ಬೆಂಗಳೂರು : ಕೊರೋನಾ ಎರಡನೆ ಅಲೆ ನಿಯಂತ್ರಿಸುವ ಸಲುವಾಗಿ ಆರೋಗ್ಯ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕೊರೋನಾ ಟೆಸ್ಟ್ ಗೆ ಇದೀಗ ವೇಗ ನೀಡಲಾಗಿದೆ. ಆದರೆ ಜನ ಸಹಕರಿಸದಿದ್ರೆ ಸರ್ಕಾರವಾದರೂ ಏನು ಮಾಡಲು ಸಾಧ್ಯ. ಅದರಲ್ಲೂ ವಿದ್ಯಾವಂತರು ಎನಿಸಿಕೊಂಡ ಮಂದಿಯೇ ಸರ್ಕಾರಕ್ಕೆ ಸೆಡ್ಡು ಹೊಡೆಯಲಾರಂಭಿಸಿದ್ದಾರೆ.
ಈ ನಡುವೆ ಬೆಂಗಳೂರು ಜಿಕೆವಿಕೆ ಕಾಲೇಜಿನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿದೆ. ಕಾಲೇಜಿನ ಹಾಸ್ಟೆಲ್ ನಲ್ಲಿದ್ದ 20ಕ್ಕೂ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಕೃಷಿ ವಿವಿಯ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲು ವಿವಿ ನಿರ್ಧರಿಸಿದೆ.
ಆದರೆ ಯಾವಾಗ ಕೊರೋನಾ ಟೆಸ್ಟ್ ಬರ್ತಾರೆ ಅನ್ನುವ ಸುದ್ದಿ ಸಿಕ್ತೋ, ಬ್ಯಾಗ್ ಪ್ಯಾಕ್ ಮಾಡಿಕೊಂಡ ವಿದ್ಯಾರ್ಥಿನಿಯರು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.
ಸೋಂಕು ವ್ಯಾಪಕವಾಗಿ ಹಬ್ಬಿರುವ ಹಿನ್ನಲೆಯಲ್ಲಿ ಯಾರಾದರೂ ಮನೆಗೆ ಹೋಗಲು ಬಯಸಿದರೆ ಸ್ವಇಚ್ಛೆಯಿಂದ ಮನೆಗೆ ಹೋಗುತ್ತೇವೆ ಎಂದು ಪತ್ರ ಬರೆದುಕೊಡುವಂತೆ ವಿವಿ ಆಡಳಿತ ಮಂಡಳಿ ಸೂಚಿಸಿತ್ತು. ಜೊತೆಗೆ ಹೋಗುವ ಮುನ್ನ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಲಾಗಿತ್ತು.
ಆದರೆ ವಿವಿಯ ಆದೇಶಕ್ಕೆ ಕ್ಯಾರೆ ಅನ್ನದ ವಿದ್ಯಾರ್ಥಿನಿಯರು, ಟೆಸ್ಟ್ ಗೆ ಹೆದರಿ ಹಾಸ್ಟೆಲ್ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಹೀಗೆ ಹೋದವರ ಪೈಕಿ ಅದೆಷ್ಟು ಮಂದಿಗೆ ಕೊರೋನಾ ಸೋಂಕು ಇತ್ತೋ ಗೊತ್ತಿಲ್ಲ. ಇನ್ನು ಅದೆಷ್ಟು ಮಂದಿಗೆ ಇವರಿಂದ ಸೋಂಕು ಹರಡುತ್ತದೋ ಅನ್ನುವ ಆತಂಕ ಎದುರಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆ ಸ್ಪೋಟಗೊಂಡಿದೆ. ವಿದ್ಯಾರ್ಥಿಗಳ ಈ ಆವಾಂತರದಿಂದ ಇನ್ನೇನು ಕಾದಿದೆಯೋ.
Discussion about this post