ಬೀದರ್ : ನಾನೇನು ಬೆಳ್ಳಗಿರುವವರನ್ನ ಕರಿಯ ಎಂದು ಕರೆದಿಲ್ಲ. ಕರ್ರಗೆ ಇರುವವರನ್ನೇ ತಾನೇ ಕರಿಯ ಅಂದಿರೋದು. ಬೆಳ್ಳಗೆ ಇರುವವರನ್ನು ಕರಿಯ ಎಂದು ಕರೆದಿದ್ರೆ ಜಮೀರ್ ಸುಳ್ಳು ಹೆಳ್ತಾನೆ ಅನ್ನಬಹುದಿತ್ತು. ಆದರೆ ನಾನು ಕರ್ರಗೆ ಇರುವವರನೇ ಕರಿಯ ಅಂದಿದ್ದೇನೆ ಎಂದು ಶಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಮಾರ್ಚ್ 30ರಂದು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಜಮೀರ್, ಕುಮಾರಸ್ವಾಮಿಯವರನ್ನು ಕಾಲಾ ಕುಮಾರಸ್ವಾಮಿ ( ಕರಿಯ ಕುಮಾರಸ್ವಾಮಿ) ಎಂದು ಉರ್ದು ಭಾಷೆಯಲ್ಲಿ ಜರಿದಿದ್ದರು.
ಈ ಹೇಳಿಕೆಯ ಬೆನ್ನಲ್ಲೇ ಯುವ ಜನತಾದಳದ ಕಾರ್ಯಕರ್ತರು ಕಾಂಗ್ರೆಸ್ ಶಾಸಕ ಜಮೀರ್ ಅವರ ಬೆಂಗಳೂರು ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಇದೊಂದು ಜನಾಂಗೀಯ ನಿಂದನೆಯಾಗಿದ್ದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದರು.
ಇದಾದ ಬಳಿಕ ಬೆಂಗಳೂರು ಮಹಾನಗರ ಯುವ ಘಟಕದ ಅಧ್ಯಕ್ಷ ಎ.ಎಂ. ಪ್ರವೀಣ್ ಕುಮಾರ್, ಕಮಲ್ ಪಂತ್ ಅವರನ್ನು ಭೇಟಿಯಾಗಿ, ಜೀಮ್ರ್ ವಿರುದ್ಧ ದೂರು ದಾಖಲಿಸಿದ್ದರು, ಕಪ್ಪು ವರ್ಣದ ಜನಾಂಗೀಯ ನಿಂದನೆ ಮಾಡಿರುತ್ತಾರೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದರು.
ದೂರು ದಾಖಲಿಸಿರುವ ಕುರಿತಂತೆ ಬೀದರ್ ನಲ್ಲಿ ಇಂದು ಪ್ರತಿಕ್ರಿಯಿಸಿದ ಜಮೀರ್ ಅಹಮ್ಮದ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾನೇನು ಕುಮಾರಸ್ವಾಮಿಯವರನ್ನು ಬಿಳಿಯ ಎಂದು ಕರೆಯಬೇಕಿತ್ತಾ. ವಿದೇಶಿಯರಂತೆ ಬೆಳ್ಳಗಿರುತ್ತಿದ್ರೆ ಹಾಗೇ ಅನ್ನಬಹುದಿತ್ತು. ಆದರೆ ಅವರು ಹಾಗಿಲ್ವೆ. ಕುಮಾರಸ್ವಾಮಿ ಕರ್ರಗೆ ಇರೋ ಕಾರಣಕ್ಕೆ ನಾನು ಅವರನ್ನು ಕರಿಯ ಅಂದಿದ್ದೇನು. ತಪ್ಪೇನ, ಅದರಲ್ಲಿ ದೂರು ದಾಖಲಿಸುವ ಪ್ರಶ್ನೆ ಎಲ್ಲಿ ಬಂತು ಎಂದು ಟಾಂಗ್ ಕೊಟ್ಟಿದ್ದಾರೆ.
ನನ್ನನ್ನು ಕುಳ್ಳ ಎಂದು ಕರೆಯುತ್ತಾರೆ. ನಾನು ಫೀಲ್ ಮಾಡಿಕೊಂಡ್ರೆ ಆಗುತ್ತಾ. ಭಗವಂತ ನನ್ನ ಸೃಷ್ಟಿಸಿರುವುದೇ ಹೀಗೆ. ನನ್ನ ಎತ್ತರವನ್ನು ನಿರ್ಧರಿಸಿದವನು ಅವನೇ. ನಾನೇನು ಮಾಡಿಲ್ಲ. ಕುಮಾರಸ್ವಾಮಿಯವರನ್ನೂ ಕೂಡಾ ದೇವರು ಕರಿಯನನ್ನಾಗಿ ಸೃಷ್ಟಿಸಿದ್ದಾನೆ. ಹಾಗಾಗಿ ಅವರು ಕರ್ರಗಿದ್ದಾರೆ. ನಾನು ಅವರನ್ನು ಬಿಳಿಯ ಎಂದು ಕರೆಯಲಿ ಎಂದು ಸಮರ್ಥಿಸಿಕೊಂಡಿದ್ದಾರೆ.
Discussion about this post