ಬೆಂಗಳೂರು : ಕೊರೋನಾ ಸೋಂಕು ಮಣಿಸುವ ಸಲುವಾಗಿ ಇನ್ನಿಲ್ಲದ ಹೋರಾಟ ನಡೆಯುತ್ತಿದೆ. ಕೆಲ ದೇಶ ದ್ರೋಹಿಗಳನ್ನು ಹೊರತುಪಡಿಸಿದರೆ, ಮತ್ತೆಲ್ಲರೂ ಕೂಡಾ ಈ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ.
ನಾಳೆಯ ನೆಮ್ಮದಿ ಸಲುವಾಗಿ ಇಡೀ ಭಾರತ ಪಣತೊಟ್ಟಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಕೊರೊನಾ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ವೈದ್ಯರ ಅಗತ್ಯವಿದ್ದರೆ ನಾನು ಕೂಡ ಒಬ್ಬ ವೈದ್ಯನಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಸಿದ್ದನಿದ್ದೇನೆ ಎಂದು ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ನಿಜಕ್ಕೂ ಒಬ್ಬ ಪ್ರಬುದ್ಧ ರಾಜಕಾರಣಿ ಅನ್ನುವುದನ್ನು ಯತೀಂದ್ರ ಸಾಬೀತು ಮಾಡಿದ್ದಾರೆ. ಗ್ರೇಟ್ ಸರ್.
Discussion about this post