ತಾರಾ ದಂಪತಿಯಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಎರಡನೇ ಮಗುವಿಗೆ ಜನ್ಮ ನೀಡಿದ್ದು, ತಾರಾ ದಂಪತಿ ಮನೆಗೆ ಜ್ಯೂನಿಯರ್ ಯಶ್ ಆಗಮನವಾಗಿದೆ.
ತುಂಬು ಗರ್ಭಿಣಿಯಾಗಿದ್ದ ರಾಧಿಕಾ ಅವರು ಬುಧವಾರ ಬೆಳಗ್ಗೆ ಪ್ರಸೂತಿಗಾಗಿ ನಗರದ ಪೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗಂಡು ಮಗುವಿಗೆ ರಾಧಿಕಾ ಜನ್ಮ ನೀಡಿರುವುದು ಯಶ್ ಮತ್ತು ರಾಧಿಕಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
Discussion about this post