ಜಾರ್ಖಂಡ್ನ ಮಾಜಿ ಸಿಎಂ ರಘುಬರ್ ದಾಸ್ ಒಡಿಶಾ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಡಿಶಾ ಮತ್ತು ತ್ರಿಪುರಾಕ್ಕೆ ಹೊಸ ರಾಜ್ಯಪಾಲರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಜಾರ್ಖಂಡ್ನ ಮಾಜಿ ಸಿಎಂ ರಘುಬರ್ ದಾಸ್ ಒಡಿಶಾ ರಾಜ್ಯಪಾಲರಾಗಿ ನೇಮಕಗೊಂಡರೆ, ಇಂದ್ರ ಸೇನಾ ರೆಡ್ಡಿ ನಲ್ಲು ಅವರನ್ನು ತ್ರಿಪುರಾ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ರಘುಬರ್ ದಾಸ್ ಅವರು 2014 ಮತ್ತು 2019 ರ ನಡುವೆ ಜಾರ್ಖಂಡ್ ಸಿಎಂ ಆಗಿ ಸೇವೆ ಸಲ್ಲಿಸಿದರು. ದಾಸ್ ಅವರು ಬಿಹಾರ ಮತ್ತು ಜಾರ್ಖಂಡ್ ಒಂದೇ ರಾಜ್ಯವಾಗಿದ್ದಾಗ 1995 ರಲ್ಲಿ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ರಘುಬರ್ ದಾಸ್ ಅವರು ಜಾರ್ಖಂಡ್ನ ಮುಖ್ಯಮಂತ್ರಿಯಾಗಿ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ದಾಸ್ ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಲ್ಲು ಇಂದ್ರಸೇನಾ ರೆಡ್ಡಿ ತೆಲಂಗಾಣದ ಬಿಜೆಪಿ ನಾಯಕರಾಗಿದ್ದು ಮತ್ತು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯನ್ನೂ ಇವರು ನಿಭಾಯಿಸಿದ್ದರು.
Discussion about this post