ಸಮಾಜದಲ್ಲಿ ಒಳ್ಳೆಯವರು ಅನ್ನಿಸಿಕೊಂಡವರು, ತಮ್ಮ ಅಸಲಿ ಮುಖವನ್ನು ಸಮಾಜಕ್ಕೆ ತೋರಿಸಬೇಕಾದರೆ ಬಿಗ್ ಬಾಸ್ ಮನೆಗೆ ಹೋಗಬೇಕು. ಮುಖ ಯಾವುದು ಮುಖವಾಡ ಯಾವುದು ಅನ್ನುವುದು ಅಲ್ಲಿ ಗೊತ್ತಾಗುತ್ತದೆ. ಬಿಗ್ ಬಾಸ್ ಮನೆಯ ಎಂಟ್ರಿ ಸಂದರ್ಭದಲ್ಲೇ ಎಲ್ಲರೂ ಹೇಳುವುದು ಒಂದೇ ಮಾತು, ಈ ಕಾರಣದಿಂದ ಬಿಗ್ ಬಾಸ್ ಮನೆಯ ಒಳಗಿರುವುದೇ ಅಸಲಿ ಮುಖ ಅನ್ನುವುದು ಬಯಲಾಗುತ್ತದೆ.
ಈವರೆಗಿನ ಸೀಸನ್ ಗಳ ಪೈಕಿ ಕೆಲವೇ ಕೆಲವು ಸ್ಪರ್ಧಿಗಲು ಮನೆ ಹೊರಗಡೆ ಮತ್ತು ಒಳಗಡೆ ಒಂದೇ ರೀತಿ ಕಾಣಿಸಿಕೊಂಡಿದ್ದಾರೆ. ಬಹುತೇಕರು ಮನೆಯೊಳಗಡೆ ಒಂದು ರೀತಿ ಇದ್ರೆ ಹೊರಗಡೆ ಮತ್ತೊಂದು ರೀತಿ ಇರುತ್ತಿದ್ರು. ಕೇಳಿದ್ರೆ ಅದು ಆಟದ ಶೈಲಿ ಅನ್ನುವ ತೇಪೆ ಮಾತು.
ಮಹಾಮನೆಯ ಮಾವ ಖ್ಯಾತಿಯ ಸಂಬರಗಿಯವರ ಆಟದ ವೈಖರಿಗೆ ಇಷ್ಟೆಲ್ಲಾ ಕಥೆ ಕೇಳಬೇಕಾಯ್ತು. ಚಂದ್ರಚೂಡ ಅವರು ಮನೆಯ ಒಳಗಡೆ ಬಂದ ಮೇಲಂತು, ಸಂಬರಗಿಯ ಆಟದ ವೈಖರಿಯೇ ಬದಲಾಗಿದೆ. ನಾನು ನಾನಾಗಿಯೇ ಇರುತ್ತೇನೆ ಅಂದವರು ಇದೀಗ ಚಂದ್ರಚೂಡ ಅವರ ಸೂತ್ರದಂತೆ ಆಡುತ್ತಿದ್ದಾರೆ. ಅದಕ್ಕೊಂದು ಸ್ಪಷ್ಟ ನಿದರ್ಶನ ಟಾರ್ಗೇಟ್ ದಿವ್ಯಾ ಸುರೇಶ್.
ತನ್ನೊಂದಿಗೆ ಬೆರೆಯುತ್ತಿಲ್ಲ. ನನ್ನ ಕ್ಯಾರೇ ಮಾಡುತ್ತಿಲ್ಲ, ಮಂಜನೊಂದಿಗೆ ಸೇರಿಕೊಂಡಿದ್ದಾಳೆ, ನನಗೆ ಎದುರುತ್ತರ ಕೊಡುತ್ತಾಳೆ ಅನ್ನುವ ಕಾರಣ ಇಟ್ಟುಕೊಂಡಿರುವ ಸಂಬರಗಿ ದಿವ್ಯಾ ಸುರೇಶ್ ಅವರನ್ನು ಟಾರ್ಗೇಟ್ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆ ಡವ್ ಅನ್ನೋ ಕೆಟ್ಟ ಶಬ್ಧ ಬಳಸಿದ್ದ ಸಂಬರಗಿ ಕರ್ನಾಟಕದ ಮುಂದೆ ತಲೆ ತಗ್ಗಿಸಿದ್ದರು.
ಇನ್ನು ಶನಿವಾರ ಸುದೀಪ್ ಅವರು, ಯಾರರ ಮನೆಯಿಂದ ಹೊರಬೇಕು ಅನ್ನುವ ಪ್ರಶ್ನೆ ಕೇಳಿದ್ರೆ ಸಂಬರಗಿಯ ಉತ್ತರ ದಿವ್ಯಾ ಸುರೇಶ್ ಆಗಿತ್ತು. ಅದಕ್ಕೆ ಕೊಟ್ಟ ಕಾರಣ ಕೂಡಾ ತೀರಾ ಕಳಪೆಯಾಗಿತ್ತು. ಯಾರದ್ದೋ ಬಾಲವಾಗಿದ್ದಾಳೆ ಅನ್ನುವ ಸ್ಲೇಟ್ ಮೆಂಟ್ ಸಂಬರಗಿಗೆ ಮುಂದೆ ಮುಳ್ಳಾಗುವುದರಲ್ಲಿ ಸಂಶಯವಿಲ್ಲ.
Discussion about this post