ಕನ್ನಡ ಮನೋರಂಜನಾ ವಾಹಿನಿಗಳಲ್ಲಿ ಯಕ್ಷಗಾನವನ್ನು ಅವಮಾನಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ನಡೆದಿದೆ.ಆದರೆ Zee Kannada ಈ ಆಕ್ರೋಶಕ್ಕೆ ಸೊಪ್ಪು ಹಾಕಿರಲಿಲ್ಲ
ಝೀ ಕನ್ನಡದಲ್ಲಿ ಪ್ರಸಾರವಾದ ರಿಯಾಲಿಟಿ ಶೋ ಒಂದರಲ್ಲಿ ಯಕ್ಷಗಾನಕ್ಕೆ ಅವಮಾನವಾಗಿದೆ ಅನ್ನುವ ಆರೋಪ ಕೇಳಿ ಬಂದಿದೆ.(Zee Kannada) ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ #boycottzeekannada ಆಂದೋಲನ ಪ್ರಾರಂಭವಾಗಿದೆ. ಇದಕ್ಕೆ ಸ್ಪಂದಿಸಿರುವ ಹಲವಾರು ಮಂದಿ ತಮ್ಮ ಸೆಟ್ ಅಪ್ ಬಾಕ್ಸ್ ನಲ್ಲಿ ಝೀ ಕನ್ನಡ ವಾಹಿನಿಯ ಚಂದಾದಾರಿಕೆಯನ್ನು ಅಂತ್ಯಗೊಳಿಸಿದ್ದಾರೆ.
ಇನ್ನು ಝೀ ಕನ್ನಡ ವಾಹಿನಿ ವಿರುದ್ಧ ಸುದೀರ್ಘ ಲೇಖನವನ್ನು ಬರೆದಿರುವ ವಸಂತ ಗಿಳಿಯಾರ್, ಝೀ ಕನ್ನಡ ಕರಾವಳಿಯ ಕಲೆಯನ್ನು ಕೆಣಕುತ್ತಿರುವುದು ಇದು ಮೊದಲೇನಲ್ಲ, ಈ ಬಾರಿಯೂ ಪಾಠ ಕಲಿಸದೇ ಹೋದರೆ ನಮ್ಮದೇ ತಪ್ಪಾಗುತ್ತದೆ ಅಂದಿದ್ದಾರೆ.
ಕೇವಲ ಯಕ್ಷಗಾನ ಅಭಿಮಾನಿಗಳು ಅವಮಾನದ ವಿರುದ್ಧ ದನಿ ಎತ್ತಿದ್ರೆ ಸಾಲದು, ಈ ದನಿಗೆ ಚಾನೆಲ್ ಸೊಪ್ಪು ಕೂಡಾ ಹಾಕುವುದಿಲ್ಲ. ಸೆಲೆಬ್ರೆಟಿ ಕಲಾವಿದರು, ಭಾಗವತರು, ಹಿರಿಯ ವೇಷಧಾರಿಗಳು ದನಿ ಎತ್ತಲಿ ಚಾನೆಲ್ ಬೆಂಡಾಗಿ ಕ್ಷಮೆ ಕೇಳದಿದ್ರೆ ಹೇಳಿ.
ಹೀಗಾಗಿಯೇ ಝೀ ಕನ್ನಡದ ನಡೆ ವಿರುದ್ಧ ಯಕ್ಷಗಾನ ರಂಗದ ಅನೇಕ ಹಿರಿಯರು ದನಿ ಎತ್ತದೆ ಮೌನವಾಗಿರುವುದರಿಂದ ಈ ಹೋರಾಟಕ್ಕೆ ಬಲ ಬರುವುದಿಲ್ಲ.
Discussion about this post