ಜಿನೀವಾ : ಪ್ರತೀ ವರ್ಷ ವಿಶ್ವದ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗುತ್ತಿರುವ ಮಲೇರಿಯಾ ರೋಗದ ವಿರುದ್ಧದ ಹೋರಾಟಕ್ಕೆ ಇದೀಗ ದೊಡ್ಡ ಜಯ ಸಿಕ್ಕಿದೆ. ವಿಜ್ಞಾನಿಗಳು ಸಂಶೋಧಿಸಿದ ಮಸ್ಕಿರಿಕ್ಸ್ (Mosquirix)’ ಹೆಸರಿನ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಅನುಮೋದನೆ ದೊರೆತಿದೆ.
ಗ್ಲ್ಯಾಕ್ಸೊಸ್ಮಿತ್ಕ್ಲೈನ್ ಕಂಪನಿಯು ಮಲೇರಿಯಾ ತಡೆಗಟ್ಟುವ ಈ ಹೊಸ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ಲಸಿಕೆಯ ಕ್ಲಿನಿಕಲ್ ಪ್ರಯೋಗದ ಮೊದಲ ವರ್ಷ ಹಲವು ರೀತಿಯ ಮಲೇರಿಯಾಗಳನ್ನು ಶೇ 50ರಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಿದೆ.
ಕ್ಲಿನಿಕಲ್ ಪ್ರಯೋಗದ ವೇಳೆ 5 ವರ್ಷ ಒಳಗಿನ ಮಕ್ಕಳಿಗೆ ‘ಮಸ್ಕಿರಿಕ್ಸ್ ಲಸಿಕೆಯ ಮೂರು ಡೋಸ್ ನೀಡಲಾಗಿದೆ. 18 ತಿಂಗಳ ಬಳಿಕ ನಾಲ್ಕನೇ ಡೋಸ್ ನೀಡಲಾಗಿದ್ದು, ಕೀನ್ಯಾ, ಮಾಲಾವಿ ಮತ್ತು ಘಾನಾದಲ್ಲಿ ಟ್ರಯಲ್ ನಡೆದಿದೆ. ಈಗಾಗಲೇ 23 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಹಾಕಲಾಗಿದ್ದು, 8 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
RTS,S #malaria vaccine was introduced in a pilot programme two years ago.
— World Health Organization (WHO) (@WHO) October 6, 2021
Since then, more than 2.3 million doses of the vaccine have been administered across Ghana, Kenya and Malawi https://t.co/xSk58nTIV1#VaccinesWork pic.twitter.com/jfvn5ESxPe
ಅನಾಫಿಲಿಸ್ ಸೊಳ್ಳೆ ಕಡಿತದಿಂದ ಮನುಷ್ಯನ ದೇಹ ಸೇರುವ ಪ್ಲಾಸ್ಮೋಡಿಯಾ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮಾರಣಾಂತಿಕವಾದ ಫಾಲ್ಸಿಪರಮ್ ಮಲೇರಿಯಾ ತರುತ್ತದೆ.
ಸಂಶೋಧನೆಗಳ ಪ್ರಕಾರ, ಪ್ರತಿ ವರ್ಷ ಸುಮಾರು 5,00,000 ಮಂದಿ ಮಲೇರಿಯಾಗ ಬಲಿಯಾಗುತ್ತಾರೆ. ಇದರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,60,000ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. ಹಾಗೂ ಆಫ್ರಿಕಾ ದೇಶಗಳಲ್ಲೇ ಅತೀ ಹೆಚ್ಚು ಸಾವು ಸಂಭವಿಸುತ್ತದೆ. ಇಲ್ಲಿ ಪ್ರತಿ ವರ್ಷ ಒಬ್ಬ ವ್ಯಕ್ತಿ ಆರು ಬಾರಿ ಮಲೇರಿಯಾ ರೋಗಕ್ಕೆ ಒಳಗಾಗುತ್ತಾನಂತೆ.
Discussion about this post