ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಮಹಾ ಸ್ಫೋಟ ಸಂಭವಿಸಿದೆ. ಎಲ್ಲಾ ದಾಖಲೆಗಳನ್ನು ಮುರಿದು ಕೊರೋನಾ ಸೋಂಕಿತರು ಇಂದು ಪತ್ತೆಯಾಗಿದ್ದು ಇಂದು ಒಂದೇ ದಿನ 21794 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ ಸಿಂಹಪಾಲು ಸೋಂಕಿತರು ಬೆಂಗಳೂರಿನಲ್ಲೇ ಪತ್ತೆಯಾಗಿದ್ದಾರೆ. 13792 ಮಂದಿಗೆ ರಾಜಧಾನಿಯಲ್ಲೇ ಸೋಂಕು ತಗುಲಿದೆ.
ಇನ್ನು ಸಾವಿನ ಸಂಖ್ಯೆಯಲ್ಲೂ ಕರ್ನಾಟಕ ದಾಖಲೆ ಬರೆದಿದ್ದು ಇಂದು ಒಂದೇ ದಿನ149 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರಲ್ಲಿ 92 ಮಂದಿ ಬೆಂಗಳೂರಿನಲ್ಲೇ ಮೃತಪಟ್ಟಿದ್ದಾರೆ.
ಇನ್ನು ಕೊರೋನಾ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಅರ್ಧ ಕರ್ನಾಟಕಕ್ಕೆ ಬೀಗ ಜಡಿಯಲಾಗಿದೆ.
ಈ ನಡುವೆ ಇಂದು ಪತ್ತೆಯಾದ ಕೊರೋನಾ ಸೋಂಕಿತರ ಸಂಖ್ಯೆ ಯಾವ ಲೆಕ್ಕವೂ ಅಲ್ಲ. ಮೇ ಮಧ್ಯ ಭಾಗದಲ್ಲಿ ಇದನ್ನು ಮೀರಿ ಸೋಂಕಿತರು ಪತ್ತೆಯಾಗಲಿದ್ದಾರೆ. ಅದಕ್ಕೆ ಮನಸ್ಥಿತಿ ಹಾಗೂ ವ್ಯವಸ್ಥೆ ಮಾಡಿಕೊಳ್ಳಿ ಅಂದಿದ್ದಾರೆ.ಮೇ ಮಧ್ಯ ಭಾಗದಲ್ಲಿ ಮತ್ತಷ್ಟು ಕಠಿಣ ದಿನಗಳು ಕಾದಿದೆ. ಇಂದು ಪತ್ತೆಯಾಗಿರುವುದು ಪೀಕ್ ಅಲ್ಲ, ಮೇ ಮಧ್ಯ ಭಾಗದಲ್ಲಿ ಕೊರೋನಾ ಪೀಕ್ ಗೆ ಹೋಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಒಂದು ವೇಳೆ ತಜ್ಞರು ಕೊಟ್ಟಿರುವ ಎಚ್ಚರಿಕೆ ನಿಜವಾದರೆ ಕರ್ನಾಟಕದಲ್ಲಿ ಲಾಕ್ ಡೌನ್ ಹೇರುವುದು ಅನಿವಾರ್ಯವಾಗಲಿದೆ.
Discussion about this post