ಬೆಂಗಳೂರು : ಕೊರೋನಾ ಬಳಿಕ ಜನರಲ್ಲಿ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿ ಬಂದಿದೆ. ಆದರೆ ಟಿವಿಗಳಲ್ಲಿ ಬರುವ ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತು ಜನರನ್ನು ಸುಲಭವಾಗಿ ಮೋಸ ಮಾಡುತ್ತದೆ. ಅದಕ್ಕೊಂದು ಬೆಸ್ಟ್ ಏಕ್ಸಾಂಪಲ್ ಅಡುಗೆ ಎಣ್ಣೆ.
ವಿವಿಧ ಕಂಪನಿಗಳ ಅಡುಗೆ ಎಣ್ಣೆಯ ಜಾಹೀರಾತು ನೋಡಿದರೆ ಅದ್ಯಾವ ವೈದ್ಯರೇ ಬೇಡ, ಇವರ ಕಂಪನಿಯ ಎಣ್ಣೆಯಲ್ಲಿ ಕರಿದ ತಿಂಡಿ ತಿಂದ್ರೆ ಬೊಜ್ಜು ಬರುವುದೇ ಇಲ್ಲ, ಹೃದಯದ ಸಮಸ್ಯೆ ಕಾಣಿಸಿಕೊಳ್ಳುವುದೇ ಇಲ್ಲ. ಇಂತಹ ಸುಳ್ಳು ಜಾಹೀರಾತುಗಳಿಗೆ ಸಿನಿಮಾ ನಟರ ಸಾಥ್ ಬೇರೆ. ಕಾಸಿನಾಸೆಗೆ ನಟಿಸುವ ಇವರಿಗೂ ಈ ಎಣ್ಣೆಯಿಂದ ಆಗಬಹುದಾದ ಅನಾಹುತದ ಅರಿವು ಇರುವುದಿಲ್ಲ. ಮೂರು ಕೆಜಿ ಶೇಂಗಾ ರುಬ್ಬಿದರೆ ಒಂದು ಕೆಜಿ ಶುದ್ಧ ಎಣ್ಣೆ ಸಿಗುತ್ತದೆ, ಉಳಿದದ್ದು ಹಿಂಡಿ. ದನಗಳಿಗಷ್ಟೇ ಕೊಡಬಹುದು. ಹೀಗಾಗಿ ನೂರು ರೂಪಾಯಿ ಬೆಲೆಯ ಶೇಂಗಾ ಬೀಜಕ್ಕೆ ಏನಿಲ್ಲ ಅಂದರೂ 300 ರೂಪಾಯಿ ಅಸಲು. ಆದರೆ ಮಾರುಕಟ್ಟೆಯಲ್ಲಿ ನೂರು ರೂಪಾಯಿಯ ಅಕ್ಕ ಪಕ್ಕಕ್ಕೆ ಎಣ್ಣೆ ಮಾರಾಟ ಮಾಡಲಾಗುತ್ತಿದೆ. ನಷ್ಟ ಮಾಡಿ ಎಣ್ಣೆ ಮಾರಲು ಅವರಿಗೆ ಹುಚ್ಚು ಹಿಡಿದಿದೆಯೇ ಖಂಡಿತಾ ಇಲ್ಲ. ಅವರ ನಷ್ಟವನ್ನು ಸರಿತೂಗಿಸಲು ಪ್ಯಾರಾಫಿನ್ ಇದೆಯಲ್ವ.
ಹಾಗೇ ನೋಡಿದರೆ ಆರೋಗ್ಯಕ್ಕೆ ಒಂದಿಷ್ಟು ಉತ್ತಮ ಅನ್ನಿಸಿಕೊಂಡಿರುವುದು ಗಾಣದಿಂದ ತೆಗೆದ ಎಣ್ಣೆ, ಕಲಬೆರಕೆ ಇಲ್ಲದ ಗಾಣದ ಎಣ್ಣೆಗಳು ಜೇಬಿಗೆ ಭಾರವಾದರೂ ಆರೋಗ್ಯಕ್ಕೆ ಹಿತವಾಗಿರುತ್ತದೆ. ಹೀಗಾಗಿಯೇ ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಉತ್ಸಾಹಿ ಯುವಕರು ಗಾಣದ ಉದ್ಯಮಕ್ಕೆ ಕೈ ಹಾಕಿದ್ದಾರೆ.
ಈ ಪೈಕಿ ನಾವು ಇವತ್ತು ಪರಿಚಯಿಸುತ್ತಿರುವುದು ಸಾಗರದ ರಾಜೀವ ಮತ್ತು ಮಾಧವ. ಇಬ್ಬರು ಜೊತೆಗೆ ಸೇರಿ ಸಾಗರದಲ್ಲಿ ಮರದ ಗಾಣದ ಎಣ್ಣೆಯ ಉದ್ದಿಮೆಯನ್ನು ಪ್ರಾರಂಭಿಸಿದ್ದಾರೆ. ಮರದ ಗಾಣದ ಎಣ್ಣೆ ಅಂದರೆ ಕೋಲ್ಡ್ ಪ್ರೆಸ್ಡ್ ಆಯಿಲ್. ಅಂದರೆ ಒರಳು ಮತ್ತು ಒನಕೆ ಎರಡೂ ಮರದ್ದೇ ಆಗಿರುವುದರಿಂದ ರುಬ್ಬುವ ಸಂದರ್ಭದಲ್ಲಿ ಘರ್ಷಣೆಯಾಗಿ ಯಾವುದೇ ರೀತಿಯಲ್ಲಿ ಬಿಸಿಯಾಗದೇ ಎಣ್ಣೆಯು ತನ್ನ ಪೋಷಕಾಂಶಗಳನ್ನು ಕಳೆದುಕೊಳ್ಳುವುದಿಲ್ಲ.
ಮೂರು ಲಕ್ಷದ ಮರದ ಎಣ್ಣೆ ಗಾಣವೂ ಸೇರಿದಂತೆ ಐದೂವರೆ ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಈ ಯುವಕರು ದುಬಾರಿ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ‘ಸರಳಾ’ ಬ್ರಾಂಡಿನಲ್ಲಿ ಸದ್ಯಕ್ಕೆ ಕೊಬ್ಬರಿ ಮತ್ತು ಶೇಂಗಾ ಎಣ್ಣೆ ಲಭ್ಯವಿದೆ. ಪ್ರಸ್ತುತ ಒಣ ಕೊಬ್ಬರಿಯನ್ನು ತಿಪಟೂರಿನಿಂದಲೂ, ಶೇಂಗಾ ಬೀಜವನ್ನು ಮಹಾರಾಷ್ಟ್ರದಿಂದಲೂ ಇವರು ತರಿಸುತ್ತಿದ್ದಾರೆ.
ಈಗಾಗಲೇ ಈ ಘಟಕಕ್ಕೆ ಭೇಟಿ ನೀಡಿರುವ ಕೃಷಿ ಬರಹಗಾರ ನಾಗೇಂದ್ರ ಸಾಗರ್ ಸರಳಾ ಬ್ರಾಂಡ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅನುಮಾನವಿಲ್ಲದೆ ಎಣ್ಣೆಯನ್ನು ಖರೀದಿಸಬಹುದಾಗಿದೆ. ಇನ್ನು ಮರದ ಗಾಣದಿಂದ ತೆಗೆಯಲ್ಪಟ್ಟ ಪರಿಶುದ್ಧ ಎಣ್ಣೆ ಬೇಕಾದರೆ ನೀವು ರಾಜೀವ 9449547575 ಮತ್ತು ಮಾಧವ 9449968507 ಅವರನ್ನು ಸಂಪರ್ಕಿಸಬಹುದು.
ಈ ಲೇಖನಕ್ಕೆ ಇನ್ ಪುಟ್ ಮತ್ತು ಫೋಟೋಗಳನ್ನು ನಾಗೇಂದ್ರ ಸಾಗರ್ ಅವರ ಫೇಸ್ ಬುಕ್ ನಿಂದ ಪಡೆಯಲಾಗಿದೆ.
Discussion about this post