ವಯನಾಡಿನಲ್ಲಿ ಪ್ರಾಣ ಒತ್ತೆ ಇಟ್ಟು ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಸೇನಾ ಪಡೆ
ಭೂಕುಸಿತ ಸಂಭವಿಸಿ ನಲುಗಿ ಹೋಗಿದ್ದ ಕೇರಳದ ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಸೇನಾ ಕಾರ್ಯಾಚರಣೆ ಅಂತ್ಯಗೊಂಡರೂ ರಾಜ್ಯ ವಿಪತ್ತು ನಿರ್ವಹಣಾ ದಳ, ಪೊಲೀಸರು ಮತ್ತು ಇತರ ಸಂಘಟನೆಗಳು ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿಸಲಿದೆ. ಇವರೊಂದಿಗೆ ಎನ್ಡಿಆರ್ಎಫ್, ಅಗ್ನಿಶಾಮಕ ದಳವೂ ಕೈ ಜೋಡಿಸಲಿದೆ.
#WayanadLandslide
— PRO Defence Kochi (@DefencePROkochi) August 8, 2024
Watch | Emotional send-off to #IndianArmy personnel from people of all walks of life at #Wayanad.
Grateful for our brave heroes who risked everything during the landslide #RescueOps.
Your courage & sacrifice won't be forgotten…#WeCare🇮🇳@giridhararamane pic.twitter.com/u2csEIo5r7
ಇನ್ನು ಕಳೆದ 10 ದಿನಗಳಿಂದ ಅವಶೇಷಗಳ ಅಡಿಯಲ್ಲಿ, ಬೆಟ್ಟ ಗುಡ್ಡಗಳಲ್ಲಿ ಸಿಲುಕಿದ್ದ ಜನರ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸಿದ್ದ ಸೇನಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಗಿದೆ.
#WayanadLandslide
— PRO Defence Kochi (@DefencePROkochi) August 8, 2024
Soldiers of #122 Inf Bn of #TerritorialArmy being felicitated by Teachers & staff of MountTabor School where the RescueTeams for #Wayanad were accomodated.#HeroesInUniform
𝔹𝕙𝕒𝕣𝕒𝕥 🇮🇳 𝕄𝕒𝕥𝕒 𝕂𝕚 𝕁𝕒𝕚 !!!@giridhararamane @IaSouthern@SpokespersonMoD pic.twitter.com/UsCKBlXznH
ಸಾವಿರಾರು ಜನರನ್ನು ರಕ್ಷಣೆ ಮಾಡಿದ ಯೋಧರನ್ನು ಜನ ಚಪ್ಪಾಳೆ ತಟ್ಟಿ, ಸೆಲ್ಯೂಟ್ ಹೊಡೆದು, ಹೂಮಳೆ ಸುರಿಸಿ, ಜೈಕಾರ ಕೂಗಿ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
This emotional farewell in Wayanad stands as a testament to the strong bond between the Indian Army and the people it serves, reminding everyone of the invaluable role these brave men and women play in times of crisis.