ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆ ರಕ್ಕಸ ಸ್ವರೂಪಿಯಾಗಿ ಮುನ್ನುಗುತ್ತಿದೆ. ಮುಂಜಾಗ್ರತ ಕ್ರಮಗಳನ್ನು ಹೊರತುಪಡಿಸಿದ್ರೆ ಮತ್ಯಾವ ಮಾರ್ಗದ ಮೂಲಕವೂ ಸೋಂಕನ್ನು ತಡೆಯಲು ಸಾಧ್ಯವಿಲ್ಲ.
ಈ ನಡುವೆ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿದ್ದು ಬೆಂಗಳೂರಿಗೆ ಕಠಿಣ ಕ್ರಮಗಳು ಅನಿವಾರ್ಯ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಆದರೆ ಆರೋಗ್ಯ ಸಚಿವರು ಕಳೆದ ಹಲವು ದಿನಗಳಿಂದ ಕಠಿಣ ಕ್ರಮಗಳ ಬಗ್ಗೆ ಮಾತನಾಡುತ್ತಿದ್ದಾರೆ ಅದರೆ ಕಠಿಣ ಕ್ರಮಗಳು ಇನ್ನೂ ಜಾರಿಯಾಗಿಲ್ಲ ಅನ್ನುವುದು ವಿಪರ್ಯಾಸ.
ಇನ್ನು ಬೆಂಗಳೂರಿನ ಪರಿಸ್ಥಿತಿ ಕುರಿತಂತೆ ಕೊರೋನಾ ಸೋಂಕಿತರಾಗಿರುವ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ಹೇಳಿರುವ ಸುಧಾಕರ್,ತಾಂತ್ರಿಕ ಸಮಿತಿಯವರು ನೀಡಿದ ಸಲಹೆಗಳ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಜೊತೆಗೆ ಬೆಂಗಳೂರಿಗೆ ಬಿಗಿ ಕ್ರಮ ಕೈಗೊಳ್ಳದೇ ಹೋದರೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ.
ಇದೇ ವೇಳೆ ಕೊರೋನಾ ಸಮುದಾಯಕ್ಕೆ ಹರಡಿ ಅನ್ನುವುದನ್ನು ಒಪ್ಪಿಕೊಂಡಿರುವ ಸುಧಾಕರ್, ಅಪಾಯ ಮನೆ ಬಾಗಿಲಲ್ಲೇ ಇದೆ ಅನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.
Discussion about this post