Zee Kannada ವಾಹಿನಿ ವೀಕ್ಷಕರ ಆಕ್ರೋಶಕ್ಕೆ ತುತ್ತಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಕರಾವಳಿಯನ್ನು ಕೆಣಕಿದ ಆರೋಪಕ್ಕೆ ಗುರಿಯಾಗಿತ್ತು.
ಬೆಂಗಳೂರು : Zee Kannada ವಾಹಿನಿ ವಿರುದ್ಧ ಈ ಬಾರಿ ಕರಾವಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಿಯಾಲಿಟಿ ಶೋ ಒಂದರಲ್ಲಿ ಯಕ್ಷಗಾನವನ್ನು ಅವಮಾನಿಸಿರುವುದು ಕರಾವಳಿಗರಿಗೆ ನೋವು ತಂದಿದೆ. ಆರಾಧಾನ ಕಲೆಯಾಗಿರುವ ಯಕ್ಷಗಾನದ ಕಿರೀಟ, ಯಕ್ಷಗಾನದ ಗೆಜ್ಜೆ ಹೀಗೆ ಪ್ರತಿಯೊಂದು ವಸ್ತುವನ್ನೂ ಗೌರವದಿಂದ ಕಾಣಲಾಗುತ್ತದೆ. ಹಾಗಿರುವಾಗ ಯಕ್ಷಗಾನದ ವೇಷಭೂಷಣ ಧರಿಸಿ, ಅದೇ ಪ್ರಕಾರದಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡಿಸಿರುವುದು ಆಕ್ರೋಶಕ್ಕೆ (Zee Kannada) ಕಾರಣವಾಗಿದೆ.
ಇನ್ನು ಯಕ್ಷಗಾನ ಕಲಿಯೋದು ಅಂದ್ರೆ ಅದೊಂದು ತಪ್ಪಸ್ಸು.ಹಾಗಿರುವ ಕಾರಣದಿಂದ ಸಹಜವಾಗಿಯೇ Zee Kannada ವಿರುದ್ಧ ಕರಾವಳಿ ಕೆಂಡವಾಗಿದೆ. ಈ ಹಿಂದೆಯೂ ಇದೇ ರೀತಿಯಲ್ಲಿ ಯಕ್ಷಗಾನಕ್ಕೆ ಅವಮಾನವಾಗಿತ್ತು. ಆಗ್ಲೂ ಕ್ಷಮೆ ಕೇಳಲಾಗಿತ್ತು. ಮತ್ತೆ ಅದೇ ತಪ್ಪು ಮಾಡಲಾಗಿತ್ತು. ಪದೇ ಪದೇ ತಪ್ಪು ಮಾಡುತ್ತಿರುವುದು (Zee Kannada) ಇದು ಉದ್ದೇಶಪೂರ್ವಕ ಅನ್ನುವುದು ಯಕ್ಷಗಾನ ಪ್ರೇಮಿಗಳ ಆಕ್ರೋಶ.
ಇದನ್ನೂ ಓದಿ : Zee Kannada : ಯಕ್ಷಗಾನಕ್ಕೆ ಅವಮಾನ : ಝೀ ಕನ್ನಡ ವಿರುದ್ಧ ಸಿಡಿದೆದ್ದ ಕರಾವಳಿ
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ boycott zee kannada ಟ್ರೆಂಡ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ವಾಹಿನಿ, ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕೆಲವರಿಗೆ ನೋವಾಗಿದೆ, ನೋವಾಗಿದ್ರೆ ಕ್ಷಮೆ ಇರಲಿ ಎಂದು ಕ್ಷಮೆಯನ್ನು ಕೇಳಿದೆ. ಆದರೆ ಯಕ್ಷಗಾನ ಪ್ರೇಮಿಗಳು ಈ ಕ್ಷಮೆಯನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ವೇದಿಕೆಯಲ್ಲಿ ಅವಮಾನಿಸುವ ನೀವು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳುವುದು ಹೊಸದೇನಲ್ಲ. ಎಲ್ಲಿ ಅವಮಾನ ಮಾಡಿದ್ದೀರೋ ಅಲ್ಲೇ ಕ್ಷಮೆ ಕೇಳಿ. ಹೀಗಾಗಿ ವೇದಿಕೆಯಲ್ಲಿ ಕ್ಷಮೆ ಕೇಳದ ಹೊರತು ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಾರಿ ಝೀ ಕನ್ನಡದ ವಿರುದ್ಧ ಕಾನೂನು ಹೋರಾಟಕ್ಕೆ ಕರ್ನಾಟಕ ಯಕ್ಷಗಾನ ಒಕ್ಕೂಟ ಸೇರಿದಂತೆ ಹಲವಾರು ಯಕ್ಷಗಾನ ಸಂಘಟನೆಗಳು ನಿರ್ಧರಿಸಿದೆ. ಜೊತೆಗೆ ಹಲವಾರು ಸೆಲೆಬ್ರೆಟಿ ಯಕ್ಷಗಾನ ಕಲಾವಿದರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ : ಫೆವಿಕಾಲ್ ನಿಂದ ಮತ್ತೆ ಯಕ್ಷಗಾನಕ್ಕೆ ಅವಮಾನ… ಅಕಾಡೆಮಿ ಎಚ್ಚೆತ್ತುಕೊಳ್ಳದ ಹೊರತು ಅದೇನೂ ಮಾಡಲಾಗದು..
Discussion about this post