ಬೆಂಗಳೂರು : ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನಗಳು ನಡೆದಿದೆ. ಈ ಸಂಬಂಧ ಅನೇಕ ಶಾಸಕರು, ಸಚಿವರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿ ಪ್ರಯತ್ನವನ್ನೂ ಪ್ರಾರಂಭಿಸಿದ್ದಾರೆ.
ಈ ಭೇಟಿ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಯಾಕೆ ಬದಲಾಯಿಸಬೇಕು ಅನ್ನುವ ಕುರಿತಂತೆ ಹೈಕಮಾಂಡ್ ವಿವರಣೆಗಳನ್ನು ಬಯಸಿದೆ. ಆದರೆ ಯಡಿಯೂರಪ್ಪ ವಿರುದ್ಧ ಸೂಕ್ತ ಆರೋಪಗಳನ್ನು ಹೊರಿಸುವಲ್ಲಿ ನಾಯಕರು ವಿಫಲರಾಗಿದ್ದಾರೆ. ಈ ವೇಳೆ ಬಂಡಾಯ ಬಿಜೆಪಿ ನಾಯಕರು ವಿಜಯೇಂದ್ರ ವಿರುದ್ಧ ಆಕ್ರೋಶವನ್ನು ಹೊರತು ಹಾಕಿದ್ದಾರೆ. ವಿಜಯೇಂದ್ರ ಕಾರಣದಿಂದಲೇ ಬಿಜೆಪಿ ಕಾರ್ಯಕರ್ತರು ನೊಂದು ಹೋಗಿದ್ದಾರೆ. ಸಚಿವರ ಖಾತೆಗಳಲ್ಲೂ ವಿಜಯೇಂದ್ರ ಕೈಯಾಡಿಸುತ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ಸಿಎಂ ಆಗಿ ಮುಂದುವರಿದರೆ ವಿಜಯೇಂದ್ರ ಕಾರು ಬಾರು ಹೆಚ್ಚಾಗುತ್ತದೆ. ಮಾತ್ರವಲ್ಲದೆ ವಿಜಯೇಂದ್ರ ವರ್ತನೆ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ. ಜೊತೆಗೆ ರಾಜ್ಯದಲ್ಲಿ ಕೊರೋನಾ ನಿಯಂತ್ರಿಸುವಲ್ಲೂ ರಾಜ್ಯ ಸರ್ಕಾರ ವಿಫಲವಾಗಿದ್ದು, ಮುಂದಿನ ಚುನಾವಣೆಯಲ್ಲಿ ಮತ ಕೇಳಲು ಕಾರ್ಯಕರ್ತರೇ ಇಲ್ಲದಂತಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಅದ್ಯಾಕೋ ಯಡಿಯೂರಪ್ಪ ಬದಲಾವಣೆಗೆ ಹೈಕಮಾಂಡ್ ಒಲವು ತೋರಿಸಿಲ್ಲ. ಬಿಜೆಪಿ ನಾಯಕರ ಅಸಮಾಧಾನದ ಬಗ್ಗೆ ಕಾಳಜಿ ತೋರಿರುವ ಹೈಕಮಾಂಡ್, ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ನಮಗೆ ಅರಿವಿದೆ. ಕಾರ್ಯಕರ್ತರು ಕೂಡಾ ಬೇಸರಗೊಂಡಿರುವುದು ಈಗಾಗಲೇ ಗೊತ್ತಾಗಿದೆ. ಆನ್ ಲೈನ್ ಸಭೆಗಳನ್ನು ಕೇಂದ್ರದ ಪದಾಧಿಕಾರಿಗಳು ನಡೆಸಿದಾಗ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಅದಕ್ಕೆ ಸೂಕ್ತ ಪರಿಹಾರಗಳನ್ನು ಶೀಘ್ರದಲ್ಲೇ ಕೊಡುತ್ತೇವೆ. ವಿಜಯೇಂದ್ರ ಕುರಿತ ಸಮಸ್ಯೆಗಳನ್ನು ಬಗೆ ಹರಿಸುತ್ತೇವೆ. ಮೊದಲು ಕೊರೋನಾ ನಿಯಂತ್ರಣಕ್ಕೆ ನಿಮ್ಮ ಕ್ಷೇತ್ರದಲ್ಲಿ ನೀವು ಕೆಲಸ ಮಾಡಿ. ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕರ್ತರನ್ನು ನೀವೆಷ್ಟು ವಿಶ್ವಾಸಕ್ಕೆ ತೆಗೆದುಕೊಂಡಿದ್ದೀರಿ ಎಂದು ತಿಳಿಸಿ ಎಂದು ವಾಪಾಸ್ ಕಳುಹಿಸಿದ್ದಾರೆ.
ಈ ನಡುವೆ ತಮ್ಮ ವಿರುದ್ಧ ನಡೆದ ಬಂಡಾಯ ಕಾರ್ಯ ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ ನನ್ನ ಮುಂದಿರುವುದು ಕೋವಿಡ್ ನಿಯಂತ್ರಣ. ದೆಹಲಿಗೆ ಹೋದ ನಾಯಕರಿಗೆ ಹೈಕಮಾಂಡ್ ಎನೆಂದು ಉತ್ತರಿಸಿದೆ ಅನ್ನುವುದು ಎಲ್ಲರಿಗೆ ಗೊತ್ತಿದೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ನಾವೆಲ್ಲಾ ಕೆಲಸ ಮಾಡೋಣ ಅಂದಿದ್ದಾರೆ.
Discussion about this post