ ಅವರಿಬ್ಬರೂ ಸೇರಿ ವೀಕ್ಷಕರನ್ನು ಬಕ್ರ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಇನ್ನು ಅರವಿಂದ್ ಹಾಗೂ ದಿವ್ಯಾ ಉರುಡುಗ ನಡುವೆ ಗಟ್ಟಿಯಾದ ನಂಟಿದೆ ಅನ್ನುವುದನ್ನು ಅವರ ಸಹ ಸ್ಪರ್ಧಿಗಳೇ ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೆಲವೊಂದು ಉತ್ತಮ ಘಟನೆಗಳು ನಡೆದರೂ ಅಚ್ಚರಿ ಇಲ್ಲ.
ಇನ್ನುಳಿದಂತೆ ಬ್ರೋಗೌಡ ಖ್ಯಾತಿಯ ಶಮಂತ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಒಂದು ಸಲ ವೈಷ್ಣವಿ ಜೊತೆಗೆ ಹೆಸರು ಥಳುಕು ಹಾಕಿಕೊಂಡಿದ್ರೆ, ಮತ್ತೆ ಕೆಲವು ಸಲ ದಿವ್ಯಾ ಉರುಡುಗ ಜೊತೆಗೆ ಕೇಳಿ ಬಂದಿತ್ತು.
ಯಾವಾಗ ಪ್ರಿಯಾಂಕ ಬಿಗ್ ಬಾಸ್ ಮನೆಗೆ ಬಂದರೋ, ವೀಕ್ಷಕರು ಇದೊಂದು ಒಳ್ಳೆಯ ಜೋಡಿ ಎಂದು ಸೀಲ್ ಒತ್ತಿದ್ದರು. ಹೀಗಾಗಿ ಬಿಗ್ ಬಾಸ್ ಮುಗಿಸಿ ಅವರಿಬ್ಬರೂ ಹೊರ ಬಂದ ಮೇಲೂ ಪ್ರಿಯಾಂಕ ಹಾಗೂ ಶಮಂತ್ ಜೊತೆಗೆ ಲೈವ್ ಬನ್ನಿ ಎಂದು ಒತ್ತಾಯಿಸುತ್ತಿದ್ದಾರೆ. ಮಾತ್ರವಲ್ಲದೆ ಅವರಿಬ್ಬರು ಪ್ರತ್ಯೇಕವಾಗಿ ಲೈವ್ ಬಂದ್ರೆ ಅವರ ಸಂಬಂಧದ ಬಗ್ಗೆಯೇ ಪ್ರಶ್ನೆಗಳನ್ನು ತೇಲಿ ಬಿಡುತ್ತಾರೆ.
ಹೀಗೆ ಶನಿವಾರ ಇನ್ಸ್ಟಾದಲ್ಲಿ ನಡೆದ ನೇರ ಪ್ರಸಾರದಲ್ಲೂ ಅಭಿಮಾನಿಯೊಬ್ಬರು, ಬ್ರೋಗೌಡ ಬಗ್ಗೆ ಹೇಳಿ ಎಂದು ಪ್ರಿಯಾಂಕ ಬಳಿ ಮನವಿ ಮಾಡಿದ್ದಾರೆ. ಈ ವೇಳೆ ಎಲ್ಲದಕ್ಕೂ ಪೂರ್ಣವಿರಾಮ ಇಟ್ಟಿರುವ ಪ್ರಿಯಾಂಕ,
ಅಯ್ಯೋ ಅದೊಂದು ಪ್ರಶ್ನೆ ಕೇಳಬೇಡಿ. ಶಮಂತ್ ನಾನು ನಿಜವಾಗ್ಲೂ ಒಳ್ಳೆ ಸ್ನೇಹಿತರು. ನನಗೂ ಅವರಿಗೂ ಯಾವುದೇ ರೀತಿ ಪ್ರೀತಿ ಪ್ರೇಮ ಏನೂ ಇಲ್ಲ, ನಾನು ನಾಚಿಕೊಂಡಿದ್ದು ಒಂದೇ ಕಾರಣಕ್ಕೆ ಅವರು ನನ್ನ ಮಾತನಾಡಿಸಬೇಕಾದರೆ ಮೂರನೇ ವ್ಯಕ್ತಿಯಿಂದ ಮಾತನಾಡಿಸುತ್ತಿದ್ದರು ಅದು ನನಗೆ ಫನ್ನಿಯಾಗಿ ಕಾಣಿಸುತ್ತಿತ್ತು ಹಾಗಾಗಿ ನಾನು ನಗ್ತಾ, ಅಷ್ಟು ಬಿಟ್ರೆ ಬೇರೆ ಎನೂ ಇಲ್ಲ. ನಿಜವಾಗಿ ಹೇಳಬೇಕಾದ್ರೆ ಅವರಿಗೆ ಕ್ರಶ್ ಇದದ್ದು ಬೇರಯವರ ಮೇಲೆ ನನ್ನ ಮೇಲಲ್ಲ ಅಂದಿದ್ದಾರೆ.
Discussion about this post