ಬೆಂಗಳೂರು : ಇದೀಗ ಜಾರಕಿಹೊಳಿ ಸಿಡಿ ಸಮಸ್ಯೆಯೊಂದನ್ನು ಬಿಟ್ಟರೆ ಕರ್ನಾಟಕ ಸುಭಿಕ್ಷಾವಾಗಿದೆ. ಕಾಮಲೀಲೆ ಸಿಡಿ ಸಮಸ್ಯೆಯನ್ನು ಎಸ್ಐಟಿ ಶೀಘ್ರದಲ್ಲೇ ಶೀಘ್ರದಲ್ಲೇ ಬಗೆ ಹರಿಸಲಿದೆ. ನಿಜವಾದ ಆರೋಪಿಗಳು ಶೀಘ್ರದಲ್ಲೇ ಜೈಲು ಸೇರಲಿದ್ದಾರೆ.
ಜಾರಕಿಹೊಳಿ ಸಿಡಿ ರಂಪಾಟ ನೋಡಿದ ಕೊರೋನಾ ವೈರಸ್ ಕೂಡಾ ಚೀನಾಗೆ ಹಿಂತಿರುಗಿದೆ ಅಂತಾ ನೀವು ಅಂದುಕೊಂಡಿದ್ರೆ ಖಂಡಿತಾ ಸುಳ್ಳು.
ಮಾಸ್ಕ್ ಇಲ್ಲದ ಹತ್ತಾರು ಮಂದಿಯನ್ನು ಸುತ್ತಾ ಗುಡ್ಡೆ ಹಾಕಿಕೊಂಡು ಮಾಧ್ಯಮಗಳ ಮುಂದೆ ಮಾತನಾಡುತ್ತಿರುವ ರಮೇಶ್ ಜಾರಕಿಹೊಳಿಯವರಿಗೆ ಕೊರೋನಾ ಆತಂಕವಿಲ್ಲದಿರಬಹುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ರಮೇಶ್ ಜಾರಕಿಹೊಳಿಯವರಿಗೆ ದಂಡ ಹಾಕೋ ಧೈರ್ಯ ಕೂಡಾ ಬಿಬಿಎಂಪಿಗೆ ಇಲ್ಲದಿರಬಹುದು. ಆದರೆ ಕೊರೋನಾ ವೈರಸ್ ಮಾತ್ರ ಸದ್ದಿಲ್ಲದೆ ತನ್ನ ಕಾರ್ಯವನ್ನು ಮಾಡುತ್ತಿದೆ.
ಎರಡನೇ ಅಲೆಯ ಹೆಸರಿನಲ್ಲಿ ಕರ್ನಾಟಕದಲ್ಲಿ ಮತ್ತೆ ರೌದ್ರವತಾರ ತೋರುತ್ತಿರುವ ಚೈನಾ ವೈರಸ್ ಇಂದು 2886 ಮಂದಿಗೆ ತಗುಲಿದೆ.
ಇನ್ನು ಕೊರೋನಾ ಸೋಂಕಿಗೆ ಒಟ್ಟು ಮಂದಿ 8 ಬಲಿಯಾಗಿದ್ದು, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ತಲಾ ಇಬ್ಬರು ಸೋಂಕಿಗೆ ಬಲಿಯಾದ್ರೆ ಬೀದರ್, ಹಾಸನ, ತುಮಕೂರು ಮತ್ತು ಧಾರವಾಡದಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಅತೀ ಹೆಚ್ಚು ಅಂದ್ರೆ 1820 ಸೋಂಕಿತರು ಪತ್ತೆಯಾಗಿದ್ದು, ಉಡುಪಿಯಲ್ಲಿ 156, ಕಲಬುರಗಿಯಲ್ಲಿ 147 ಹಾಗೂ ಮೈಸೂರಿನಲ್ಲಿ 131 ಮಂದಿಗೆ ಸೋಂಕು ತಗುಲಿದೆ. ಮತ್ತೆಲ್ಲಾ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರು ಅಂಕೆಯಲ್ಲಿದೆ.
ಉಡುಪಿಯಲ್ಲಿ ಕೊರೋನಾ ಸ್ಫೋಟ ಸಂಭವಿಸಿದ್ದು, 156 ಪ್ರಕರಣಗಳ ಪೈಕಿ 135 ಕೇಸ್ ಗಳು ಮಣಿಪಾಲದ ಎಂಐಟಿ ಕ್ಯಾಂಪಸ್ ನಲ್ಲೇ ಪತ್ತೆಯಾಗಿದೆ.
ಎಂಐಟಿ ಆಡಳಿತ ಮಂಡಳಿಯ ನಿರ್ಲಕ್ಷ್ಯ ಸ್ಪಷ್ಟವಾಗುತ್ತಿದ್ದು, ಆರೋಗ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವ ಧೈರ್ಯ ತೋರುತ್ತಾ ಕಾದು ನೋಡಬೇಕು.
Discussion about this post