ಗದಗ : ಒಂದು ದಿನದ ನವಜಾತ ಶಿಶುವಿಗೆ ಕೊರೋನಾ ಅಂಟಿದ ಘಟನೆ ಗದಗದಿಂದ ವರದಿಯಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿ ಜಗದೀಶ್ ನುಚ್ಚಿನ ಸ್ಪಷ್ಟನೆ ಕೊಟ್ಟಿದ್ದು ನವಜಾತ ಶಿಶುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ತಾಯಿಗೆ ನೆಗೆಟಿವ್ ವರದಿ ಬಂದಿದೆ ಅಂದಿದ್ದಾರೆ.
ಈ ನಡುವೆ ಜಿಲ್ಲೆಯಲ್ಲಿ 87 ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಗರ್ಭಿಣಿಯರಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಇಬ್ಬರು ಗದಗ ಮತ್ತು ರೋಣ ಪಟ್ಟಣದವರಾಗಿದ್ದು, ಎಲ್ಲಾ ಸೋಂಕಿತರು ಆರೋಗ್ಯವಾಗಿದ್ದು ಆತಂಕ ಪಡುವ ಅಗತ್ಯವಿಲ್ಲ ಅಂದಿದ್ದಾರೆ.
ಇನ್ನು ಒಂದು ದಿನದ ನವಜಾತ ಶಿಶುವಿಗ ಆಸ್ಪತ್ರೆಯಲ್ಲಿ ಸೋಂಕು ತಗುಲಿರಬಹುದು ಎಂದು ಆರೋಗ್ಯ ಇಲಾಖೆ ಸಂಶಯ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ : ಶೇ22 ಪಾಸಿಟಿವ್ ದರ ದಾಖಲಿಸಿದ ಕರ್ನಾಟಕ
ಬೆಂಗಳೂರು : ನಿರೀಕ್ಷೆಯಂತೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಲಾರಂಭಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಇಂದು 41457 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದ ಪಾಸಿಟಿವಿ ದರ ಶೇ22ಕ್ಕೆ ತಲುಪಿದೆ. ಇಂದು 185872 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇನ್ನು ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸಿದ್ದವಾಗಿರುವ 244 ಆಕ್ಸಿಜನ್ ಪ್ಲಾಟ್ ಗಳ ಪೈಕಿ 222 ಪ್ಲಾಟ್ ಗಳನ್ನು ಸರ್ವ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಈ ನಡುವೆ ಕೊರೋನಾ ಸೋಂಕಿನ ಬೆಂಗಳೂರಿನಲ್ಲಿ ಮಾಹಿತಿ ನೀಡಿರುವ ಆರೋಗ್ಯ ಸಚಿವ ಸುಧಾಕರ್ ರಾಜ್ಯದಲ್ಲಿ ಫೆಬ್ರವರಿ ಮೂರನೇ ವಾರದ ಹೊತ್ತಿಗೆ ಮೂರನೇ ಅಲೆ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿದೆ. ಹೀಗಾಗಿ ಅಲ್ಲಿಯ ತನಕ ಜನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲೇಬೇಕು. ಹಾಗಂತ ಆ ಬಳಿಕವೂ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಅಂದಿದ್ದಾರೆ.
Discussion about this post